Get Updates
Get notified of breaking news, exclusive insights, and must-see stories!

ಎದೆಯ ಭಾವದ ಮೂರು ಕವಲು


ಧಾರವಾಡದಲ್ಲಿ ನಿಂತು ಎಲ್ಲಿ ಕಲ್ಲು ತೂರಿದರೂ ಅದು ಕವಿಮನೆಯ ಮೇಲೆ ಬೀಳುತ್ತದೆನ್ನುವ ಮಾತೀಗ ಹಳೆಯದು. ಈಗ ಕರ್ನಾಟಕದ ತುಂಬಾ ಕವಿಗಳು ; ಕೊರತೆಯಿರುವುದು ಕಿವಿಗಳಿಗೆ ! ಅದೆಲ್ಲ ಪಕ್ಕಕ್ಕಿರಲಿ, ಕೆಲವು ಯುವ ಪ್ರತಿಭೆಗಳಾದರೂ ಗಮನ ಸೆಳೆಯುವಂತೆ ಕವಿತೆ ಬರೆಯುತ್ತಿರುವುದು, ಬೆನ್ನು ತಟ್ಟಿದರೆ ಬೆಳೆಯುತ್ತಾರೆ ಎಂದು ಆಸೆ ಹುಟ್ಟಿಸುವಂಥ ಇನ್ನೊಂದಷ್ಟು ಕವಿಕಿಡಿಗಳ ಸಮೂಹ ಕಾಣಿಸುತ್ತಿರುವುದು- ನೆಮ್ಮದಿ ಹುಟ್ಟಿಸುವ ವಿಷಯ. ತಾಳೀಕೋಟೆಯಲ್ಲಿ 2ನೇ ವರ್ಷದ ಬಿ.ಎ. ಕಲಿಯುತ್ತಿರುವ ಬಸವರಾಜೇಶ್ವರಿ ಪಾಟೀಲರನ್ನೇ ನೋಡಿ. ವಿದ್ಯಾರ್ಥಿದೆಶೆಯಲ್ಲಿಯೇ ನೂರಾರು ಕವಿತೆ ಬರೆದಿರುವ ಈ ಹೆಣ್ಣುಮಗಳು, ತಿದ್ದುವ ಶಿಲ್ಪಿಯಾಬ್ಬ ಸಿಕ್ಕರೆ ಒಂದಷ್ಟು ಒಳ್ಳೆಯ ಕವಿತೆ ಬರೆದಾಳು. ಆಕೆಯ ನೂರಾರು ಕವಿತೆಗಳಲ್ಲಿ ಇಲ್ಲಿವೆ ಮೂರು.Basavarajeshvari Patilಯಾರು ?

ಯಾರು, ಅವರ್ಯಾರು ?
ಹೂವಿನೊಳಗೆ ಅಂದವ
ಅದಕ್ಕೊಂದು ಬಣ್ಣವ
ಗಂಧದ ಮಧು ಪರಿಮಳವ
ತಂದು ಇಟ್ಟೋರ್ಯಾರು ?
ಯಾರು, ಅವರ್ಯಾರು ?

ಆಗಸದಲಿ ಮೋಡ
ಮೋಡದಲ್ಲಿ ನೀರು
ನೀರಿಗೆ ಹುರುಪ ತುಂಬಿ
ಸುರಿ ಅಂದವರ್ಯಾರು ?
ಯಾರು, ಅವರ್ಯಾರು ?

ಜಗದಾಗೆ ಅಂದವನು
ಅದಕ್ಕೆಂದೆ ಹೆಣ್ಣನ್ನು
ಮನದಾಗೆ ಆಸೆ ತುಂಬಿ
ತಂದು ಬಿಟ್ಟೋರ್ಯಾರು ?
ಯಾರು, ಅವರ್ಯಾರು ?

ಭೂಮಿಯಾಳಗೆ ಹೊನ್ನು
ಹೊನ್ನಿಗೆ ನೂರು ರೂಪ
ರೂಪಕೆ ಕೀರ್ತಿ ತುಂಬಿ
ನಮಗೆ ಕೊಟ್ಟೋರ್ಯಾರು ?
ಯಾರು, ಅವರ್ಯಾರು ?

ಜಗದೊಳು ಮನೆಯ
ಮನೆಯಲಿ ಮನುಜನ
ಮನದಲಿ ಭಾವನೆಯ
ಹುದುಗಿಸಿಟ್ಟವರ್ಯಾರು ?
ಯಾರು, ಅವರ್ಯಾರು ?

*

ಹನಿ !

ನೆಲದಿಂದಲೇ ಆಗಸಕೇರಿದೆ
ಹಲವಾಗಿ ರೂಪ ಪಡೆದೆ !

ನಾನಿಂದು ಬಂದೆ ಈ ಧರೆಗೆ
ತೊರೆದು ಹೋದ ನನ್ನ ತವರಿಗೆ !

ಎಲೆಯ ಮೇಲೆ ಹೊಳೆವಾಗ
ನಾನೊಂದು ಹವಳ,
ನಾನೊಂದು ಮುತ್ತು !
ಸೌಂದರ್ಯ ನನ್ನ ಸೊತ್ತು !

ಹೊಂಬೆಳಕಿನ ಸೂರ್ಯ ಜಗಕೊಬ್ಬನೆ ನಿಜ
ನನ್ನಲಿ ನೂರಾರು, ಸಾವಿರಾರು !

ಹನಿ ನೀರಲ್ಲೆ ಕಾಣುವುದು ಇಡೀ ಜಗ
ಮುಂದೆ ನಿಂತರೆ ಕಾಣುವುದು ನಿನ್ನ ಮೊಗ !

ನಾ ಹನಿಯೇ ಆದರೂ ಶೃಂಗಾರವು
ನಾ ಅಲ್ಪವೇ ಆದರೂ ಸೌಂದರ್ಯವು !

*

ಕಲ್ಪನೆಯ ಚಿತ್ತಾರ !

ಮನದ ಭಾವನೆಯಂತೆ
ಮೋಡಗಳ ಚಿತ್ತಾರ !
ಕಣ್ಣ ಕಲ್ಪನೆಯಂತೆ
ಮೋಡಗಳ ಆಕಾರ !

ಅಂಬೆ ಕಾಲಿಡುವ ಮಗು,
ತಾಯಿ ಕಣ್ಣಿಗೆ ;
ಆಟವಾಡೊ ಗುಂಡು ಚಂಡು
ಮುದ್ದು ಮಗುವಿಗೆ !
ಹೂವು ಬಿರಿದಂತೆ
ಅರಳೊ ಯುವ ಮನಸಿಗೆ !

ಬೆಟ್ಟವಿದೆ ಬಾನಲ್ಲಿ ,
ಮರವಿದೆ ಜೊತೆಯಲ್ಲಿ !

ನೂರು ನೂರು ಭಾವನೆ
ಅದರಂತೆಯೆ ಚಿತ್ತಾರ !
ನೂರು ನೂರು ಕಲ್ಪನೆ
ಅದರಂತೆ ಆಕಾರ !


ಮುಖಪುಟ / ಸಾಹಿತ್ಯ-ಸಂಸ್ಕೃತಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+