ಹ್ಯಾಂಗ ಹೇಳಲಿ ಗೆಳತಿ......
- ರೇಣುಕಾ ಶ್ಯಾಮ್, ನವದೆಹಲಿ
[email protected]
ಯಾರ ಶಾಪದ ಫಲವೋ, ಪೂರ್ವಜನ್ಮದ ಕರ್ಮವೋ..
ಬದುಕ ಬಯಸಿದ ಚಿಗುರೆಳಸಿನಲಿ ಚಿವುಟಿ ಹೊಸಕಿ ಹಾಕಿಹುದು..
ಇರದ ಮಕ್ಕಳಭಾಗ್ಯ ಹಲಿಬಿಹರು ತಾಯ್ತಂದೆ,
ಕಂಡ ದೇವರಿಗೆ ಹರಕೆ ಹೊತ್ತಿ, ಮುಡಿಪುಕಟ್ಟಿ,
ಪಡೆದಿಹರಂದದಾ ಚೆಂದನದ ಬೊಂಬೆಯಂತಾ ಕುವರಿಗೆ,
t;br/>
ಬಾಳೆಗೊನೆಯಂದಕ್ಕೆ ಬೆಳೆದು ನಿಂತಿಹ ಬಾಲೆ,
ಅಕ್ಕರೆಯರಗಿಳಿಯಾಗಿ, ಮುದ್ದು ಕಣ್ಮಣಿಯಾಗಿ,
ಕಣ್ತುಂಬ ಕನಸು ಎದೆತುಂಬ ಆಸೆಗಳ ಹೆಣೆದಿಹಳಾ ಮುಗುದೆ.
r/>
ಬಯಸಿ ಹೊಸಲಿಗೆ ಬಂದ ವರಗಳನಾಚೆಗೆ ನೂಕಿ,
ಕೊಟ್ಟಾಗಿದೆಯವಳ ಎನ್ನ ತವರಿಗೇ ಕಿರಿತಮ್ಮನಿಗೆ,
ಯಾರೂ ಬಾರದ ರೀತಿ ಬೇಲಿಕಟ್ಟಿಹಳಾ ಹಡೆದವ್ವ,
r/>
ಕೇಳಿ ಭುಗಿಲೆದ್ದ ಹುಡುಗಿ ನಾನೊಲ್ಲೆ ಹಡೆದವ್ವ,
ನಿನ್ನ ತಮ್ಮನ ಮದುವೆಯಾಗಲೊಲ್ಲೆ ನನ್ನಾಣೆ ಕೇಳು,
ಹಲುಬಿ ಕಣ್ಣೀರ್ಗೆರೆದು ಕೈ ಮುಗಿದು ಬೇಡಿಹಳು.
r/>
ಅವಳಲಳ ಕೇಳದ ತಾಯ್ತಂದೆ ಹುಡುಗಾಟವೆಂದೇ ಅರಿತು
ಎಳೆದು ಕಟ್ಟೇ ತೀರಿದರು ಬಾಸಿಂಗವಾ ಆಡುತಾಡುತಲಿ,
ಯಾವ ಜನ್ಮದ ಋಣಕ್ಕೊ ಮಗಳ ಬಲಿಮಾಡಿಹರು.
r/>
ಮದುವೆ ಕಂಡವರೆಲ್ಲ, ಮರ-ಮರನೆ ಮರುಗಿದರು,
ಅರಗಿಳಿಯಂತ ಹುಡುಗಿ, ಗಿಡುಗನ ಪಾಲಾಯ್ತು ಎಂದು-
ತಮಗೆ ತೋಚಿದ ರೀತಿ ಹಳಹಳಿಸಿದರು ಹರಸಿ ಬಾಯ್ತುಂಬ.
r/>
ಮಗಳ ಬಾಳ್ವೆಯ ಕಂಡು ಇಳಿದ ಭಾರಕೆ ತೃಪ್ತಿಯಲಿ,
ಹಿರಿ-ಹಿರಿ ಹಿಗ್ಗಿದ ತಾಯ್ತಂದೆ ಕಾಣದ ದೈವವನು ಕೊಂಡಾಡಿದರು,
ಹಡೆದ ಹೊಟ್ಟೆಗೆ ಮಗಳ ನೋವಿನ ದನಿಯು ತಟ್ಟಲೇ ಇಲ್ಲ.
r/>
ಯಾವ ನೇಹ-ನೆಣವೂ ಕಾಣೆ, ಸ್ನೇಹಬಂಧವೂ ಕಾಣೆ,
ಪ್ರೇಮವೆಂಬುದು ಬರೀ ಕಥೆ-ಕವನ ಪುಟಗಳಲೆ ಏನೋ,
ಮನವೆಂಬ ಮಾಯಾಮೃಗ-ಮರೀಚಿಕೆಯಾಗಿ ಕೈಗೆಟುಕಲಿಲ್ಲ ಬಾಳು!
r/>
ದಾಂಪತ್ಯವೆಂದರೆ ಏನೋ ! ಸುಖವೆಂದರೆ ಬರೀ ಹಾಸಿಗೆಯೇನೋ,
ಅರಿವಿಗೆ ಎಟುಕದ ಮೂಕಭಾಷೆ, ಬರೀ ಗೋಳಿನಾ ಕಥೆಯೇನೋ,
ಈ ಭಾಷೆ-ಪರಿಭಾಷೆಯಲೆ ಗೊತ್ತಾಗದ ರೀತಿ ಜೀವ ರೋಸಿತು,
r/>
ನಿಂತರೂ ತಪ್ಪು, ಕುಂತರೂ ತಪ್ಪು ಮಾಡಿದ್ದೆಲ್ಲ ಬರೀ ಮಣ್ಣು,
ರೂಪವೇ ಶತ್ರುವಾಗಿ, ಮುಳ್ಳಾಗಿ ಇರಿಯುತ್ತದೆಂಬುದು ದಿಟವಾಯ್ತು ಗೆಳತಿ,
ನಲ್ಮೆಯ ಮಾತುಗಳಿಲ್ಲ , ಅತ್ತರೂ ಸಂತೈಸುವ ಜನ್ಮಜಾತರೂ ಇಲ್ಲಾ ,
r/>
ಎಲ್ಲಿ ಹೋಗಲಿ? ಯಾರಿಗರುಹಲಿ ? ಏನು ಮಾಡಲಿ ಗೆಳತಿ?
ಹಾಳಾದ ಮನ ದೇವರಿಲ್ಲದ ಗುಡಿ ಒಂದೆಯೇ ..
ಚೂರಾದದ್ದೆಲ್ಲಾ ಹೆಕ್ಕಿ ಒಂದುಮಾಡಲು ಸಾಧ್ಯವೇ ಗೆಳತಿ..
;#3240;ನ್ನೊಡಲದಾವಾಗ್ನಿ...
ಆದರೂ ಬಾಳಲೇ ಬೇಕು, ಬದುಕೊಡ್ಡಿದ ಬಿರುಗಾಳಿಗೆದುರಾಗಿ,
ಎಲೆಮೇಲಣ ಬಿಂದುವಾಗಿ, ನಿಯಾಮಕನಲ್ಲೊಂದೇ ಬಿನ್ನಹ,
ಏನಾದರೂ ನೀಡು ಈ ಹೆಣ್ಣುಜನ್ಮ ಮಾತ್ರ ನೀಡಬೇಡವೆಂದೆಂದೂ!!!!!
r/>
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications