Get Updates
Get notified of breaking news, exclusive insights, and must-see stories!

ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್‌ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ

ಮುಂಬೈ: ಜೀವನದಲ್ಲಿ ನಮಗೆ ಯಾವುದರಲ್ಲಿ ನಿಜವಾದ ಆಸಕ್ತಿ ಇದೆಯೋ, ಅದನ್ನು ಸಾಧಿಸಲು ಎಷ್ಟೇ ಕಷ್ಟವಾದರೂ ಹಿಂದೇಟು ಹಾಕಬಾರದು ಎಂಬುದಕ್ಕೆ 28 ವರ್ಷದ ನಮ್ರತಾ ಯಾದವ್ ಅವರೇ ಅತ್ಯುತ್ತಮ ಉದಾಹರಣೆ. ಸಿಂಗಾಪುರದಂತಹ ದುಬಾರಿ ನಗರದಲ್ಲಿ, ಪ್ರತಿಷ್ಠಿತ ಕೆಪಿಎಂಜಿ (KPMG) ಕಂಪನಿಯಲ್ಲಿ ಕೈತುಂಬಾ ಸಂಬಳ ತರುವ ಕಾರ್ಪೊರೇಟ್ ಕೆಲಸವಿದ್ದರೂ, ಕೇವಲ ಕವಿತೆ ಬರೆಯುವ ಮತ್ತು ಸಾಹಿತ್ಯದ ಮೇಲಿನ ಒಲವಿನಿಂದ ಆ ಕೆಲಸಕ್ಕೆ ರಾಜೀನಾಮೆ ನೀಡಿ ಅವರು ಭಾರತಕ್ಕೆ ಮರಳಿದ್ದಾರೆ. ಪ್ರಸ್ತುತ ಮುಂಬೈನಲ್ಲಿ ನೆಲೆಸಿರುವ ನಮ್ರತಾ, ಪೂರ್ಣಾವಧಿ ಬರಹಗಾರರಾಗಿ ತಮ್ಮ ಹೊಸ ಜೀವನವನ್ನು ಕಟ್ಟಿಕೊಳ್ಳುತ್ತಿದ್ದಾರೆ.

ಬ್ಯುಸಿನೆಸ್ ಇನ್ಸೈಡರ್ ಜೊತೆಗಿನ ಸಂದರ್ಶನದಲ್ಲಿ ತಮ್ಮ ಈ ದಿಟ್ಟ ನಿರ್ಧಾರದ ಬಗ್ಗೆ ಮುಕ್ತವಾಗಿ ಮಾತನಾಡಿರುವ ನಮ್ರತಾ ಯಾದವ್, "ನನಗೆ ಮೊದಲಿನಿಂದಲೂ ಬರವಣಿಗೆ ಮತ್ತು ಸೃಜನಶೀಲತೆಯೆಂದರೆ ಅಚ್ಚುಮೆಚ್ಚು. ಆದರೆ ನನ್ನ ಪೋಷಕರಿಗೆ ಬರವಣಿಗೆಯನ್ನು ವೃತ್ತಿಯನ್ನಾಗಿ ಸ್ವೀಕರಿಸುವುದು ಹಾಸ್ಯಾಸ್ಪದವಾಗಿ ಕಂಡಿತ್ತು" ಎಂದು ಹೇಳಿದ್ದಾರೆ. ಗ್ರಾಮೀಣ ಹಿನ್ನೆಲೆಯಿಂದ ಬಂದಿರುವ ಅವರ ಪೋಷಕರು, ತಮ್ಮ ಮಕ್ಕಳ ಭವಿಷ್ಯದಲ್ಲಿ ಆರ್ಥಿಕ ಭದ್ರತೆ ಮತ್ತು ಸ್ಥಿರತೆಗೆ ಹೆಚ್ಚಿನ ಆದ್ಯತೆ ನೀಡಿದ್ದರು. ಹೀಗಾಗಿ, ಭಾರತದ ಬಹುತೇಕ ಮಧ್ಯಮ ವರ್ಗದ ಕುಟುಂಬಗಳಂತೆ ಅವರ ಮನೆಯಲ್ಲೂ ಸೃಜನಶೀಲ ವೃತ್ತಿಗಳಿಗೆ ಆರಂಭದಲ್ಲಿ ಪ್ರೋತ್ಸಾಹ ಇರಲಿಲ್ಲ.

