Get Updates
Get notified of breaking news, exclusive insights, and must-see stories!

ನನಗಷ್ಟೇ ಗೊತ್ತು

ಕನಸಿನಂಗಳ ತುಂಬ ಹವಳಗೆಂಪಿನ ಸಂಜೆ
ಒಡಲ ತುಂಬಾ ಮುಸ್ಸಂಜೆಯ ಹೊಂಗದಿರು
ಇಳಿದು ಭುವಿಗೆ ನಿನ್ನ ಜತೆಗೆ ನನ್ನನೂ ಕರೆಯಿತು,
ಹಕ್ಕಿ ಗೂಡಿನ ದಿಕ್ಕು ದಿಶಾಂತಕೂ ತಂಬೆಲರ ಹೊನಲು:
ನಿನ್ನ ಜತೆ ಕುಳಿತು ಕಳೆದೆರಡು ಕ್ಷಣಗಳೇ ಸಾಕು
ಯಾವ ಸೌಭಾಗ್ಯವೂ ಬೇಡ ನೀನೊಬ್ಬನಿರು ಸಾಕು

ಹೀಗೆ ನನ್ನೊಳಗಿನ ಭಾವ ನಿನ್ನೊಳಗಿಳಿವ ಮೌನ-
ರಾಗದ ಭಾಷೆ ...

ಹಗಲಿನ ದೀರ್ಘಯಾತ್ರೆಯ ಆಕಳಿಕೆ ಬೇಸರವೂ
ಇರುಳಿನ ಮುಸುಕಿನಲಿ ಕನಸುಗಳ ತಿಗಣೆಕಾಟ
ಆದರೂ ನಿನ್ನ ನೆನಪನೇ ಹೊದ್ದು ಮಿಸುಕಾಡಿವೆ ಬಯಕೆ;
ಕೈಜಾರಿ ಉರುಳುವ ಕ್ಷಣಗಳು ನನ್ನವಾಗಬೇಕೆಂದು
ಹಲುಬಿದೆ- ಮಿಡುಕಿದೆ, ಹೊರಳಿದೆ- ನರಳಿದೆ.. ನಾ
ಹುಡುಕಿದೆ ನಿನಗಾಗಿ, ಬಳಲಿದೆ- ಬಸವಳಿದೆ.
ನೆಗೆ ನೆಗೆದು ಓಡುವ ಎಳೆಗರುವಿನಂತೆ ಪುಟಿವ
ಹೃದಯದ ಹಂಬಲಿಕೆ ..!!

ಇದ್ದೆವು ನೀನೆತ್ತಲೋ ನಾನೆತ್ತಲೋ ಆಚೆಗೆಲ್ಲೋ ದೂರ
ಎಷ್ಟೋ ಸಾರಿ ನೀ ನಡೆದು ಬಂದಿರುವಿ ನನ್ನೂರಿನ ಹಾದಿ,
ಇರಬೇಕು ಯಾವದೋ ಜನುಮದ ಭವ ಬಂಧನದ ಸಿರಿ ;
ನಿನ್ನ ಸನಿಹದ ಹಿತವೇ ಬೇರೆ, ಮನಕೆಲ್ಲ ನಿನ್ನದೇ ಸ್ಮರಣೆ
ನೂರು ಮಾತಿಗೂ ಸಾವಿರ ವೀಣೆಯ ತಂತಿ ಮೀಟಿದೆ, ನನ್ನ-
ನರನಾಡಿಗಳಿಗೆಲ್ಲ ಸಪ್ತ ಸ್ವರಗಳ ಜೀವ ಲಾಸ್ಯವಾಡಿವೆ,
ನಿನ್ನೆದೆಗೆ ಒರಗಿ ಕರಗುವ ಬಯಕೆಯ ನೋವು.....
ಅಗಲಿಕೆಯ ಕಾವು ಗೆಳೆಯಾ !!


ಮುಖಪುಟ / ಸಾಹಿತ್ಯ-ಸಂಸ್ಕೃತಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+