ಅಮ್ಮ ನೀನೇಕೆ ಈ ರೀತಿ?
;?
(ನನ್ನ ಮುದ್ದಿನ ಅಮ್ಮನಿಗೂ ಮತ್ತು ವಿಶ್ವ-ದ ಎಲ್ಲಾ ಅಮ್ಮಂದಿರಿಗೂ ಈ ಕವನ ಅರ್ಪಿತ)
- ಲೀನಾ
[email protected]
ಎಂದೆಬ್ಬಿಸಿದಳು ಅಮ್ಮ ಅಕ್ಕರೆಯಿಂದ
ಕುಡೀ ಕಾಫಿ ಬಿಸಿ ಬಿಸಿ
ಅಣಿ ಮಾಡಿಹೆ ಸ್ನಾನಕೆ ನೀರು ಕಾಯಿಸಿ
ಸ್ನಾನ ಮುಗಿಸಿ ಇಗೋ ಬಂದೆ
ತಗೋ ಮಗುವೆ ತಿಂಡಿ ತಂದೆ
ತಿಂಡಿ ಮುಗಿಸಿ ಹೊರಟು ನಿಂತೆ
ಮನದುಂಬಿ ಹರಸಿದಳು ಮಾತೆ
ಎಲ್ಲರೂ ಜಾರಿದ್ದರು ಗಾಢ ನಿದ್ದೆಯಲ್ಲಿ
ಕೆಲಸ ಮುಗಿಸಿ ನಾ ಬಂದೆ ಇಂತಹ ಸಮಯದಲ್ಲಿ
ಅಮ್ಮ ಮಾತ್ರ ಕಾಯುತ್ತಿದ್ದಳು ಅಲ್ಲಿ
ನಾ ತಟ್ಟಲಿಲ್ಲ ಬಾಗಿಲು
ಅಮ್ಮ ಓಡಿ ಬಂದು ಕದ ತೆಗೆದಳು
ಏಕೆ ಕಂದ ಇಷ್ಟು ತಡ
ಎನುತ ಊಟ ಬಡಿಸಿದಳು ದಡಬಡ
ಊಟ ಮಾಡಿ ಮಲಗಿದೆ ನಾನು
ತಟ್ಟೆ ಎತ್ತಿ ತೊಳೆದಿಟ್ಟೆ ನೀನು
ಮರುದಿನ ಬೆಳಗಾಯಿತು
ನಿನ್ನ ಬಿಡುವಿಲ್ಲದ ಸೇವೆ ಶುರುವಾಯಿತು
ಓ ;
ನನ್ನ ಮೇಲೇಕೆ ನಿನಗಿಷ್ಟು ಪ್ರೀತಿ
ಏನೆಲ್ಲಾ ಮಾಡುವೆ ತಾಯಿ ನನಗಾಗಿ
ನೀಡದಾದೆ ನಾ ಒಂದು ಕ್ಷಣ ನಿನಾಗಾಗಿ
ತಪ್ಪು ನನ್ನದಲ್ಲ ಅಮ್ಮ!
ಇದು ಕಾಂಕ್ರೀಟ್ ಕಾಡು
ಇಲ್ಲಿ ಎಲ್ಲ ಜನರದೂ ಇದೇ ಪಾಡು
ತಮ್ಮ ಕಾಯಕವೊಂದೇ ಇಲ್ಲಿ ಎಲ್ಲರ ಹಾಡು
ಇಂತಹ ಜಗತ್ತಿನಲ್ಲಿ ನಿಂತರೆ ನಾ ಸೋತೆ
ನಿನ್ನ ಕಂದ ಸೋಲುವುದನ್ನು ನೀ ಸಹಿಸುವೆಯಾ ಅಮ್ಮ?
ನಿನಗಾಗಿ ನಾ ಓಡುತ್ತಲಿರುವೆ ಸದಾ ಸದಾ...
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications