ಡ್ರೀಮ್ನೊಳಗಂದು ಎಚ್ಚರ
(ಮಮ್ಮಿ ಮಕ್ಕಳ ಸಂವಾದ)
- ಚಿಂತಾಮಣಿ ಕೊಡ್ಲೆಕೆರೆ
‘ನಾನು ಕನ್ನಡದ ತಾಯಿ. ಬರಲೆ ತಂದೆ?’
ಕಮಿನ್ ಕಮಿನ್ ಹಹಾ ಗೆಟಿನ್ ಒಳಗೆ
ಏನು ಪ್ರಾಬ್ಲಂ ಯಾಕೆ ಬಂದೆ ಬಳಿಗೆ?
ಹೇಗಿರುವೆ ಬಂಗಾರ, ಸಿಂಗಾರ, ಸಿರಿಯೆ?
ನನ್ನ ಕನ್ನಡ ನಾಡಿಗೆಲ್ಲ ನೀ ದೊರೆಯೆ!
ನೀನಿರಲು ನನಗೇನು ಬೇಕಪ್ಪ , ಹೇಳು!
ಎಲ್ಲ ಸೆಂಟಿಮೆಂಟಲ್! What is this ಗೋಳು?
ಏನೆಂದೆ ಕಂದಯ್ಯ- ವಾತ್ಸಲ್ಯ ಸುಳ್ಳೆ?
ವಾತ್ಸಲ್ಯ! I don’t know! ಲವ್ ಮಾತ್ರ ಬಲ್ಲೆ !
ವಾತ್ಸಲ್ಯ, ಲವ್ ಎಲ್ಲ ಪ್ರೇಮರಾಗ
ನಿನಗೆ ಬಡಿದಿದೆ ಮಗೂ ಆಂಗ್ಲರೋಗ!
ಈಗ ಬಂದಿಹುದೇಕೆ, ಏನು ವಿಷಯ?
ನೋಡಬಂದೆನು ನನ್ನ ಇಂಗ್ಲೀಷ್ ಸೊಸೆಯ
You have anything to ask, ಏನಾದರೊಂದು?
ಕೇಳಿದರೆ ಕೇಳಿದುದ ಕೊಡುವೆಯಾ ಇಂದು?
‘ಟೆಲ್ಮೀ ಮಮ್ಮೀ ನಿನಗೆ ಬೇಕಾದುದೇನು?’
‘‘ಒಮ್ಮೆಯಾದರೂ ‘ಅಮ್ಮಾ’ ಎಂದುಲಿವೆಯೇನು’’
(ಅಂಬಿಕಾತನಯದತ್ತರ ‘ಕನಸಿನೊಳಗೊಂದು ಕನಸು’ ಕವಿತೆಯ ಬಳಿಕ ಕನ್ನಡ ತಾಯಿ ಮತ್ತೊಬ್ಬ ಕವಿಗೆ ದರ್ಶನವಿತ್ತ ಸಂದರ್ಭ)
More From
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications