ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಡಬೇಡ ಸಂಗಾತಿ

By Staff
|
Google Oneindia Kannada News
  • ಎಸ್‌.ಎಲ್‌. ಸುರೇಂದ್ರಕುಮಾರ್‌, ತುಮಕೂರು
    [email protected]
ಸಂಗಾತಿಯೆ ನೀ ನನ್ನಯ ಪ್ರೀತಿಗೆ ದ್ಯೋತಕ
ಸಂಗಾತಿಯೆ ನೀ ನನ್ನಯ ಭಾವಕೆ ರೂಪಕ

ನನ್ನಯ ಎದೆಯಲ್ಲಿ ಮೀಟುವ ವೀಣೆಯು
ನಿನ್ನದೆ ರೂಪವ ರೂಪಿಸಿ ಮೀಟಿದೆ
ನನ್ನಯ ಹೃದಯಾಳದಲಿ ನಿನ್ನದೆ ಅಲೆಗಳು
ನಿನ್ನದೆ ನೆನಪನು ತೆರೆಯಲೆಯಲಿ ಮೂಡಿಸಿವೆ

ಮುದುಡಿದ ಮನಸನು ಮೀಟಿದ ಕಂಗಳು
ಕಂಡೆನು ನಿನ್ನಲಿ ನನ್ನ(ಯ) ಭಾವ ರೂಪವ
ಸೋತೆನು ನಾನಾಗಲೆ ನಿನ್ನಯ ಮೋಹಕೆ
ಕಂಡೆನು ಕನಸನು ನಿನ್ನಯ ಮೋಡಿಗೆ

ನೀ ಏನು ಮೋಡಿ ಮಾಡಿ ಹೋದೆಯಾ
ನೀ ಏನು ನನ್ನ ಮನಸ ಹೊತ್ತೋದೆಯಾ
ಇರುಳಿನ ಕನಸಲು ಬಂದು ಕದ ತಟ್ಟಿದೆ
ಹಗಲಿನಲಿ ನೆನಪುಗಳಾಗಿ ನಿಂದು ನೀ ಕಾಡಿದೆ

ಹೀಗೆಲ್ಲ ಕಾಡಬೇಡ (ಬಿಡದೆ) ನನ್ನದೆಯ ಗೂಡಿನಲಿ
ಜೊತೆ ಬಂದು ಸೇರಿ ಬಿಡು ಪ್ರತಿ ಹಗಲಿರುಳಿನಲಿ


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X