Indian Woman

ನಮ್ರತಾ ಅವರು ತಮ್ಮ ವೃತ್ತಿಜೀವನವನ್ನು ಆರಂಭಿಸಿದ್ದು ಕಾನೂನು, ಸಂಶೋಧನೆ ಮತ್ತು ಕನ್ಸಲ್ಟಿಂಗ್ ಕ್ಷೇತ್ರಗಳಲ್ಲಿ. ಸುಮಾರು 10 ವರ್ಷಗಳ ಕಾಲ ಈ ಕ್ಷೇತ್ರಗಳಲ್ಲಿ ವ್ಯಾಸಂಗ ಮತ್ತು ಕೆಲಸ ಮಾಡಿದ ನಂತರ, ಕಾರ್ಪೊರೇಟ್ ಜಗತ್ತು ತಮಗೆ ಸರಿಹೊಂದುವುದಿಲ್ಲ ಎಂಬ ಸತ್ಯ ಅವರಿಗೆ ಅರಿವಾಯಿತು. "ಕೇವಲ ವಾರಾಂತ್ಯದ ರಜೆಗಳಿಗಾಗಿ ಬದುಕುವ ಬದಲು, ನಾನು ಪ್ರತಿದಿನ ಆನಂದಿಸುವಂತಹ ಜೀವನವನ್ನು ನಡೆಸಲು ನಿರ್ಧರಿಸಿದೆ. ಹಾಗಾಗಿ, ಕಳೆದ ವರ್ಷ ಕೆಪಿಎಂಜಿ ಕೆಲಸವನ್ನು ಬಿಟ್ಟು ಸಿಂಗಾಪುರದಿಂದ ಮುಂಬೈಗೆ ಬಂದೆ" ಎಂದು ಅವರು ವಿವರಿಸಿದ್ದಾರೆ.

Bengaluru Rent: ಬೆಂಗಳೂರು ಬಾಡಿಗೆ, ಅಡ್ವಾನ್ಸ್‌ ದುಬಾರಿ: ದೆಹಲಿ, ಮುಂಬೈನಲ್ಲಿ ಇಷ್ಟಿಲ್ಲ, ನಾರ್ಥಿ ಯುವತಿ ವೈರಲ್ ವಿಡಿಯೋ
Bengaluru Rent: ಬೆಂಗಳೂರು ಬಾಡಿಗೆ, ಅಡ್ವಾನ್ಸ್‌ ದುಬಾರಿ: ದೆಹಲಿ, ಮುಂಬೈನಲ್ಲಿ ಇಷ್ಟಿಲ್ಲ, ನಾರ್ಥಿ ಯುವತಿ ವೈರಲ್ ವಿಡಿಯೋ

