ನಮನ
- ಬಿ.ಎಚ್. ಚಂದ್ರಶೇಖರ, ಬೆಂಗಳೂರು .
[email protected]
ನಿನ್ನ ಮಕ್ಕಳ ಪ್ರತಿಭಾ -ಕುವೆಂಪು.
ಬಿಡಿ ನೀವ್ ಆಂಗ್ಲ ವ್ಯಾಮೋಹ ಪೂರ್ಣ
ಎಂದೇನಿಲ್ಲ, ಇರಲಿ ಪ್ರೀತಿ ಅದಕೂ, ಆದರೂ
ಬಿಡದಿರಲಿ ಕನ್ನಡ ತಾಯ್ ಮೇಲಿನ ಪ್ರೀತಿ, ಭಕುತಿ
ಎಂದರು ಕುವೆಂಪು, ಬೀರಿದರು ಕನ್ನಡದಾ ಕಂಪು
ಏನು ಬಿಡು ಎಂದರೂ ಬಿಡಲೊಲ್ಲೆನಯ್ಯ
ಕನ್ನಡದ ಮಮತೆಯ ಬಿಡಲೊಲ್ಲೆನಯ್ಯ -ಕುವೆಂಪು.
ಕನ್ನಡವೇ ಸತ್ಯ, ಕನ್ನಡವೇ ನಿತ್ಯ ಎಂದು
ಉಸಿರಲಿ ಬೆರೆತ ಕನ್ನಡವನು ನಾನು
ಬಿಡಲೊಲ್ಲೆನಯ್ಯ, ಎಂದೇ ಹೇಳಿದರು
ತಾವ್ ಕುವೆಂಪು, ಬೀರಿದರು ಕನ್ನಡದಾ ಕಂಪು
ಪಾರು ಮಾಡಮ್ಮ ನೀ ಇಂಗ್ಲೀಷಿನಿಂದ
ಪೂತನಿಯ ಅಸುವೀಂಟಿ ಕೊಂದ ಗೋವಿಂದ -ಕುವೆಂಪು.
ಮಗುವೇ ಹೋರಾಡು ನೀನ್ ಕನ್ನಡಕೆ
ಕನ್ನಡತಾಯಿಗೆ ನೀನ್ ಬೇಕು, ಕನ್ನಡಾಂಬೆಯ
ನೀವ್ ರಕ್ಷಿಪ ಬೇಕು, ಅದುವೇ ಬೆಳಕು
ಮರೆಯಬೇದೆಂದರು ಕುವೆಂಪು, ಬೀರಿದರು ಕನ್ನಡದಾ ಕಂಪು
ಕನ್ನಡ ಎನೆ ಕುಣಿದಾಡುವುದೆನ್ನೆದೆ
ಕನ್ನಡ ಎನೆ ಕಿವಿ ನಿಮಿರುವುದು । -ಕುವೆಂಪು.
ನಲಿದಾಡಲಿ ನುಡಿ-ಕನ್ನಡ ನಾಲಿಗೆಯಲಿ,
ಕೇಳಿಬರಲಿ ಕನ್ನಡ ದಿಕ್ಕುದಿಕಿನಲಿ
ಕುಣಿದಾಡುವ ನಾವ್, ನಲಿದಾಡುವ ನೀವ್,
ನುಡಿದರು ಕುವೆಂಪು, ಬೀರಿದರು ಕನ್ನಡದಾ ಕಂಪು
ನೀ ಮುಟ್ಟುವ ಮರ - ಶ್ರೀಗಂಧದ ಮರ
ನೀ ಕುಡಿಯುವ ನೀರ್, ಕಾವೇರಿ -ಕುವೆಂಪು.
ದೇಶ, ವೇಶ ಯಾವುದಾದರೇನ್? ನಿನ್ನ ಕಸುಬು,
ನೌಕರಿ ಯಾವುದಾದರೇನ್? ಎಲ್ಲಿದ್ದರೇನ್? ತಿಳಿ
ಅದನೆ, ಕರ್ನಾಟಕ, ಕನ್ನಡ-ಕಸ್ತೂರಿ, ಚಿತ್ತವೆಲ್ಲ
ಪಸರಿಸಿರೆಂದರು ಕುವೆಂಪು, ಬೀರಿದರು ಕನ್ನಡದಾ ಕಂಪು
ದೀಕ್ಷೆಯ ತೊಡು ಇಂದೇ।
ಕಂಕಣ ಕಟ್ಟಿಂದೇ, ಕನ್ನಡ ನಾಡೊಂದೇ -ಕುವೆಂಪು.
ಭಾಷೆಯ ಕೊಡು, ದಿಟ್ಟಿ ಇಡು, ಅದು
ಕನ್ನಡವೊಂದೇ, ಕರ್ನಾಟಕವೊಂದೇ,
ಧಮನಿ-ಧಮನಿಯಲಿ ಕನ್ನಡ ಮಾತೊಂದೇ
ತುಂಬಿರಲೆಂದರು ಕುವೆಂಪು, ಬೀರಿದರು ಕನ್ನಡದಾ ಕಂಪು
ಜೈ ಭಾರತ ಜನನಿಯ ತನುಜಾತೆ।
ಜಯ ಹೇ ಕರ್ನಾಟಕ ಮಾತೇ । -ಕುವೆಂಪು.
ತಾಯೆ ಭಾರತಿ, ಕನ್ನಡ ಮಾತೇ,
ನೀ-ಎನ್ನ ಮಾತೇ, ನೀ ನಮ್ಮ ಮಾತೇ,
ಕರ್ನಾತಕ ಮಾತೇ, ಜೈ ಜೈ ಮಾತೇ
ನಮಿಸುವೆನೆಂದರು ಕುವೆಂಪು, ಬೀರಿದರು ಕನ್ನಡದಾ ಕಂಪು
(ಕುವೆಂಪು ಶತಮಾನೋತ್ಸವದ ನೆನಪಿಗಾಗಿ. ಡಿಸೆಂಬರ್ 2004)
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications