Get Updates
Get notified of breaking news, exclusive insights, and must-see stories!

ನ.14 ಮಕ್ಕಳದಿನ: ಪುಟ್ಟನ ಕವಿತೆ

  • ಚಂದ್ರಗೌಡ ಕುಲಕರ್ಣಿ
    ಕಡದಳ್ಳಿ (ತಾಳಿಕೋಟೆ), ಬಿಜಾಪುರ ಜಿಲ್ಲೆ.
    [email protected]
ತುಂಟ ಕೋತಿ ಎಂಬ ಕವಿತೆ
ಕಟ್ಟಿ ಬಿಟ್ಟೆ ಅಂದು !
ಕವಿತೆ ಓದಿ ಪರಚಿ ಬಿಟ್ಟ
ತಮ್ಮಾ ಓಡಿ ಬಂದು !

ತೊದಲು ಗಿಳಿಯು ಎಂಬ ಕತೆಯ
ಹೆಣೆದು ಬಿಟ್ಟೆ ಅಂದು !
ತುಂಟ ತಂಗಿ ಮುದ್ದು ಕೊಟ್ಳು
ಪ್ರೀತಿ ಅಣ್ಣ ಎಂದು !

ದಡ್ಡ ಕತ್ತೆ ಎಂಬ ಹಾಡು
ಬರೆದು ಬಿಟ್ಟೆ ಅಂದು !
ಹಾಡು ಕೇಳಿ ಒದ್ದೆ ಬಿಟ್ಟ
ಅಣ್ಣ ಓಡಿ ಬಂದು !

ಹಾಡು ಹಕ್ಕಿ ಎಂಬ ಗೀತ
ರಚಿಸಿ ಬಿಟ್ಟೆ ಅಂದು !
ಗೀತೆ ಕೇಳಿ ನನ್ನ ಅಕ್ಕ
ಅಪ್ಪಿಕೊಂಡ್ಳು ಬಂದು !

ಅನಾಸಿನ್‌ ಎಂಬ ಚುಟುಕು
ಗೀಚಿಬಿಟ್ಟೆ ಅಂದು !
ಬರೆಯೋದನ್ನೆ ನಿಲ್ಲಿಸಿ ಬಿಟ್ಟೆ
ಮೇಷ್ಟ್ರು ಏಟು ತಿಂದು !

ಕಥಾ ವಸ್ತು ಸಿದ್ಧವಿಹುದು
ಗದಾಯುದ್ಧ ಕೆಂದು !
ಅಪ್ಪ ಅಮ್ಮ ನಗದೇ ಹೋದ್ರೆ
ಮನಸಿನಲ್ಲಿ ನೊಂದು !


ಮುಖಪುಟ / ಸಾಹಿತ್ಯ-ಸಂಸ್ಕೃತಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+