Get Updates
Get notified of breaking news, exclusive insights, and must-see stories!

ಅಂಟು ಜಿಬಿಟಿನ ನಂಟು

ನಿಮ್ಮೂರ ದಾರಿಯಲಿ ನಮ್ಮೂರು ಬಂದಾಗ
ಸುಳಿಗಲ್ಲ ಶ್ಯಾಮಲೆ ನೆನಪಾಗುವಳೆ
ಮಾವುಸೀಬೆಯ ತೋಟ ನೀ ದಾಟಿ ಹೋದಾಗ
ಕವಳೆಹಣ್ಣಿನ ಕಣ್ಣವಳು ನೆನಪಾದಳೇ!

ಬೆಲ್ಲ ಕೊಬರೀ ಗಿಟುಕು ಅಜ್ಜಿಯ ಅರಳಿಟ್ಟು
ಕದ್ದುತರುವಾ ಹುರಿಗಡಲೆ ತಂಬಿಟ್ಟು ,
ದಿನ್ನೆಮೇಲಿನ ಹಾದಿ ತುಳಿದು ನೀ ಸರಿದಾಗ
ಗುಬ್ಬಿ ಎಂಜಲದ ಸವಿ ನೆನಪಾಗುವದೆ?

ಮೆದ್ದ ಮಾವಿನ ಮಿಡಿ, ಖಾರಹುಣಿಸೆ ಚಿಗಳೀ,
ಹೊಲದಲ್ಲಿ ಕಬ್ಬಿನ ಗಾಣ, ನೊರೆಹಾಲು ಬಾಯ್ಗೆ,
ಬೊಗಸೆ ತುಂಬಿದ ಬಿಸಿಬೆಲ್ಲ ನೀ ಚಪ್ಪರಿಸಿದಾಗ
ನೆನಪಾಯಿತೇ ?

ಮರಳಿಬಾರದ ಬಾಲ್ಯ ನೆನಪಿನ ಪುಟದಲ್ಲೇ
ಮೆಲಕುಹಾಕದ ಮನುಜ ಈ ಜಗದಿ ಉಂಟೆ
ತಿಳಿನೀರ ಸೆಲೆಯಂತೆ ಬತ್ತದೆಂದಿಗೂ ಬಲ್ಲೆ ,
ಆಡಿ-ಅತ್ತು ಮಾಡಿದ ಹಠ ನೆನಪಾಯಿತೆ?


ಮುಖಪುಟ / ಸಾಹಿತ್ಯ-ಸಂಸ್ಕೃತಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+