ತಹಸೀಲ್ದಾರನ ಜೀಪ್

ಶಾಂತಾರಾಮ ಚಿಪಳೂಣ್ಕರ್, ಬಂಟ್ವಾಳ
(ಕ್ಯಾಂಪ್: ಫೀನಿಕ್ಸ್, ಅರಿಜೋನಾ)
ತಹಸೀಲ್ದಾರನ ಜೀಪ
ಕೆಟ್ಟು ನಿಂತಿದೆ ಅದೊಂದು
ಮಹಾ ಶಾಪ
ಸಿಡುಕ ಡ್ರೈವರ
ಕುಡುಕ ಕ್ಲೀನರ
ವಾಕರಿಕೆ ಬರುವಂಥ ರೂಪ
ರಿಪೇರಿ ಮಾಡಿಸಲು ಇಲ್ಲ ಅನುಮತಿ
ಅನುಮತಿ ಸಿಕ್ಕಾಗ ಬಜೆಟ್ ಕೊರತೆ
ಅದೂ ಇದೂ ಕಿತಾಪತಿ
ಬಜೆಟ್ ಸ್ಯಾಂಕ್ಷನ್ ಆಗಿ
ಗ್ಯಾರೇಜಿಗೆ ಹೋದಾಗ
ಅಲ್ಲಿ ಮೆಕ್ಯಾನಿಕನದು ಅದೇ ರಾಗ
"ಹಳೇ ಬಾಕಿ" ಕೊಡಿ ಎಂಬುವನು ಆಗ
ಹೊಸ ಜೀಪು ಖರೀದಿಯ ಯೋಜನೆ
ಅರ್ಜಿಯ ಬಗ್ಗೆ ಮೇಲಿಂದಮೇಲೆ ವಿಚಾರಣೆ
ಕೆಂಪುಪಟ್ಟಿಯ ಒಳಗೇ ಬೆಳೆಯಿತು ಕಡತ
ಬೆಳೆದು ಬಲಿಯಿತು ಬಲಿತು ಬೆಳೆಯಿತು
ಬೆಳೆದ ಕಡತವ ಹೊರಲು
ಮತ್ತೊಂದು ಜೀಪೇ ಬೇಕು ಖಂಡಿತ!
ಕೊನೆಗೊಮ್ಮೆ ಹೊಸ ಜೀಪು ಬಂದಾಗ
ತಹಸೀಲ್ದಾರನಿಗೆ ಹತ್ತಿ ಹೊರಡುವ ತವಕ
ಆಗಲೇ ಎ.ಸಿ (ಅಸಿಸ್ಟೆಂಟ್ ಕಮಿಷನರ್) ಹೇಳಿಕಳಿಸಿದ....
ಹೊಸ ಜೀಪು ನನಗಿರಲಿ... ವರ್ಗವಾಗುವ ತನಕ!












Click it and Unblock the Notifications