Get Updates
Get notified of breaking news, exclusive insights, and must-see stories!

ಹನಿ ಹನಿ ಹನಿ

ಚಿನ್ನದಂಥ ಹೆಂಡತಿ !

ನನ್ನ ಹೆಂಡತಿ ಬಹಳಾ SERIOUS
ಸೀರೆ ಬೇಕಾ ಚಿನ್ನ !
ಕೇಳಿದಾಗ ಹೇಳುತ್ತಾಳೆ YES YES

*

ಸಾರಿ ಚಿನ್ನ

ನಾನೊಬ್ಬ ಬಡ ಸಂ+ಸಾರಿ
ಸೀರೆ ಕೊಡಿಸಿರಿ
ಅಂತ ಕೇಳಿದಾಗೆಲ್ಲ ಹೇಳುತ್ತೇನೆ-
ಚಿನ್ನ SORRY SORRY

*

ವಾಹನ ಪುರಾಣ

ಬೆಂಗಳೂರಿನ ರಸ್ತೆ ದಟ್ಟಣೆಯ ಚಕ್ರವ್ಯೂಹದಲ್ಲಿ
ಮುನ್ನುಗ್ಗುತ್ತಾ ಹಿಂದಿರುಗದವನೇ ಅಭಿಮನ್ಯು,
ಬೇರೆಯವರು ಹೋಗಲೆಂದು ದಾರಿ ಬಿಡುತ್ತ ಕಾಯುವನೇ ಕರ್ಣ,
ತಾನು ಹೋಗದೆ ಬೇರೆಯವರಿಗೂ ಹೋಗಲು ಬಿಡದವನೇ ಶಕುನಿ,
ಕಾಯುತ್ತ ರಸ್ತೆ ಸಂಚಾರ ನಿಯಮಗಳನ್ನು ಹೇಳುವವನೇ ಧರ್ಮರಾಯ,
ಹಿಂದಿನಿಂದ ನಿಂತ ವಾಹನಕ್ಕೆ PUNCH ಮಾಡುವವಳೇ ಪಾಂಚಲಿ

*

ಕಣ್ಣೀರು

ಅವಳಿಗಾಗಿ ಕಣ್ಣೀರ ಕೋಡಿ ಹರಿಸಿದೆ
ಅವಳು ಬರಲೆಂದು, ಕಂಬನಿ ಕಾಲುವೆ ಹರಿಸಿದೆ;
ಆಗ ಅವಳು ಬಂದು, ನೀರು ಉಪ್ಪು ಉಪ್ಪು ಅಂದು
ಹೊರಟೇ ಹೋದಳು.

*

ವಧು ಪರೀಕ್ಷೆ

ಕನ್ಯಾ ಮನೆಗಳಿಗೆಲ್ಲಾ ಅಲೆದ ಅಲೆದ,
ಅವಳನ್ನು ನೋಡಿದ, ಇವಳನ್ನು ನೋಡಿದ,
ಉಪ್ಪಿಟ್ಟು, ಕೇಸರಿಬಾತು ಅಲ್ಲಿ ತಿಂದ, ಇಲ್ಲಿ ತಿಂದ;
ಕಟ್ಟಕಡೆಗೆ ಬೇಸರ ಬಂದು ಆಗೇಬಿಟ್ಟ ಮದುವೆ !

*

ರಕ್ತ ಸಂಬಂಧಿ

ನೀರವ ರಾತ್ರಿಯಲ್ಲಿ ನನ್ನ ರಕ್ತ ಹೀರಿ ಹೋದ ಸೊಳ್ಳೆಯೇ,
ಎಲ್ಲಿದ್ದರು ಬೇಗ ಬರುವೆಯಾ ನಮ್ಮ ಮನೆಗೆ
ಕಾಯುತ್ತಿರುವೆ ನಿನಗಾಗಿ ನಾ ನಿನ್ನ ರಕ್ತ ಸಂಬಂಧಿ.


ಮುಖಪುಟ / ಸಾಹಿತ್ಯ-ಸಂಸ್ಕೃತಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+