ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕವನವೆರಡು - ಕೊಳೆಗೇರಿ ಮತ್ತು ಕನ್ನಡಿ

By Staff
|
Google Oneindia Kannada News
ಕೊಳೆಗೇರಿ

ಕೊಳೆಗೇರಿ ಇಲ್ಲಿ ನಡೆದಿಹುದು
ಜೀವನದ ಕಲ್ಲಾಟ
ಬರೀ ಗುಡಿಸಲುಗಳೇ ತುಂಬಿವೆಯಿಲ್ಲಿ
ನೊಣ ಸೊಳ್ಳೆಗಳದೇ ಆಡಳಿತ

ರೋಗ ರುಜಿನಗಳ ತವರುಮನೆ
ಜನರಿಗೆ ಬಿಡುವಿಲ್ಲ ಒಂದು ನಿಮಿಷ
ಗುಡಿಸಲು ಗಲ್ಲಿಗಳಲ್ಲಿ
ಜನರ ಗಜಿಬಿಜಿಯ ಓಡಾಟ

ಹಗಲು ದುಡಿದು ದಣಿವಾಗಿ
ರಾತ್ರಿ ಏರಿಸುವರು ಅಮೃತ
ಅದರದೇ ಅಮಲಿನಲಿ ನಡೆಸುವರು
ರಾತ್ರಿಯಿಡೀ ರಾಮಾಯಣ ಮಹಾಭಾರತ

ಮತ್ತದೇ ಬೆಳಕು ಹರಿದಾಗ ಇರುವರು
ಇವರು ಕೃಷ್ಣ ಕುಚೇಲರಂತೆ
ಈ ಜನರು ಮುಟ್ಟಿದರೆ ಮೈಲಿಗೆ
ಕೆಲಸ ಮಾಡಿಕೊಟ್ಟರೆ ಕೂಲಿ
ಹೇಗಿದೆ ನೋಡಿ ಇವರ ಜೀವನ ಶೈಲಿ

*

ಕನ್ನಡಿ

ಎಂತಹ ವಯಸಿದು ನೋಡಿ
ನಿಲ್ಲದು ಮನಸು ಒಂದು ಕಡೆ
ಕನ್ನಡಿ ಮಾಡಿಹ ಮೋಡಿ
ನಿಲ್ಲುವುದದರ ಎದುರುಗಡೆ!

ಮನಸು ಇರಬಯಸುವುದು ಅಲ್ಲೆ
ಅದೇ ಆ ಕನ್ನಡಿಯ ಮುಂದುಗಡೆ
ಅಮೂಲ್ಯ ಸಮಯ ಕಳೆದುದು ಹೇಗೆ?
ತಿಳಿಯದು ಈ ಮನಸಿಗೆ

ನೋಡುತ ನೋಡುತ ಚಲಿಸದು ಎಲ್ಲು
ತನ್ನನೆ ತಾನು ಮೋಹಿಸಿ ನಿಲ್ಲಲು
ಮನಸಿಗೂ ಹಾಕಿದೆ ಕಡಿವಾಣ
ಆ ಮಟ್ಟಿಗೆ ಕನ್ನಡಿ ಬಲುಜಾಣ

ನೋಡಿ ನೋಡಿ ಕನ್ನಡಿ
ಮಾಡಿಹ ಈ ಮಧುರ ಮೋಡಿ...


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X