Get Updates
Get notified of breaking news, exclusive insights, and must-see stories!

ಸಾಂತ್ವನ

ಓ ಗೆಳತೀ ನಿನಗೊಮ್ಮೆ ಅಳುವಂತಾದರೆ
ಮರೆಯದೇ ಕರೆ ಎನ್ನ.
ತಪ್ಪದೇ ನಾ ಬಂದು
ನಿನ್ನ ಅಳು ನಿಲ್ಲಿಸಿ ನಕ್ಕೇ
ನಗಿಸುವೆ ಎಂಬಾಸೆ ಬೇಡ,
ಆದರೆ ಖಂಡಿತ ನಾನೂ ಕಣ್ಣೀರಿಡುವೇ
ನಿನ್ನ ಜೊತೆಗೂಡಿ !

ಓ ಗೆಳತೀ
ನಿನಗೊಮ್ಮೆ ಎಲ್ಲಾದರೂ ಓಡಿ
ಹೋಗಬೇಕೆಂದಾದರೆ
ಯೋಚಿಸದೇ ಕರೆ ಎನ್ನ
ತಪ್ಪದೇ ನಾ ಬರುವೆ,
ತಡೆಯಲಾರೆ ನಿನ್ನ
ಓಡಬೇಡ ಎಂದು,
ಆದರೆ ಓಡುವೆ ಖಂಡಿತ
ನಾನೂ ನಿನ್ನ ಜೊತೆಗೂಡಿ!!

ಓ ಗೆಳತೀ
ನಿನಗೊಮ್ಮೆ ಯಾರಾದರೂ
ನಿನ್ನ ಮಾತ ಕೇಳಬೇಕೆನಿಸಿದರೆ
ಚಿಂತಿಸದೇ ನೆನೆ ಎನ್ನ .
ನಾ ಬಂದು ಎನ್ನ
ಮಾತ ನಿನಗೆ ಕೇಳಿಸದಿದ್ದರೂ
ತಪ್ಪದೇ ಕೂರುವೆ ನಿನ್ನೆದುರು
ಏನೂ ಮಾತಾಡದೇ !!!

ಓ ಗೆಳತೀ
ನಿನಗೊಮ್ಮೆ ಏನಾದರೂ
ನನ್ನೊಲವಾಸರೆ ಬೇಕೆನಿಸಿದರೆ
ಅಳುಕದೇ ಕರೆಯೆನ್ನ.
ನಾ ಬರುವೆ ತಪ್ಪದೇ
ನೀಡದಿದ್ದರೂ ಎನ್ನ ಒಲವ ಸೆರೆ,
ಖಂಡಿತ ನೀಡುವೆ ಎನ್ನ ಹೆಗಲಾಸರೆ!!


ಮುಖಪುಟ / ಸಾಹಿತ್ಯ-ಸಂಸ್ಕೃತಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+