ತಂಬೂರಿಯಾಗುತ್ತಾರೆ...
- ಚಂದ್ರಗೌಡ ಕುಲಕರ್ಣಿ
[email protected]
ಹತ್ತರಲಿ ಹನ್ನೊಂದಾಗುವರು ;
ಭವದ ಕೋಟಲೆಗೆ ಸಿಕ್ಕಿ
ನರಳಿ ನುಗ್ಗಾಗುವರು ;
ಮಕ್ಕಳು ಮರಿ ಆಸ್ತಿ ಪಾಸ್ತಿಗಾಗಿ
ಹಪಹಪಿಸಿ ದುಡಿದವರು ;
ಅಲ್ಲಿಗೂ ಸಲ್ಲದೆ ಇಲ್ಲಿಗೂ
ಸಲ್ಲದೆ ಅಂತರ- ಬೆಂತರಗಳಾಗುವರು !
ಮರೆತು ಹೋಗುತ್ತಾರೆ
ಮರೆಯಾದ ಕೆಲ ಗಳಿಗೆಯಲ್ಲಿಯೆ
ಮರೆತೇ ಹೋಗುತ್ತಾರೆ.
ಕೆಲವರು ಮರೆತು
ಹೋಗುತ್ತಾರೆ!
ನಮ್ಮ ನಿಮ್ಮನ್ನೆಲ್ಲ
ಆಸ್ತಿ ಅಂತಸ್ತನೆಲ್ಲ
ಮರೆತು
ಹೋಗುತ್ತಾರೆ !
ಕರುಳಬಳ್ಳಿ ರಾಗ ಅನುರಾಗಗಳನೆಲ್ಲ
ಕಿತ್ತೊಗೆದು
ಏನೇನೂ ಗೊತ್ತಿಲ್ಲದವರಂತೆ
ಅಚ್ಚರಿ ಮೂಡಿಸಿ
ಮರೆತು ಹೋಗುತ್ತಾರೆ.
ಮರೆತೆನೆಂದರೂ
ಮರೆಯದ ಕೆಲವರಿರುತ್ತಾರೆ
ನಮ್ಮ ನಡೆ-ನುಡಿಯಲ್ಲಿ
ಬೇರೂರುತ್ತಾರೆ ;
ಆಳಕಿಳಿಯುತ್ತಾರೆ ;
ರಾಗ-ಭೈರವಿಯಲ್ಲಿ
ಲೀನವಾಗುತ್ತಾರೆ ;
ಭೈರವಿ-ಮಂಗಲವೋ ?
ಓಂ ನಮವೋ ?-ಎಂದು
ಗೊಂದಲಗೊಳಿಸಿ
ಆದಿಯಿಂದ ಅನಾದಿವರೆಗೆ
ವ್ಯಾಪಿಸಿಬಿಡುತ್ತಾರೆ ;
ಇಲ್ಲಿ ಸಂದು
ಅಲ್ಲಿಯೂ ಸಲ್ಲುವ
ಮಾದರಿಗಳಾಗುತ್ತಾರೆ ;
ತಮಂಧದ ಕೇಡಡಗಿಸಲು
ಜ್ಯೋತಿಯಾಗುತ್ತಾರೆ ;
ಅವಲೋಹವನಪ್ಪಿ
ಚಿನ್ನವಾಗಿಸುತ್ತಾರೆ ;
ಮಧುರ ಆಲಾಪನೆಗೆ
lt;br/>
(ಪಂ. ಪಿ. ಎ. ಸಾಲಿಮಠ ಅವರಿಗೆ ಸಲ್ಲಿಸಿದ ನುಡಿ ವಂದನೆ)
More From
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications