ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀನಿಲ್ಲದ ನನ್ನ ಮನೆ....

By Staff
|
Google Oneindia Kannada News
ಬಾಯಾರಿ ಬಿಕ್ಕಳಿಸಿದರೂ
ನೀರ ಕುಡಿಯಲಾರೆ...

ಹಸಿವು ಹೊಟ್ಟೆಯ ಹಿಂಡಿದರೂ
ಒಂದು ತುತ್ತೂ ತಿನ್ನಲಾರೆ...

ಹೂದೊಟಕೆ ಹೊರಡಬೇಕೆನಿಸಿದರು
ಒಂದು ಹೆಜ್ಜೆಯನಿಡಲಾರೆ...

ತಾರೆಗಳೆಣಿಸಲು ತಲೆಯೆತ್ತಿದರೂ, ಬರೀ ಭೂಮಿ
ಆಗಸವನ್ನೂ ಕಾಣಲಾರೆ...

ಎನ್ನರಸಿ,
ನೀನಿಲ್ಲದ ಒಂದು ದಿವಸ
ಹೆಂಡದ ಹೊಳೆಯಲ್ಲಿ ನೆಂದು
ಮಿಂದು ‘ಟೈಟ್‌’ ಆಗುವ ಸದವಕಾಶ!
ಮತ್ತೆಂದು ತವರಿಗೆ ನಿನ್ನ ಪ್ರವಾಸ ?!

(ಕವಿತೆ ಹುಟ್ಟಿದ ಸಮಯ : ನನ್ನ ಮಿತ್ರನ ಹೆಂಡತಿ ತವರಿಗೆ ಹೋಗಿದ್ರು. ಅವ ಬಾಳ ಬೆಜಾರ್‌ ಮಾಡ್ಕ್‌ಂಡಿದ್ದ. ಅದಿಕ್ಕೆ ಈ ಕವನ ಬರೆದು, ಇದನ್ನ ನಿಮ್ಮ ಹೆಂಡ್ತಿಗೆ ತೋರ್ಸು, ಇನ್ನಾ ್ಯವತ್ತು ನಿನ್ನ ಬಿಟ್ಟು ಆಕಿ ತವರಿಗೆ ಹೋಗೊಲ್ಲ ಅಂತ ಹೇಳ್ದೆ. ನೀವ್‌ ಏನಂತೀರಿ?)


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X