Get Updates
Get notified of breaking news, exclusive insights, and must-see stories!

ಹಗಲ ದೀಪಗಳು

  • ಎಸ್‌.ಎಲ್‌. ಸುರೇಂದ್ರಕುಮಾರ್‌, ತುಮಕೂರು
    [email protected]
ಹಗಲಿರುಳೆನ್ನದೆ ಉರಿಯುತಿಹುದಿಲ್ಲಿ
ದಾರಿ ದೀಪಗಳು
ನನ್ನ (ಅ)ಂಗಳದಲಿ ಕಾಣದಾಗಿದೆ
ರಾತ್ರಿಯಲು ನೀಲ ಬೆಳಕು.

ಈ ಬುವಿಯ ಬೆಳಗುವ
ರವಿಯ ಕಾಂತಿಯು ಸಾಲದಾಗಿದೆ(ಯೆ)
ನನ್ನೊಳಗೆ ಇರುಳಿನ
ಚಂದಿರನ ಸ್ನೇಹವು ಬೆಳೆದಿದೆ.

ನೋಡುವವರಾರು ಹೇಳುವವರಾರು
ಕೇಳುವವರಾರಿಲ್ಲ ಇಲ್ಲಿ
ನಿನ್ನ ಕತ್ತಲು ನಿನ್ನ ಕರ್ಮ
ಎನ್ನುವವರೆಲ್ಲ ಇಲ್ಲಿ.

ಅಧಿಕಾರಿಗಳೆಲ್ಲ ಅಧಿಕಾರದ
(ಅವನತಿಯ) ಅಮಲಿನಲಿ
ನನ್ನ (ಅ)ಂಗಳ ಅವರಿಗೆ
ಮೂದಲಿಕೆಯಡಿಯಲ್ಲಿ.

ನಾನೇನರುಹನು ಅವರನು,
ಕಾಣಸಿಲ್ಲೊಂದಿಷ್ಟು ಬೆಳಕೆಂದು
ಕೇಳುವೆ ನಾನು ಅಪರಿಮಿತ
ಅವಸಾನದಿಂದ ರಕ್ಷಿ(ಸೆಂದು) ಸಲೆದು.

ಯಾರಿಗು ನಿಲುಕದ
ಯಾರಿಗು ಅರಿಯದ
ಈ ಹಗಲು ದೀಪಗಳೇಕೆ
ಉರಿಯುತಲಿರಬೇಕು.

ಈ ನಭೋ ಮಂಡಲದೊಡೆಯನ
ಮೇಲೇನು ಕಿಚ್ಚಿಹುದೆ
ಈ ಬೆಳಕವನಿಗೇನು
ಕಣ್ಣ ಕುಕ್ಕದು, ಅವನರಿವಿಗು ಇರದು.

ಇದ್ದರು ಅವನರಿವಿಗೆ ಅದು ಅವನ
ಕೂದಳೆಯ ದಶಕೋಟಿಯಾಂದು ಭಾಗ
ನಿಮ್ಮ ನಮ್ಮ ಭ್ರಮೆಗೆ ನಿಲುಕದು
ಇದನು ಕಂಡು ಅವನೊಮ್ಮೆ ನಕ್ಕು ಬಿಡುವನು.


ಮುಖಪುಟ / ಸಾಹಿತ್ಯ-ಸಂಸ್ಕೃತಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+