ಇಲ್ಲ... ಇಲ್ಲ
- ವಿ. ಲಕ್ಷ್ಮಿಕಾಂತ್
[email protected]
ಖಂಡಿತವಾಗಿಯೂ ಇಲ್ಲ
ನಾಡು ಭಾಷೆಯ ಬಗ್ಗೆ ಆಭಿಮಾನ.
ಅಂದೂ ಇರಲಿಲ್ಲ. ಈಗಲೂ ಇಲ್ಲ...
ಇದಕ್ಕೆ ಬೇಕೇ ಪುರಾವೆ ?
ಅಯ್ಯೋ ಅದಕ್ಕೇನೂ ಸಾಕಷ್ಟಿವೆ..!
ಕನ್ನಡದಲ್ಲಿ ಕತೆಗಳಿಲ್ಲ,
ಕತೆಗಳಿಲ್ಲ ಎಂಬುದು ನಮ್ಮ
ನಿರ್ಮಾಪಕರ ಕೊರಗು. ನನ್ನ
ಪ್ರಕಾರ ನಮ್ಮ ನಿರ್ಮಾಪಕರಿಗೆ
ಕತೆ ಹುಡುಕುವ ವ್ಯವದಾನವೇ ಇಲ್ಲ.
ಇರುವ ಕತೆಗಾರರಿಗೆ ಬೆಲೆಯೇ ಇಲ್ಲ.
ಕನ್ನಡದಲ್ಲಿ ನಾಯಕಿಯರಿಲ್ಲ
ನಾಯಕಿಯರಿಲ್ಲ ಎಂಬುದು ನಮ್ಮ
ನಿರ್ಮಾಪಕರ ಕೊರಗು. ನೋಡುವ
ಕಣ್ಣು ಸರಿ ಇದ್ದಿದ್ದರೆ ಇವರಿಗೆ ಅಂದ
ಕಾಣಿಸುತ್ತಿತೇನೋ! ಅಂದ-ಚೆಂದಗಳಿಗೂ
ಕರ್ನಾಟಕದಲ್ಲಿ ಬರವೇ ಎಂದು ತಿಳಿಯುತ್ತಿಲ್ಲ.
ಕನ್ನಡದಲ್ಲಿ ಒಳ್ಳೆಯ ಚಿತ್ರಗಳಿಲ್ಲ, ಇಲ್ಲ
ಎಂಬುದು ಕನ್ನಡಿಗರ ಕೊರಗು. ಆದರೆ
ಕಾಲದಿಂದಲೂ ಪರಭಾಷ ಚಿತ್ರಗಳನ್ನು
ಪೋಷಿಸುತ್ತಲೇ, ಉತ್ತಮ ಕನ್ನಡ ಚಿತ್ರಗಳನು
ಸೋಲಿಸುತ್ತಲೇ ಬಂದಿರುವ ಕನ್ನಡಿಗರ
ಮರ್ಮ ಮಾತ್ರ ನನಗೆ ತಿಳಿಯುತ್ತಿಲ್ಲ.
ಅನುಪಮ, ಮಿಂಚಿನ ಓಟ, ಲಾಲಿ, ಹುಲಿಯ,
ಪಲ್ಲವಿ ಅನು ಪಲ್ಲವಿ, ಏಳು ಸುತ್ತಿನ ಕೋಟೆ,
ಮತದಾನ, ಸುಪ್ರಭಾತ, ಮುತ್ತಿನ ಹಾರ, ಹಾಗೂ
ಇನ್ನು ಅದೆಷ್ಟೋ ಉತ್ತಮ ಕನ್ನಡ ಚಿತ್ರಗಳನ್ನು
ಮಾತ್ರ ಕನ್ನಡಿಗರು ಗೆಲ್ಲಿಸಲೇ ಇಲ್ಲ. ಆದರೆ ಕಳಪೆ
ಪರಭಾಷ ಚಿತ್ರಗಳನ್ನು ಮಾತ್ರ ಸೋಲಿಸಲಿಲ್ಲ.
ಇನ್ನು ಕೆಲವು ಉತ್ತಮ ಕನ್ನಡ ಚಿತ್ರಗಳಿಗೆ
ಚಿತ್ರಮಂದಿರಗಳೇ ಇಲ್ಲ,ಬೆಂಗಳೂರಿನಲ್ಲಾಗುವ
ಕನ್ನಡ ಚಳುವಳಿಗೆ ಬಳ್ಳಾರಿ ಜನರ ಬೆಂಬಲವಿಲ್ಲ.
ಮಂಡ್ಯದಲ್ಲಾಗುವ ಗಲಭೆಗಳಿಗೆ ಬೆಂಗಳೂರಿನವರ
ಸಹಕಾರವಿಲ್ಲ. ಇದೆಲ್ಲ ನೋಡುತ್ತಿದ್ದರೆ ನಾವಿರುವ
ಭೂಮಿ ಕರ್ನಾಟಕದಲ್ಲಿದೆಯೇ ಎಂದು ಅನಿಸುತ್ತಿಲ್ಲ.
ರಾಜಕೀಯದಲ್ಲಿ ಅಪ್ಪನ ಕಿರಿಕಿರಿಗಳಿಗೆ ಕೊನೆಯಿಲ್ಲ
ಅಪ್ಪನಂತೆ ಮಗನಿಗೂ ಸ್ವಲ್ಪವೂ ಬುದ್ದಿ ಇಲ್ಲ.
ಇದ್ದಿದ್ದರೆ ಅಂತ, ಬಂಧನ, ಮುತ್ತಿನ ಹಾರ
ಚಿತ್ರಗಳ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು
ವನ್ನು ಕನ್ನಡ ಚಿತ್ರರಂಗದಿಂದ ಬಹಿಷ್ಕಾರ ಹಾಕುವ
ಪ್ರಯತ್ನವನ್ನು ಮಾಡುತ್ತಿರಲಿಲ್ಲ ಆ ಕುಮಾರ ಸ್ವಾಮಿ !
ಇಂದ್ರಜಿತ್ ಎಂಬ ನಿರ್ದೇಶಕನಿಗೆ ತಲೆ ನಿಲ್ಲುತ್ತಿಲ್ಲ..
ತನ್ನ ಮೋನಾಲಿಸ ಚಿತ್ರ ತೆಲುಗಿಗೆ ರಿಮೇಕ್ ಆದ
ಕೂಡಲೆ, ಪರಭಾಷಾ ಚಿತ್ರಗಳು ಕರ್ನಾಟಕದಲ್ಲಿ
ಪ್ರದರ್ಶನ ಕಾಣಲೇಬೇಕು ಎನ್ನುತ್ತಿದ್ದಾನೆ. ಬೇಲಿಯೇ
ಎದ್ದು ಈ ರೀತಿ ಇಲ್ಲಿ ಹೊಲ ಮೇಯುತ್ತಿರುವಾಗ
ಅನಿಸುತ್ತಿದೆ, ನಿಂತ ನೆಲ ಕುಸಿಯಬಾರದೆ ಬೇಗ
ಐವತ್ತು,ನೂರು ವರ್ಷಗಳಿಂದಲೂ ಬೆಂಗಳೂರಿನಲ್ಲೇ
ವಾಸ ಮಾಡುತ್ತಿರುವ ತೆಲುಗು, ತಮಿಳಿನವರು, ಇತ್ಯಾದಿ
ಜನರು ಅದು ಹೇಗೆ ಪರಭಾಷಿಗರಾಗತ್ತಾರೋ ನನಗೆ
ತಿಳಿಯುತ್ತಿಲ್ಲ. ಪರಭಾಷಾ ಚಿತ್ರಗಳ ಗುಣಮಟ್ಟ
ಏನು ಕನ್ನಡಕ್ಕಿಂತ ಮೇಲಿಲ್ಲ. ಆದರೂ ಆ ಚಿತ್ರಗಳಿಗೆ
ಸಿಗುತ್ತಿರುವ ಪ್ರೋತ್ಸಾಹ ಮಾತ್ರ ನಿಲ್ಲುತ್ತಿಲ್ಲ.
ಇಲ್ಲ,ಇಲ್ಲ, ಯಾರಿಗೂ ಇಲ್ಲಿ ಕಾಳಜಿ ಇಲ್ಲ.
ರಾಜ್ ಕ್ಯಾಂಪ್ ಸಹ ರಿಮೇಕ್, ವಿಷ್ಣು ಸಹ ರಿಮೇಕು.
ರವಿಚಂದ್ರನ್ ರಿಮೇಕು, ಸುದೀಪು ರಿಮೇಕು.
ಉದ್ಯಮದ ಉಳಿವಿಗಿಂತ, ಅವರವರ ‘‘ಉಳಿವೇ’’
ಎಲ್ಲರಿಗೂ ಮುಖ್ಯ. ಸ್ವಂತಿಕೆ ತೋರುವ ಸೀತಾರಾಂ,
ದೇಸಾಯಿ ಯಂತಹ ನಿರ್ದೇಶಕರು ಜಾಸ್ತಿ ಇಲ್ಲ.
‘‘ಬಾರಿಸು ಕನ್ನಡ ಡಿಂಡಿಮವ’’ ಎಂದರು ಕುವೆಂಪು ಅಂದು.
ಮೊದಲಿಗೆ, ಬಾರಿಸಬೇಕು ರಿಮೇಕ್ ಮಾಡುವವರನ್ನು ಇಂದು!
More From
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications