ಹನಿಗವನಗಳು
- ಬಿ.ಆರ್. ಲಕ್ಷ್ಮಣರಾವ್, ಚಿಂತಾಮಣಿ
ನಮ್ಮ ವ್ಯಾಪಾರಿಗಳಿನ್ನು
ಕೆಟ್ರೊ,
ನಮ್ಮವರೇ ನಮ್ಮವರ ಕೈ
ಬಿಟ್ರೊ,
ಮಾಯಾವಿಗೆ ಮನಸು
ಕೊಟ್ರೊ,
ಬಂದಿದೆ ಬೆಂಗಳೂರಿಗೆ
ಮೆಟ್ರೊ
*
ದಿಟ್ಟೆ
ಇವಳು ಇಂದಿನ ಹೆಣ್ಣು :
ಸ್ವಾವಲಂಬಿ, ದಿಟ್ಟೆ
ಗಂಡ ಧಿಮಾಕು ಮಾಡಿದರೆ
ಅನ್ನುತ್ತಾರೆ : ಬಿಟ್ಟೆ
*
ಪಾರ್ಥ, ಸಾರಥಿಗೆ
ಸಾಕು ಮಾಡು, ಕೃಷ್ಣ
ನಿನ್ನ ಬೋರು.
ಯುದ್ಧಕ್ಕೆ ನಾನು
ತಯ್ಯಾರು
*
ಪರಿಹಾರ
ವ್ಯವಸಾಯವನ್ನು ನಿಷೇಧಿಸಿ
ರೈತರ ಪ್ರಾಣ ಉಳಿಸಿ
*
ಪ್ರತಿಮೆ
ಗಾಂಧೀ ಪ್ರತಿಮೆಯ ತಲೆ ಮೇಲೆ
ಕೂತಿದೆ ಒಂದು ಕಾಗೆ,
ನಾವೇ ಕೂರಿಸಿದ ಹಾಗೆ.
*
ಮಡಿ
ಎಂಥೆಂಥ ಜನ ಅದನ್ನು
ಮುಟ್ಟಿದ್ದರೂ,
ಏನೇ ಕಲೆ, ಕಳಂಕ
ತೊಟ್ಟಿದ್ದರೂ,
ಮೈಲಿಗೆಯಲ್ಲ ಬಿಡಿ :
ನೋಟು
ಪುರೋಹಿತರ ಪಾಲಿಗೆ
ಸದಾ ಮಡಿ
ಪೂರಕ ಗದ್ಯ
ಭಾವಗೀತೆಗಳ ಕವಿಗೆ ಇದೋ ಭಾವನಮನ
More From
-
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video -
ಮತಾಂತರವಾದರೆ SC ಸ್ಥಾನಮಾನ ರದ್ದು ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಕೇಂದ್ರದ ವಿರುದ್ಧ ಕಾಂಗ್ರೆಸ್ ಕೆಂಡ












Click it and Unblock the Notifications