ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏನಿದ್ದರೇನು ಶಿವಾ !!

By Staff
|
Google Oneindia Kannada News
ಪಾಲಿಗೆ ಇದ್ದದ್ದು ಮನ ಒಪ್ಪದೇ
ಇಲ್ಲದ್ದಕ್ಕೆ ತುಡಿಯುವದು ಜೀವ
ಧರೆಗೆ ಆಕಾಶದ ಚಪ್ಪರ ಹಾಕಿಸಿ
ಕೈಗೆಟುಕದಂತೆ ಚಿಕ್ಕೆಗಳ ಮೇಲಿಟ್ಟುಬಿಟ್ಟೆ.
ಎಂಥ ಮಾಯೆ ಹಿಡಿಸಿಬಿಟ್ಟೆ ನೀ ಶಿವಾ !!

ಬಾರದವರು ಎತ್ತ ಹೋದರೋ
ನೋಂಪಿ ಹಿಡಿದು ಜಪ್ಪಿಸಿದೆ ಮನ
ನೋಟಹಾದಿಯಾಗಿ ವರುಷಗಳೇ ಕಾದವು
ಬರದವರು ಬಂದಾರೆಂಬ ಹುಚ್ಚು ನೆಚ್ಚಿಗೆ
ಎಂಥ ಮರಳುರೋಗ ಹಿಡಿಸಿಬಿಟ್ಟೆ ಶಿವಾ !!

ಆಕಳಿಕೆ ಬಿಕ್ಕಳಿಕೆ ಒಂಟಿ ಸೀನಿಗೂ
ಮರೆತವರು ನೆನೆದಾರೆಂಬ ಹುಸಿಭ್ರಾಂತಿ
ಅಡ್ಡಗೋಡೆಯ ಮೇಲಿಟ್ಟ ದೀಪದಂತೆ
ಕರುಳುಹೊತ್ತಿ ಉರಿಯುವದು ಜೀವ
ಎಂಥ ಲಾಲಸೆಯ ಹೊತ್ತಿಸಿಬಿಟ್ಟೆ ಶಿವಾ !!

ಏನು ಓದಿಕೊಂಡರೇನು ಬಂತು ?
ಏನು ಬರೆದುಕೊಂಡರೆಷ್ಟು ಬಿಟ್ಟರೆಷ್ಟು
ನೀನೇ ಇಲ್ಲದಿದ್ದಮೇಲೆ ಏನಿದ್ದರೇನು ?
ಹಿತ್ತಲು ತುಂಬ ಬೆಳದಿಂಗಳು ಚೆಲ್ಲಿದರೇನು?
ಎಂಥಾ ತಂಪೊಡಲಲಿ ಕಿಚ್ಚು ಬಚ್ಚಿಟ್ಟೆ ಶಿವಾ ..!

ಬುದ್ಧನಂತಾ ಮನಸ್ಥಿತಿ ಕೊಡು ದೇವ
ಕಿಸಾಗೌತಮಿಯ ಒಳಜ್ಞಾನದ ಅರಿವು ಕೊಡು
ಮೋಹ-ವ್ಯಾಮೋಹಗಳನೂ ಕಿತ್ತೆಸೆದು ಬಿಡು.
ಲೋಕದಾಚೆಗಿನ ಅಲೌಕಿಕದ ಬೆಳಕ ನೀ ತೋರು,
ಇನ್ನೇನ ಬೇಡಲಿ ನಾ ಹುಲುಮಾನವನಯ್ಯಾ ಶಿವಾ...!!!


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X