ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಗರೇಟು

By Staff
|
Google Oneindia Kannada News
  • ರಘುನಾಥ ಚ.ಹ.
ಅಪ್ಪ ಸೇದುವ ಚಂದವನ್ನು
ನೋಡುತ್ತಿದ್ದೇನೆ ;
ಅಪ್ಪನಷ್ಟೇ ಗಂಭೀರವಾಗಿ

ಸಿಗರೇಟಿನ ಬೆಂಕಿ ಬೆಟ್ಟು ಸುಡುವವರೆಗು
ಕಮ್ಮಾರನ ಕುಲುಮೆಯಂತೆ ಎದೆಯ ಊದುಗೊಳವೆ
ಬೂದಿಯಾಳಗಿನ ಕಿಡಿ ನಿಗಿನಿಗಿ ಉರಿದು
ಸುರುಳಿ ಸುರುಳಿ ಹೊಗೆ

ದೇವರ ಪಟಕ್ಕೆ ಅಮ್ಮ ಬೆಳಗಿದ
ಗಂಧದ ಕಡ್ಡಿಯ ಹೊಗೆ
ಅಪ್ಪನೆದೆಯ ಬಿಸಿ ಮಾಡಿದ
ಹೊಗೆಬತ್ತಿಯ ಹೊಗೆ
ಒಂದಕೊಂದು ಢಿಕ್ಕಿಯಾಗಿ
ಚೆಲ್ಲಾಪಿಲ್ಲಿಯಾಗಿ
ದಿಕ್ಕಾಪಾಲು.

ಕಾಫಿ ಬಟ್ಟಲ ತಳದಲ್ಲಿ ಗಸಿಯ ಪಸೆ
ಸಿಹಿ ಆಸೆಗೆ ಸುಳಿಗೆ ಸಿಕ್ಕ ನೊಣ
ಬೆರಳ ಚಿಟಿಕೆಗೆ ಉದುರಿ ಬಿದ್ದ ಬೂದಿ
ಉಸಿರುಕಟ್ಟಿದ ನೊಣಕ್ಕೆ ಬಟ್ಟಲಲ್ಲೆ ಸಮಾಧಿ

ನೊಣದ ಕಳೇಬರದ
ಕಾಫಿ ಬಟ್ಟಲಲಿ
ಸ್ಮಾರಕದಂತೆ ನಿಂತ ಬುಡ

ಅಪ್ಪ ಎದ್ದುಹೋದ ನಂತರವೂ
ಉಳಿದ ಕಮಟು


ಹೊಗೆಯ
ಸಾಮ್ರಾಜ್ಯದಲ್ಲಿ
ನನ್ನ
ಅಮ್ಮನ
ಉಸಿರು ಕಾಣಿಸುತ್ತಿದೆ.


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X