Get Updates
Get notified of breaking news, exclusive insights, and must-see stories!

ಯಾರಿಗೆ ಯಾರು ಸರಿಸಾಟಿ ?


?Chandragowda Kulakarni

ಭರತ ಖಂಡದ ಜೋಡಿ ದೇಶಗ-
ಳಾಟದ ಸ್ಪರ್ಧೆ ಬಲು ಜೋರು !
ಎಲ್ಲ ಕೆಲಸವ ಅಲ್ಲೆ ಬಿಟ್ಟು
ಟಿ.ವಿ.ಯ ಮುಂದೆ ಹಾಜರು !

ಭಾರತ ಪಾಕ್‌ ಕ್ರಿಕೆಟ್‌ ಆಟದಿ
!
ಕುಂಬ್ಳೆ ಕಾರ್ತಿಕ ಸ್ಪಿನ್‌ ಮೋಡಿಗೆ
ಸಕ್ಲೇನ ನೀಡುವ ಪೈಪೋಟಿ !

ಅಗರ್‌ಕರ್‌ ಇರ್ಫಾನ್‌ ಜಹೀರ್‌ ದಾಳಿ
ಅಕಾಲ ವರ್ಷದ ಬಿರುಗಾಳಿ !
ಸಚಿನ್‌ ಸೆಹವಾಗ್‌ ಸೌರವ ಪಡೆಗೆ
ನಡುಗಲೇ ಬೇಕು ಎದುರಾಳಿ !

ಅಖ್ತರ್‌ ಸಮಿ ಶಬ್ಬೀರ್‌ ರಭಸಕೆ
ದಾಂಡಿಗರೆದೆಯೇ ಗಡಗಡ !
ಇಂಜಮಾಮ್‌ ಯಾಹಾನಾ ಸಾಹಸಕೆ
ಬೌಲರ್‌ ಎದೆಯಲಿ ದಡಬಡ !

ಸ್ನೇಹದ ಸೇತುವೆ ಆಗಲಿ ಆಟವು
ಎಲ್ಲರ ಹೃದಯವು ಅರಳಲಿ !
ಯಾರೆ ಗೆದ್ದರು ಈ ಸ್ಪರ್ಧೆಯಲಿ
ಕ್ರಿಕೆಟ್‌ಗೆ ಜಯವನು ಸಾರಲಿ !


ಮುಖಪುಟ / ಸಾಹಿತ್ಯ-ಸಂಸ್ಕೃತಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+