ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಳೆ ಪ್ರಾಸಗಳು

By Staff
|
Google Oneindia Kannada News
  • ರಘುನಾಥ ಚ.ಹ.
ಆಕಾಶದ ಬಿಕ್ಕು
ಭೂಮಿಯಲ್ಲಿ
ಉಕ್ಕುಕ್ಕು !

*

ಆಕಾಶ ಬಿಕ್ಕು
ಭೂಮಿ ಭಿಕ್ಕು

*

ಮಳೆ ಬಂದ ಹೊತ್ತು
ಕಿವಿ ತುಂಬ ಕಲರವ
ಎದೆ ತುಂಬ ತೇವ

*

ಮಳೆಗೆ
ಕೊಡೆ ಹಿಡಿದೆ
ಕೊಡೆಯ
ಕೊಳೆ ಕಳೆಯಿತು

ಮಳೆಗೆ
ಮೈಯಾಡ್ಡಿದೆ
ಎದೆ ತುಂಬಿಕೊಂಡಿತು.

*

ಮಳೆಗುಂಟ
ಭೂಮಿಗಿಳಿವುದು
ಅಮೃತ ;
ಬೇಕಿದ್ದರೆ
ಮರಗಿಡಗಳ ಕೇಳಿ
ಅವಾಡವು ಅನೃತ

*

ಮಳೆರಾಯನಿಗೆ
ಕೊಟ್ಟವರಾರು ರಜೆ ;
ಒಕ್ಕಲು ಮಕ್ಕಳಿಗೆ
ಭೂಮಿಯಲ್ಲಿ ಸಜೆ.

*

ಮಳೆ
ಹೆಣ್ಣಿನಂತೆ ;
ಒಲಿದರೆ ಅತಿವೃಷ್ಟಿ
ಮುನಿದರೆ ಅನಾವೃಷ್ಟಿ

*

ಮಳೆ ಬಿತ್ತು
ನೆಲ ಉತ್ತು
ಬೀಜ ಬಿತ್ತು

*

ಮಳೆ ಮಾಯಿ
ನಮ್ಮನ್ನು ಕಾಯಿ


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X