ಗುಲಾಮರಾಗುವ ಆಸೆಯೇಕೆ...?
.?
ಶಿವಮೂರ್ತಿ, ನವದೆಹಲಿ
[email protected]
ಕರಗಿ ಹೋಗಲಿಲ್ಲ ನಮ್ಮಲ್ಲಿ ಒಳಕಲಹ
ನಿಲ್ಲಲಿಲ್ಲ ವಿದೇಶಿ ದಬ್ಬಾಳಿಕೆ ಪ್ರವಾಹ
ಒಳಕಲಹವಲ್ಲವೆ ಹೊರಗಿನವರಿಗೆ ಬರುವ ದಾರಿ
ಒಳನುಗ್ಗಿ ನಮ್ಮೊಳಾವರಿಸಿ ಕೊಲ್ಲುವ ಹೆಮ್ಮಾರಿ
ಆಳಿದ್ದರು ಅಂದು ತುಘಲಕ್, ಗುಲಾಮ, ಮೊಗಲರು
ಡಚ್, ಫ್ರೆಂಚ್, ಪೋರ್ಚ್ಗೀಸ್, ಬ್ರಿಟಿಷರು
ಸಾವಿರಾರು ವರ್ಷಗಳು ನಮ್ಮನ್ನು ಲೂಟಿ ಮಾಡಿದ್ದರು
ದೇಶದ ಸಂಪತ್ತನ್ನೇ ಕೊಳ್ಳೆ ಹೊಯ್ದಿದ್ದರು
ಅಂದಿನಿಂದಲೂ ನಮ್ಮನ್ನಾಳಿದರಲ್ಲ ವಿದೇಶಿಯರು
ಗುಲಾಮರಾಗಿಯೇ ಉಳಿದಿದ್ದೇವೆಲ್ಲ ನಾವು ಭಾರತೀಯರು
ಶುದ್ಧ ಭಾರತೀಯನ್ಯಾರೂ ನಮ್ಮಲ್ಲಿಲ್ಲವೇ ಆಳಲು?
ನೆಹರು, ಪಟೇಲ್, ಶಾಸ್ತ್ರಿ , ವಾಜಪೇಯಿಯಂತವರು ?
ಇನ್ನೂ ಆಳಿಸಿಕೊಳ್ಳುವ ಆಸೆ ಹೋಗಲಿಲ್ಲವಲ್ಲ...
ಸ್ವಾತಂತ್ರ್ಯ ಸಿಕ್ಕಿ ದಶಕಗಳು ಕಳೆದರೂ...
ಮತ್ತೆ ಬರುವರೇ.. ಗಾಂಧಿ, ಚಂದ್ರಭೋಸರು
ಘರ್ಜಿಸಿದ ಲಾಲ ಪಾಲ ಬಾಲರು...?
ಭವ್ಯ ಭಾರತದ ಇತಿಹಾಸ ತಿಳಿಯದವರು
ರೈತರ, ಬಡವರ ಸಮಸ್ಯೆಯನ್ನರಿಯದವರು
ಈ ದೇಶದೇಳಿಗೆಗೇನು ಮಾಡಬಲ್ಲರು..?
ದೇಶವನ್ನು ವಿದೇಶಿಯರಿಗೆ ಮಾರಿ
ಈ ದೇಶಿಗರನ್ನು ಕೂಪಕ್ಕೆ ತಳ್ಳಿ
ಅಟ್ಟಹಾಸದಿ ಮೆರೆದಾಡುವವರ ನಡುವೆ
ಕೇಳುವವರ್ಯಾರು ಜನ ಸಾಮಾನ್ಯನ ಅಳಲು..?
ಓದಿ :
ಎದೆಗೆ ಸಂದ ಮಳೆಬಿಲ್ಲು!
ಮೋಡಗಳು
ಮೇಘಮಲ್ಹಾರ
More From
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications