ಬದಲಾವಣೆಯತ್ತ........
- ಶಿವಮೂರ್ತಿ, ನವದೆಹಲಿ
[email protected]
ನಿನ್ನ ನೋಡಿ ನೀನೆ ನಕ್ಕು
ಸುಕ್ಕು ಸುಕ್ಕಾದ ಜೀವನವನ್ನ
ತುಕ್ಕು ಹಿಡಿಯುವ ಮುನ್ನ
ಸರಿಸಿ ಒರೆಸಿ ಬಿಡು ಗೆಳೆಯ..
ದಿನವು ಜಗಕೆ ಹೊಸತು ಬರುತಲಿಹುದು
ಹೊಸ ಪುಟಗಳನು ತೆರೆದು ತೋರಿಸುತಿಹುದು
ಸದಾ ಹೊಸತು ಕಾಣುವ ತವಕ ಈ ಜಗಕ್ಕೆ
‘ಈ’ ಮಯವಾಗಿರುವ ಈ ಮಾಯಾಲೋಕಕ್ಕೆ
ಹಳತು ನಂಬಿಕೆಗಳನ್ನು ಮುಚ್ಚಿಟ್ಟು
ಹೊಸ ದಾರಿಯಲ್ಲಿ ದಾಪುಗಾಲು ಇಟ್ಟು
ಎದುರಾಗುವ ದಾರಿಯ ಮೇಲೊಂದು ಕಣ್ಣಿಟ್ಟು
ಸಾಗಬೇಕು ಹೊಸತಿನೊಡನೆ ಕೈ ಬೆಸೆದು
ಅಲ್ಲಿಂದ ಬರುವಾಗ, ಇಲ್ಲಿರುವ ಹಂಬಲ
ಹುಟ್ಟದಿರಲಿ ಮನದಲಿ ಗೊಂದಲ
ಜೊತೆಯಲ್ಲಿ ಬಂದ ಕನಸುಗಳೆಷ್ಟು ?
ನನಸಾಗದೆ ಹಾಗೆ ಉಳಿದವು ಎಷ್ಟು ?
ಮುಂದಾಗಲಿರುವುದನ್ನು ಇಂದೇ ಮೂಸಿಸು
ಆಗಬಹುದನ್ನೆದುರಿಸಲು ಯೋಚಿಸು, ಯೋಜಿಸು
ಬದಲಾವಣೆಯನ್ನು ತೆರೆದೆದೆಯಲಿ ಸ್ವಾಗತಿಸು
ಧೈರ್ಯಗೆಡದೆ ಮುನ್ನುಗ್ಗಿ ಸಾಗಿ ಸಾಧಿಸಿ ತೋರಿಸು
ಎಲ್ಲಿರಲಿ ಎಂತಿರಲಿ ಸದಾ ಚಿಮ್ಮುತ್ತಿರಲಿ ಚಿಲುಮೆ
ಎಂದೆಂದಿಗೂ ಆರದಿರಲಿ ಉತ್ಸಾಹದ ಕುಲುಮೆ
(ಸ್ಫೂರ್ತಿ : Who Moved My Cheese)
More From
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications