ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರ್ಧಚಂದ್ರ

By Staff
|
Google Oneindia Kannada News
ಪೋರರು ಟೈರು ಓಡಿಸಿದಂತೆ ಹುಲಿಯ
ಅಟ್ಟಿಸಿಕೊಂಡು ಹೋಗಿದ್ದ ಹುಡುಗಿ
ನಿನ್ನೆ ಮರಳಿ ಬಂದಳು
ಊರಲ್ಲಿ ಯಾರಿಗೂ ಧೈರ್ಯವಿಲ್ಲ ಅವಳ
ಕಂಡು ಮಾತಾಡಿಸಿ ಬರಲು

ಬೇಕೆಂದೇ ಬಾವಿಗೆ ಬಂದಿದ್ದಾಳೆ ಈಗ
ತನ್ನ ಗಂಡುಮೈಯಲ್ಲಿ ವೈಯಾರದಿಂದಲೇ
ಸೇದಿದ್ದಾಳೆ ಅರ್ಧ ತುಂಬಿದ ಕೊಡ

ಅಲ್ಲಿಂದಲೇ ಕೂಗಿ ಪೋರರ ಕರೆದು
ಬೆನ್ನು ಉಜ್ಜಿಸಿಕೊಂಡಳು
ಸುರಿದುಕೊಂಡು ಅರ್ಧಕೊಡ

ಅರೆಬರೆ ತೊಯ್ಯುತ್ತ ಹೊಳೆಯುತ್ತ
ಹಣೆಯ ಹಚ್ಚೆಯ ಕಪ್ಪು, ಅರ್ಧ ಚಂದ್ರ

ಸಾರ್‌ ಸ್ವಲ್ಪ ಈ ಕಡೆ ಜರುಗಿ ಇನ್ನೇನು
ಆ ಕಡೆ ಅಡ್ಡಾಡುತಾವೆ ಹುಲಿಗಳು
ಎಸ್ಟಿಡಿ ಬೂತು ಝೆರಾಕ್ಸು ಗೋಬಿ ಮಂಚೂರಿ

ಎಲ್ಲ ನೋಡಿಕೊಂಡಿರಾಣ ಈ ಕಡೆ
ಆಕೆ ನಡೆಸಲಿ ಹುಲಿಗಳೊಂದಿಗೆ ತನ್ನ ಸಂಸಾರ ಆ ಕಡೆ

ಕರೆದಂತಾದರೂ ಹೋಗಬೇಡಿ ಆ ಕಡೆ
ವಿತ್‌ ಇದೀರಿ. ನೋಡ್ಕಳಿ ಫ್ಯಾಮಿಲಿ
ಮಗನ ಹೊಸಾ ಪುಸ್ತಕಕ್ಕೆ ಬೈಂಡು
ಮಗಳ ಯೂನಿಫಾರ್ಮಿನ ಚೌಕ ನಿರಿಗೆಗೆ ಇಸ್ತ್ರಿ

ನೋ ನೋಡಬೇಡಿ ಆ ಕಡೆ
ಎಲ್ಲಾ ಸುಳ್ಳು ಅದೇ ಖರೆ ಅನಿಸಿದರೂ ಸಹ
ನೋಡಿದರೇ ಮಾಯವಾಗುವುದು ವಾಸ್ತವ

ಸ್ವಪ್ನದಲ್ಲಿ ಅಳುತ್ತಿದ್ದವರು
ಬೆಚ್ಚಿಕೂತಿದ್ದೀರಿ ಎದ್ದು
ಕಣ್ಣಂಚಿನಲ್ಲಿ ಕಂಬನಿಯಿದೆ ನೋಡಿ
ಹೇಳಿ ಸಾರ್‌ ಈ ಪುಟ್ಟ ಕೋರಾ ಕಂಬನಿ
ಯಾವ ಲೋಕದ್ದು


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X