ವಿಮಾನ ಯಾತನೆ
- ಕ್ಷಿತಿ ಎಸ್; ಬೆಂಗಳೂರು
[email protected]
ಇನಿಯನ ಮೊದಲ ಸ್ಪರ್ಶ
ಎಲ್ಲೆಲ್ಲೂ ಪಸರಿಸಿದ ಪ್ರೀತಿಯ ಕಂಪು
ಉಕ್ಕಿ ಹರಿದ ಪ್ರೇಮ ಜಲಗಂಗೆ
ಭೋರ್ಗರೆದ ಉತ್ಸಾಹ
ಇನಿತು ದಿನವಿದ್ದ ವಿರಹದ ಕಾವಿಗೆ
ಆಲಿಂಗನದ ತಂಪು
ಮನದ ತುಂಬೆಲ್ಲ ಹಚ್ಚಹಸುರಿನ ಸಂತಸ
ಅಧರಗಳಲ್ಲಿ ಹೂನಗೆ
ಕೆದರಿದ ಕುರುಳುಗಳು
ಸೃಷ್ಟಿಯ ಸೊಬಗು
ಪ್ರೇಮ ಫಲದ ಸಾಫಲ್ಯ
![]()
ಜೀವಜಲಧಾರೆ
ಸುಸ್ವಾಗತ ನಿನಗೆ ಜೀವಜಲ ಧಾರೆಯೇ
ಬಂದಿರುವೆ ನೀ ಮತ್ತೆ ಕಾಯುತಿಹ ಧರೆಗೆ
ಧುಮ್ಮಿಕ್ಕಿ ಚಿಟಿಪಿಟಿಸಿ ಆವರ್ತಗಳಲಿ
ವಿವಿಧ ರೂಪಿ ನೀ ಸುರಿಯುತಿರೆ
ಮೈಮನದಲಿ ಉತ್ಸಾಹದ ನರ್ತನ
ಒಮ್ಮೆ ಜಲಪಾತದ ಭೋರ್ಗರೆತ
ಒಮ್ಮೆ ಸರೋವರದ ಶಾಂತತೆ
ರೈತನ ಆಸೆಯ ಪ್ರತೀಕವೂ ನೀನೇ
ಸಂತ್ರಸ್ತರ ನಿರಾಸೆಯ ಸಂಕೇತವೂ ನೀನೇ
ಒಮ್ಮೆ ತಾಯ ಮಮತೆಯ ಸ್ಪಂದನ
ಒಮ್ಮೆ ಪ್ರೇಮಿಯ ಒಲವಿನ ಸಿಂಚನ
ಒಮ್ಮೆ ಮಗುವಿನ ಮುಗ್ಧ ನವೋಲ್ಲಾಸ
ಮತ್ತೊಮ್ಮೆ ಪ್ರಳಯದ ಕರಾಳ ಮುನ್ನುಡಿ
ಪ್ರಥಮ ಮಿಲನದ ರೋಮಾಂಚನವೂ ನೀನೇ
ಅಗಲುವಿಕೆಯ ಪರಿತಾಪ ನೋವೂ ನೀನೇ
ನಮನ ನಿನಗೆ ಓ ರಸವಾಹಿನಿಯೇ
ಜೀವಸೆಲೆಯ ಮೂಲ ಇಳಿದು ಬಾ ಧರೆಗೆ
More From
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications