March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ
Horoscope March 26: ಗುರುವಾರ ದ್ವಾದಶ ರಾಶಿಗಳ ಗೋಚಾರ ಫಲ ಹೇಗಿದೆ ಎನ್ನುವ ಮಾಹಿತಿ ಇಲ್ಲಿದೆ. ಇದು ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಲೆಕ್ಕ ಹಾಕಿ ಬರೆದ ದಿನ ಭವಿಷ್ಯ ಇದಾಗಿದೆ. ಗುರುವಾರ ಮಧ್ಯಾಹ್ನ 1:30 ರಿಂದ 3:00 ರವರೆಗೆ ಇರುತ್ತದೆ. ಮಾರ್ಚ್ 26ರ ದಿನ ಭವಿಷ್ಯ: 12 ರಾಶಿಗಳಿಗೆ ಇಂದಿನ ಸಂಪೂರ್ಣ ಭವಿಷ್ಯ, ಫಲಾಫಲ ಮಾಹಿತಿ ಹೇಗಿದೆ ಎಂಬ ಪೂರ್ಣ ವಿವರ ತಿಳಿಯಿರಿ. ಜ್ಯೋತಿಷಿ ಪಂಡಿತ್ ವಿಠ್ಠಲ್ ಭಟ್ ಅವರ ಬರಹ ಇಲ್ಲಿದೆ.
ಮೇಷ
ಇಂದು ಸ್ಪರ್ಧಾತ್ಮಕ ಮನಸ್ಥಿತಿ ಹೆಚ್ಚಿರುವುದರಿಂದ ವೃತ್ತಿಯಲ್ಲಿ ಮುನ್ನಡೆಯುವಿರಿ. ಅನಿರೀಕ್ಷಿತ ಆರ್ಥಿಕ ಲಾಭವಾಗಬಹುದು. ಪ್ರೇಮ ಸಂಬಂಧದಲ್ಲಿ ಸ್ವಲ್ಪ ತಾಳ್ಮೆ ಅಗತ್ಯ. ಆರೋಗ್ಯದಲ್ಲಿ ಸಣ್ಣ ತಲೆನೋವು ಕಾಡಬಹುದು. ಹೊಸ ಯೋಜನೆಗಳಿಗೆ ದಿನ ಶುಭ. ಸಹೋದ್ಯೋಗಿಗಳ ಸಹಕಾರ ಸಿಗುವುದು. ಜೀವನಶೈಲಿಯಲ್ಲಿ ಸಣ್ಣ ಬದಲಾವಣೆ ಮಾಡಿಕೊಳ್ಳಿ.

ವೃಷಭ
ವಾಹನ ಸಂಬಂಧಿ ವಿಚಾರದಲ್ಲಿ ಶುಭ ಸುದ್ದಿ ಕೇಳಿಸಬಹುದು. ವಿದ್ಯಾರ್ಥಿಗಳಿಗೆ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಯ ದಿನ. ಆರ್ಥಿಕ ವ್ಯವಹಾರಗಳಲ್ಲಿ ಎಚ್ಚರಿಕೆ ವಹಿಸಿ. ಕುಟುಂಬದಲ್ಲಿ ಹಿರಿಯರ ಆಶೀರ್ವಾದ ಲಭಿಸುವುದು. ವೈವಾಹಿಕ ಜೀವನದಲ್ಲಿ ಸೌಹಾರ್ದತೆ ಹೆಚ್ಚುತ್ತದೆ. ದಾನ ಧರ್ಮಕ್ಕೆ ಮನಸ್ಸು ಹೋಗಬಹುದು. ರಾತ್ರಿ ಊಟದಲ್ಲಿ ಹಗುರ ಆಹಾರ ಸೇವಿಸಿ.
ಮಿಥುನ
ವೃತ್ತಿಯಲ್ಲಿ ಹೊಸ ಜವಾಬ್ದಾರಿ ಸಿಗುವ ಸಾಧ್ಯತೆ ಇದೆ. ಸಂಗಾತಿಯೊಂದಿಗೆ ಖರ್ಚಿನ ವಿಚಾರದಲ್ಲಿ ಒಮ್ಮತ ಮುಖ್ಯ. ವ್ಯಾಪಾರಿಗಳಿಗೆ ಲಾಭದ ಸುದ್ದಿ ಕಾದಿದೆ. ಪ್ರವಾಸದ ಯೋಜನೆ ಇದ್ದರೆ ಮುಂದೂಡುವುದು ಉತ್ತಮ. ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಲು ಧ್ಯಾನ ಸಹಕಾರಿ. ಸ್ನೇಹಿತರಿಂದ ಅನಿರೀಕ್ಷಿತ ಉಡುಗೊರೆ ಸಿಗಬಹುದು. ಅಪರಿಚಿತರ ಮಾತಿನ ಮೇಲೆ ಹಣ ಹೂಡಿಕೆ ಮಾಡಬೇಡಿ.
ಕರ್ಕ
ಆರೋಗ್ಯದ ವಿಷಯದಲ್ಲಿ ನಿರ್ಲಕ್ಷ್ಯ ಬೇಡ. ಮನೆಯಲ್ಲಿ ಶಾಂತಿ ಕಾಪಾಡಿಕೊಳ್ಳಲು ಹೆಚ್ಚಿನ ಸಮಯ ವಿನಿಯೋಗಿಸಿ. ಪ್ರೇಮಿಗಳ ನಡುವೆ ತಪ್ಪುಗ್ರಹಿಕೆ ದೂರವಾಗಿ ಸಂಬಂಧ ಬಲಗೊಳ್ಳುವುದು. ಉದ್ಯೋಗ ವರ್ಗದವರಿಗೆ ಶ್ರಮಕ್ಕೆ ತಕ್ಕ ಗೌರವ ಸಿಗುವುದು. ಕೋಪದ ಮೇಲೆ ತೀರ್ಮಾನ ತೆಗೆದುಕೊಳ್ಳಬೇಡಿ. ಸೃಜನಶೀಲ ಕಲೆಗಳಲ್ಲಿ ಆಸಕ್ತಿ ಹೆಚ್ಚುತ್ತದೆ.
ಸಿಂಹ
ವೃತ್ತಿ ಮತ್ತು ವ್ಯಾಪಾರದಲ್ಲಿ ಅನುಕೂಲಕರ ಸಮಯ. ಮನೆಯಲ್ಲಿ ಯಾವುದಾದರೂ ಶುಭ ಕಾರ್ಯ ನೆರವೇರಬಹುದು. ವಿದೇಶ ವ್ಯವಹಾರದಲ್ಲಿ ತೊಡಗಿರುವವರಿಗೆ ಲಾಭ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದ ನಿರ್ಧಾರ ಕೈಗೊಳ್ಳಿ. ದಂಪತಿಗಳ ನಡುವೆ ಪ್ರೀತಿ ವಿಶ್ವಾಸ ಹೆಚ್ಚುವುದು. ಮಧ್ಯಾಹ್ನದ ನಂತರ ಸಮಯ ಸ್ವಲ್ಪ ಒತ್ತಡದಿಂದ ಕೂಡಿರಬಹುದು.
ಕನ್ಯಾ
ಕಾರ್ಯಕ್ಷೇತ್ರದಲ್ಲಿ ಸ್ಪರ್ಧಿಗಳನ್ನು ಮೀರಿಸಿ ಯಶಸ್ಸು ಪಡೆಯುವಿರಿ. ಆಸ್ತಿ ಸಂಬಂಧಿ ವಿಚಾರದಲ್ಲಿ ಮಧ್ಯಸ್ಥಿಕೆಯ ಅಗತ್ಯವಿರಬಹುದು. ಪ್ರಣಯ ಪ್ರಸ್ತಾಪಕ್ಕೆ ಶುಭ ಸಮಯ. ಸಂಗೀತ, ಸಾಹಿತ್ಯದಲ್ಲಿ ಮನಸ್ಸು ತೊಡಗಿಸಿಕೊಳ್ಳಬಹುದು. ಅನಾರೋಗ್ಯದಿಂದ ಬಳಲುತ್ತಿದ್ದವರಿಗೆ ಗುಣಮುಖರಾಗುವ ಸೂಚನೆ. ಅತಿಯಾದ ಆತ್ಮವಿಶ್ವಾಸದಿಂದ ತಪ್ಪು ನಿರ್ಧಾರ ತೆಗೆದುಕೊಳ್ಳಬೇಡಿ. ಸಂಜೆ ವೇಳೆ ಉತ್ತಮ ಸುದ್ದಿ ಕೇಳಿಸಬಹುದು.
