Get Updates
Get notified of breaking news, exclusive insights, and must-see stories!

ಮೈತ್ರೇಯಿ


Generation next - Rashmi with mother MaithreyiDr. G.V. Kulakarniಜೀವಿ
[email protected]
1.

ನಮ್ಮ ಮನೆಯಕ್ಕರೆಯ ಸಕ್ಕರೆಯ
ಹರುಷ-ರಶ್ಮಿಯ ಕುಡಿಯು, ಸಿಹಿಯ ಜೇನು
ತಿಂಗಳಿನ ಬೆಳಕಿನಲಿ ಹನ್ನೆರಡು ಅಡಿಯಿಟ್ಟು
ಎದ್ದು ನಿಂತಿಹಳಿಂದು ತಾನೆತಾನು.

2.

ತಾಯಿಯ ಮುಖಕಮಲ, ತಂದೆಯ ಮೈಮಾಟ
ಮನೆತನದ ಮೂಗುಮೇಲ್‌ ಮಾಡುವವಳು
ನಕ್ಕಾಗ ಮನೆತುಂಬ ಮುತ್ತು ಚೆಲ್ಲುವಳಿವಳು
ಅತ್ತಾಗ ಮುತ್ತುಗಳ ಪೋಣಿಸುವಳು.

3.

ಪಂಚಕನ್ನೆಯರಲ್ಲಿ ಕಿರಿಯ ಚೆಲುವೆಯು ಇವಳು
ಯೋಚಿಸುತ ತೋರುವಳು ಹುಬ್ಬುಗಂಟು
ತಾನೊಬ್ಬಳೇ ಕುಳಿತು ಹಾಡು ಹಾಡುವಳಿವಳು
ಗೊಂಬೆಯಾಂದಿಗೆ ಇಹುದು ಸದಾ ನಂಟು.

4.

ಯಾರೆ ಹೊರ ಹೊರಟರೂ ಇವಳು ಬರಲೋ ಸಿದ್ಧ.
ಅಜ್ಜ ಏತಕೆ ಇವಳ ಕಾಡಬೇಕು ?
‘ಮುತ್ತುಕೊಟ್ಟರೆ ಮಾತ್ರ ಕರೆದೊಯ್ವೆ’ ಎಂದಾಗ
ಮುತ್ತು ಕೊಡುವಾ ದೃಶ್ಯ ನೋಡಬೇಕು.

5.

ಅಜ್ಜಿ ಹೋದಲ್ಲೆಲ್ಲ ಇವಳು ಹರಿದಾಡುವಳು
ಪೂಜೆಯಲಿ ನುಗ್ಗುವಳು ಕರಡಿಯಂತೆ
ಹೆದರಿ ಹಿಂಜರಿವಾಗ ತುಂಟುನಗೆ ಬೀರುವಳು
ತನ್ನ ಚೇಷ್ಟೆಗೆ ತಾನೆ ನಲಿಯುವಂತೆ.

6.

ಅಜ್ಜನಾ ಪುಸ್ತಕವ ಕಿತ್ತಿ ಎಸೆಯುವ ಆಸೆ
ಬರೆವ ಕಾಗದ ಹರಿದು ಬಿಸುಟುವಾಸೆ
ಚಿತ್ರ ತೆಗೆಯಲು ಬರಲು ಪೋಜು ಕೊಡುವಾ ಆಸೆ
ಮನೆತುಂಬ ತನ್ನಿರವ ಮೆರೆವ ಆಸೆ.

7.

ತುಂಟ ನಗೆಯನು ಬೀರಿ ‘ಹಾ’ ಎಂದು ಚೀರುವಳು
ಹಿರಿಯತನ ತೋರಲೋ ಗದರಿಸುವಳು
ಮನೆಯ ವಾತಾವರಣ ಇವಳಿಂದ ಬದಲಾಯ್ತು
ಸಾಲು ದೀಪಗಳನ್ನು ಹಚ್ಚುತಿಹಳು.

8.

ವರುಷ ತುಂಬಿದ ಹರುಷ ರಶ್ಮಿಯಾಲು ಬೆಳಗುತಿರೆ
ರಾಘವನ ಪ್ರಿಯ ವೀಣೆ ನುಡಿಸುತಿಹಳು
ದರ್ಶನಾ, ಋತೂಷಾ, ಅಕ್ಷರಾ, ವಿವೇಕಾ
ಅಕ್ಕಂದಿರಿಗೆ ಇವಳು ಪ್ರಿಯಳು ಆಗಿಹಳು.


ಮುಖಪುಟ / ಸಾಹಿತ್ಯ-ಸಂಸ್ಕೃತಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+