ನಮ್ಮದೊಂದು ಕೋರಿಕೆ...
- ಚಂದ್ರಶೇಖರ ಬಿ.ಎಚ್.
ಐ.ಎಸ್.ಇ.ಸಿ. , ಬೆಂಗಳೂರು
[email protected]
ಮೂಡಿ ಬಾರದೆ ಜಗಕೆ ನವ ಚೈತನ್ಯ?
ನಲಿಯುತಿರೆ ನಾವೆಲ್ಲ , ಸಂತಸ, ಸಂಭ್ರಮ
ಇರುವುದಿಲ್ಲವೇ ದಿನವೆಲ್ಲ ನಿಮಗೆಲ್ಲ ?
ಬೀಸುತಿರೆ ತಂಗಾಳಿ, ತುಂಬದೇ
ಹೃದಯಕೆ ಜೀವದ ಸಿಹಿಜೇನೆಲ್ಲ ?
ಹರಿಯುತಿರೆ ನೀರಾಗಿ ಬಳುಕುತಲಿ
ನಲಿಯದೇ ಮನವು ಪುಳಕದಲಿ ?
ತೇಲುತಿರೆ ಮುಗಿಲು ಚಿತ್ತಾರದಲಿ
ಕಂಡುಬರದೇ ಕಲ್ಪನೆಯ ಕಲೆಯೆಲ್ಲ ?
ಕೊಂಬೆ ರೆಂಬೆಯಲಿ ಕುಳಿತು ಕೂಗಿರಲು
ಇಂಪಾದ ಸಂಗೀತ ಕೇಳಿ ಬಾರದೇ ಅಲ್ಲೆಲ್ಲ ?
ಅರಳುತಿರೆ ಬಳ್ಳಿಯಲಿ ಪರಿಮಳದ ಹೂವೆಲ್ಲ
ಮುಡಿವಾಸೆ ಮಕ್ಕಳಿಗೆ ಮೂಡದೇ ಆಗೆಲ್ಲ ?
ಮರಳರಾಶಿಯಲಿ ಅಲೆದಾಡುತಿರೆ ಅಲೆಯೆಲ್ಲ
ಮನೆಗೆ ಮರಳುವಾಸೆ ಬರದಲ್ಲವೆ ನಿಮಗೆಲ್ಲ ?
ಎತ್ತೆತ್ತ ನೋಡಿದರತ್ತತ್ತ ಹಸಿರಿನ ಮಾಲೆಯಲಿ
ಪವಡಿಸಿ, ತಂಗಾಳಿ ತೊಟ್ಟಿಲಲಿ ನಲಿದಂತಿಲ್ಲವೇ ನಿಮಗೆಲ್ಲ ?
ಬೆಟ್ಟದಾ ತುದಿಯಲಿ ನಿಂತು ಅತ್ತಿತ್ತ ನೋಡಲಾಗಿ
ಬೆಂಬಿಡದ ಆಯಾಸಕೇ ಉಲ್ಲಾಸ ಬರಲಿಲ್ಲವೇ ನಿಮಗೆಲ್ಲ ?
ಇಂತಿರುವಾಗ ಹಾಳ್ಗೆಡವದಿರಿ, ನಲಿವಾಗ ನಲಿದಾಡಿ
ಕುಣಿದಾಡಿ, ಸಂತಸದಲೊಂದಾಗಿ ಬಾಳಿರಿ, ಆದರೆ..
ಕಡಿಯದಿರಿ, ಕದಡದಿರಿ, ನೀಡದಿರಿ ತೊಂದರೆ, ಕೊಡಿರಿ
ಸ್ವಲ್ಪ ಜಾಗ, ಬಾಳಲು ನಮಗೂ ಎಂಬುದೊಂದೇ ಕೋರಿಕೆ ನಮ್ಮದೀಗ
More From
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications