Get Updates
Get notified of breaking news, exclusive insights, and must-see stories!

ಮೂರು ಕವಿತೆಗಳು

  • ಬಸವರಾಜೇಶ್ವರಿ ಪಾಟೀಲ, ಲಕ್ಕುಂಡಿ.
    [email protected]
ಮೌನಗೀತೆ

ಅಂತರಂಗದ ಮೌನಗೀತೆ
ಭಾವನೆಗಳೆ ಪಲ್ಲವಿ-ಚರಣ
ಕಲ್ಪನೆಯೇ ತಾಳ
ಯಾವ ವಾದ್ಯವಿಲ್ಲದೆ
ನಾದಲಹರಿ ಹೊಮ್ಮುತ್ತಿದೆ ;
ಯಾವ ತಾಳವಿಲ್ಲದೆ
ರಾಗಲಹರಿ ಹರಿಯುತಿದೆ :
ನುಡಿಯುವ ವಾದ್ಯವಿಲ್ಲ
ನುಡಿಸುವಂತಹ ಕೈಗಳಿಲ್ಲ.
ಮಿಡಿಯುವ ಮನವಿರಲು
ಮೌನಗೀತೆಗೆ ಬರವಿಲ್ಲ
ರಾಗ ತಾಳ ಭಾವ ಭಂಗಿ ಆವುದರ ಅರಿವಿಲ್ಲ
ಇತಿ ಮಿತಿ ರೀತಿ ನೀತಿ ಯಾವುದರ ಪರಿವಿಲ್ಲ
ಹಾಡಲು ಬಾಯಿಯಿಲ್ಲ
ಕೇಳುವ ಮನಗಳಿಲ್ಲ
ಹೊಮ್ಮಿ ಬರುವ ಮೌನಗೀತೆಯ
ಅರಿತಿಹುದು ಮನವೆಲ್ಲ !

*

ಬಂದವರು ಬಾರದವರು

ಯಾರು ಬರುವರೆಂದು ಕೊಂಡೆ
ಅವರೆ ಬಾರದೇ ಹೋದರು
ಯಾರು ಬಾರರು ಎಂದುಕೊಂಡೆ
ಅವರೆ ಬಂದು ನಿಂತರು

ಬಂದವರು ನನಗಾರು ?
ಬಾರದವರು ಯಾರು ?
ಬಾರದವರ ಕಾತುರದ
ದಾರಿಯಲಿ ಬೇರಾರು ?
ಬಾರದವರ ನೆನಪಿನ
ಪಯಣದಿ ಜೋತೆಯಾರು ?
ಬಾರದವರು ಮರೀಚಿಕೆಯೋ ?
ಬಂದವರು ಬಾರದವರಿಗೆ
ಸರಿಯಾ ? ಸರಿಸಮವೋ ?

ಬಯಸದವರ ಕಳಿಸಿ
ಬಯಸಿದವರ ತಡೆದು
ನಿಲಿಸಿದವರಾರು ?
ಯಾರು ಅವರಾರು ?

*

ವಿಸ್ಮಯ

ಜಗವು ಎಷ್ಟು ದೊಡ್ಡದು
ಕಾಣೋ ನಯನ ಕಿರಿಯದು ;
ಮನಸು ಕೂಡ ಚಿಕ್ಕದು
ಅದರ ಭಾವ ಹಿರಿಯದು !

ಜಗವ ನೋಡೋ ನಮ್ಮ ಕಣ್ಣು
ನಮ್ಮನೋಡಲರಿಯದು !
ಎಮ್ಮ ನೋಡಲೆಮ್ಮ ಕಣ್ಣು
ಕನ್ನಡಿಯ ಬಯಸುವದು !


ಮುಖಪುಟ / ಸಾಹಿತ್ಯ-ಸಂಸ್ಕೃತಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+