ತುಲಾ
ಇಂದು ಸಾಮಾಜಿಕ ಮಾನ್ಯತೆ ಹೆಚ್ಚಾಗುವ ದಿನ. ಸರ್ಕಾರಿ ಕೆಲಸದಲ್ಲಿರುವವರಿಗೆ ವರ್ಗಾವಣೆಯ ಸೂಚನೆ. ಸಂಬಂಧಿಕರಿಂದ ಆಹ್ವಾನ ಬರಬಹುದು. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸುವಿರಿ. ಸಂಜೆ ಸಮಯದಲ್ಲಿ ಮನಸ್ಸು ಚಂಚಲವಾಗಬಹುದು. ಹೊಸ ವಾಹನ ಖರೀದಿಗೆ ದಿನ ಶುಭ. ಕೌಟುಂಬಿಕ ಕಲಹ ಇದ್ದರೆ ಬಗೆಹರಿಯುವುದು. ಪಾಲುದಾರರೊಂದಿಗೆ ಸಮಯ ಕಳೆಯುವುದರಿಂದ ಸಂತೋಷ ಸಿಗುತ್ತದೆ. ಆರ್ಥಿಕವಾಗಿ ಸ್ಥಿರತೆ ಕಾಣಿಸುತ್ತದೆ.
ವೃಶ್ಚಿಕ
ಇಂದು ವಕ್ತೃತ್ವ ಮತ್ತು ನಾಯಕತ್ವ ಗುಣ ಹೊರಗೆಡಹಿ ಸಹಕಾರಿಗಳ ಮೆಚ್ಚುಗೆ ಗಳಿಸುವಿರಿ. ಪ್ರೇಮ ಸಂಬಂಧದಲ್ಲಿ ರೊಮ್ಯಾನ್ಸ್ ಹೆಚ್ಚುತ್ತದೆ. ಉದ್ಯೋಗ ಬದಲಾವಣೆಯ ಆಲೋಚನೆ ಇದ್ದರೆ ಯೋಚಿಸಿ ನಿರ್ಧರಿಸಿ. ಹೊಸ ಸ್ನೇಹ ಸಂಪಾದನೆಯಾಗಬಹುದು. ತಲೆ ಮತ್ತು ಕಣ್ಣುಗಳಿಗೆ ವಿಶ್ರಾಂತಿ ಅಗತ್ಯ. ರಾತ್ರಿ ವೇಳೆ ಅಜೀರ್ಣ ಸಮಸ್ಯೆ ಉಂಟಾಗಬಹುದು. ಅನಗತ್ಯ ಖರ್ಚಿನಿಂದ ದೂರವಿರಿ.
ಧನು
ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚುವುದು. ಪ್ರವಾಸದಿಂದ ವೃತ್ತಿ ಲಾಭ ಸಾಧ್ಯತೆ ಇದೆ. ಕಾನೂನು ವಿವಾದಗಳಿದ್ದರೆ ಅನುಕೂಲಕರ ತೀರ್ಪು ಸಿಗಬಹುದು. ಶಿಕ್ಷಣ ಕ್ಷೇತ್ರದಲ್ಲಿ ಹೊಸ ಅವಕಾಶಗಳು ಲಭಿಸುವುವು. ಸಂಜೆ ಸಮಯದಲ್ಲಿ ಕುಟುಂಬದೊಂದಿಗೆ ಆನಂದದಾಯಕ ಕ್ಷಣಗಳು. ದೇಣಿಗೆ ನೀಡುವ ಮನಸ್ಸಾಗಬಹುದು. ಸ್ವಲ್ಪ ತಾಳ್ಮೆ ವಹಿಸಿ ಕೆಲಸ ಮಾಡಿದರೆ ಉತ್ತಮ ಫಲಿತಾಂಶ.
ಮಕರ
ವೃತ್ತಿಯಲ್ಲಿ ಪ್ರಮೋಷನ್ ಅಥವಾ ಸಂಭಾವನೆ ಹೆಚ್ಚಳದ ಸೂಚನೆ ಇದೆ. ಹೊಸ ವ್ಯಾಪಾರ ಉದ್ಯಮಕ್ಕೆ ದಿನ ಶುಭ. ಪತ್ನಿಯೊಂದಿಗೆ ಸಮಯ ಕಳೆಯುವುದರಿಂದ ಸಂಬಂಧದಲ್ಲಿ ಸಿಹಿ ಹೆಚ್ಚುವುದು. ಮನೆಯಲ್ಲಿ ಅತಿಥಿಗಳ ಆಗಮನವಾಗಬಹುದು. ವಿದೇಶದಲ್ಲಿ ವ್ಯಾಸಂಗ ಮಾಡುವವರಿಗೆ ಶುಭ ಸುದ್ದಿ. ಸಂಜೆ ವೇಳೆಯಲ್ಲಿ ಮಾತಿನ ವಾಕ್ಚಾತುರ್ಯದಿಂದ ಎಲ್ಲರ ಮೆಚ್ಚುಗೆ ಪಡೆಯುವಿರಿ. ಆರೋಗ್ಯದಲ್ಲಿ ಸದೃಢತೆ ಕಾಣುತ್ತದೆ.
ಕುಂಭ
ಹೊಸ ಯೋಜನೆಗಳಿಗೆ ಇಂದು ಅದೃಷ್ಟದ ದಿನ. ಸಾಹಸ ಪ್ರವೃತ್ತಿಯಿಂದಾಗಿ ಅನಿರೀಕ್ಷಿತ ಲಾಭವಾಗುವ ಸಾಧ್ಯತೆ. ಪ್ರಣಯ ಪ್ರೇಮಿಗಳು ವಿವಾಹಕ್ಕೆ ಒಪ್ಪಿಗೆ ಪಡೆಯಬಹುದು. ಆನ್ಲೈನ್ ವ್ಯವಹಾರದಲ್ಲಿ ನಷ್ಟವಾಗುವ ಸಂಭವವಿದೆ, ಎಚ್ಚರಿಕೆ ವಹಿಸಿ. ಸಹೋದರ ಸಂಬಂಧಗಳು ಬಲಗೊಳ್ಳುವುವು. ಬ್ಯಾಂಕಿಂಗ್ ವ್ಯವಹಾರಗಳು ಸುಗಮವಾಗಿ ನೆರವೇರುವುವು. ಉದ್ಯೋಗ ವರ್ಗದವರಿಗೆ ವರ್ಕ್ ಲೋಡ್ ಹೆಚ್ಚಾಗಬಹುದು. ಸಮಯಕ್ಕೆ ಊಟ ಮಾಡಿ.
ಮೀನ
ಮನೆಯಲ್ಲಿ ಶುಭ ಸಮಾರಂಭ ನೆರವೇರುವ ಸೂಚನೆ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರಗತಿಯಾಗುವುದು. ವಿದೇಶದಿಂದ ಸಂಬಂಧಿಕರ ಆಗಮನವಾಗಬಹುದು. ಉದ್ಯೋಗದಲ್ಲಿ ಅಧಿಕಾರಿಗಳ ಮೆಚ್ಚುಗೆ ದೊರೆಯುವುದು. ಆರ್ಥಿಕವಾಗಿ ಸ್ವಲ್ಪ ಎಚ್ಚರಿಕೆ ಅಗತ್ಯ. ಸಂಜೆ ಸಮಯದಲ್ಲಿ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ. ರಕ್ತದೊತ್ತಡ ಸಮಸ್ಯೆ ಇದ್ದರೆ ನಿಯಂತ್ರಣದಲ್ಲಿಡಿ. ಸೃಜನಶೀಲ ಕೆಲಸಗಳಲ್ಲಿ ಮನಸ್ಸು ತೊಡಗಿಸಿ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್












Click it and Unblock the Notifications