Get Updates
Get notified of breaking news, exclusive insights, and must-see stories!

ಚುಕ್ಕಿ ಚೆಲ್ಲ್ಯಾವೆ

  • ರಘುನಾಥ ಚ.ಹ.
ಅಂಗಳದ ತುಂಬ
ಚೆಲ್ಲಾಡ್ಯಾವ ಚುಕ್ಕಿ
ಯಾರಿಟ್ಟರು
ಪುಟ್ಟಿಯ ಬಾಯಲ್ಲಿ ಗಿಲಕಿ

*

ಅಂಟು ತೀರಿದ
ಚುಕ್ಕಿ
ಫಳಕ್ಕನೆ ಕಳಚಿದ ಗಳಿಗೆ
ಅರಳಿದವು
ಸಾವಿರ ಹೂವು

*

ಅದ್ಯಾರೊ
ಹುಡುಗಿ
ಬಲು ಚಾಲಾಕಿ
ಕತ್ತಲಲ್ಲೂ ಇರಿಸಿದ್ದಾಳೆ
ತಪ್ಪಿರದ ಚುಕ್ಕಿ

*

ಸದಾ
ಮಿನುಗುತ್ತೀಯಲ್ಲ ಚುಕ್ಕಿ
ಯಾವ ಸೋಪು ಬಳಸುತ್ತಿ ?

*

ಚುಕ್ಕಿ
ಹಗಲಿನಲ್ಲಿ ನಿಂದು ನಿದ್ರೇನ
ಸೂರ್ಯನ ಬಿಸಿಲಿಗೆ
ಕಪ್ಪಾಗುವ ಭಯಾನ

*

ಖದೀಮ ಚಂದ್ರನ
ಬೊಜ್ಜಿನಲ್ಲಿ
ಎಷ್ಟು ಚುಕ್ಕಿಗಳಿವೆಯಾ?

*

ಆಕಾಶ ಮಾರ್ಗದಲ್ಲಿ
ನಡೆದು ಹೋಗಿದ್ದಾಳೆ
ಅದ್ಯಾವಳೊ ಚೆಲುವೆ
ಮುಡಿಯಿಂದ ಜಾರಿದ
ಮಲ್ಲಿಗೆ ಮೊಗ್ಗುಗಳು
ದಾರಿಯುದ್ದಕೂ ಚೆಲ್ಲಿವೆ

*

ಬಾನಂಗಳದ ಮೂಲೆಮೂಲೆಯಲು
ಚಂದ್ರಮ ಚೆಚ್ಚಿದ ಚೆಂಡುಗಳು ;
ಔಟಾಗುವುದೇ ಇಲ್ಲ ಅವನು ಚಾಲಾಕು
ಅಂಪೈರು ಸೂರ್ಯನೇ ಆಟ ನಿಲ್ಲಿಸಬೇಕು.

*

ಆಕಾಶದ ಬಟ್ಟೆಯ ಮೇಲೆ
ಇಡುತ್ತಿದ್ದಾಳೆ ಚಂದ್ರಮ್ಮ ಸಂಡಿಗೆ
ಬಕಾಸುರ ಹಸಿವು ಉರಿಸೂರ್ಯನಿಗೆ
ಸಂಡಿಗೆ ಹಾಗೂ ಚಂದ್ರಮ್ಮ
ಬೆಳಗಿನ ತಿಂಡಿಗೆ

*

ಚುಕ್ಕಿಗಳಿಲ್ಲದ
ಮುಗಿಲು ;
ಕೂಸೊದೆಯದ
ಒಡಲ ದಿಗಿಲು

*

ಎತ್ತರೆತ್ತರ
ಹಾರಿದ ಹಕ್ಕಿಗಳು
ಮುಗಿಲಲ್ಲಿ ನೆಲೆನಿಂತ
ಚುಕ್ಕಿಗಳು

*

ರೇಖೆಗಳ
ಹಂಗ ಮೀರಿದ
ಚುಕ್ಕಿಗಳ ಚಿತ್ತಾರ
ಅಳತೆಗೋಲುಗಳ
ಪರಿಧಿ ಮೀರಿದ
ಚಿತ್ರಕಾರ

*

ಮುಗಿಲ
ಮಾಳಿಗೆಯಲ್ಲಿ
ಮಲ್ಲಿಗೆ
ಚೆಲ್ಲಾಪಿಲ್ಲಿ


ಮುಖಪುಟ / ಸಾಹಿತ್ಯ-ಸಂಸ್ಕೃತಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+