ಕಾನೂನು ಪದವಿ ಮುಗಿಸಿದ ನಂತರ, ನಮ್ರತಾ 2019 ರಿಂದ 2021 ರವರೆಗೆ ಸಿಂಗಾಪುರದ ನ್ಯಾಷನಲ್ ಯೂನಿವರ್ಸಿಟಿಯಲ್ಲಿ ಅಂತರರಾಷ್ಟ್ರೀಯ ಸಂಬಂಧಗಳ ಕುರಿತು ಸ್ನಾತಕೋತ್ತರ ಪದವಿ ಪಡೆದರು. ಆರು ತಿಂಗಳ ಕಾಲ ರಿಸರ್ಚ್ ಅನಲಿಸ್ಟ್ ಆಗಿ ಕೆಲಸ ಮಾಡಿದ ಬಳಿಕ, 2022 ರಲ್ಲಿ ಕನ್ಸಲ್ಟಿಂಗ್ ಕ್ಷೇತ್ರವನ್ನು ಅನ್ವೇಷಿಸುವ ಉದ್ದೇಶದಿಂದ ಕೆಪಿಎಂಜಿ ಕಂಪನಿಗೆ ಸೇರಿಕೊಂಡರು. ಅಲ್ಲಿ ಅವರ ವಾರ್ಷಿಕ ಆದಾಯ ಸುಮಾರು 57,000 ಸಿಂಗಾಪುರ್ ಡಾಲರ್ (ಅಂದಾಜು ₹42 ಲಕ್ಷ) ಇತ್ತು. ಸಿಂಗಾಪುರದಲ್ಲಿ ಮನೆ ಬಾಡಿಗೆ ಸೇರಿದಂತೆ ತಿಂಗಳಿಗೆ ಸುಮಾರು 3,200 ಡಾಲರ್ ಖರ್ಚಾಗುತ್ತಿದ್ದರೂ, ಅವರಿಗೆ ಆರ್ಥಿಕವಾಗಿ ಯಾವುದೇ ತೊಂದರೆ ಇರಲಿಲ್ಲ.

ಆದರೆ, ಕಚೇರಿಯ ಸುದೀರ್ಘ ಕೆಲಸದ ಅವಧಿ ಅವರಿಗೆ ನೆಮ್ಮದಿ ನೀಡಿರಲಿಲ್ಲ. ಹೊಸ ದೇಶದಲ್ಲಿನ ಆತಂಕವನ್ನು ನಿಭಾಯಿಸಲು ಅವರು ಬರವಣಿಗೆಯ ಮೊರೆ ಹೋದರು. ಸಂಬಂಧಗಳು, ಕುಟುಂಬ ಮತ್ತು ದೈನಂದಿನ ಅನುಭವಗಳ ಬಗ್ಗೆ ಬರೆಯಲು ಶುರುಮಾಡಿದರು. 2024 ರ ಡಿಸೆಂಬರ್‌ನಲ್ಲಿ ಲಕ್ನೋದಲ್ಲಿ ನಡೆದ ಸಾಹಿತ್ಯೋತ್ಸವವೊಂದರಲ್ಲಿ ಕವಿತೆ ವಾಚಿಸಲು ಅವಕಾಶ ಸಿಕ್ಕಾಗ ಅವರ ಜೀವನದ ದೃಷ್ಟಿಕೋನವೇ ಬದಲಾಯಿತು. ವೇದಿಕೆಯ ಮೇಲಿರುವವರನ್ನು ನೋಡಿ ಅಸೂಯೆ ಪಡುವ ಬದಲು, ತಾವೇ ಆ ವೇದಿಕೆಯ ಮೇಲೆ ನಿಲ್ಲಬೇಕು ಎಂದು ನಿರ್ಧರಿಸಿದರು.

ಸಿಂಗಾಪುರಕ್ಕೆ ಮರಳಿದ ತಕ್ಷಣ ಕೆಲಸಕ್ಕೆ ರಾಜೀನಾಮೆ ನೀಡಿ ಮುಂಬೈಗೆ ಶಿಫ್ಟ್ ಆದರು. ಪ್ರಸ್ತುತ ಅಂಧೇರಿ ವೆಸ್ಟ್‌ನಲ್ಲಿರುವ ಫ್ಲಾಟ್ ಒಂದರಲ್ಲಿ ವಾಸಿಸುತ್ತಿದ್ದು, ತಿಂಗಳಿಗೆ 34,000 ರೂಪಾಯಿ ಬಾಡಿಗೆ ಪಾವತಿಸುತ್ತಿದ್ದಾರೆ. ಸಿಂಗಾಪುರಕ್ಕೆ ಹೋಲಿಸಿದರೆ ಇಲ್ಲಿ ಖರ್ಚು ಕಡಿಮೆಯಾದರೂ, ಪ್ರತಿ ತಿಂಗಳು ಬರುತ್ತಿದ್ದ ಖಚಿತ ಸಂಬಳವಿಲ್ಲದೆ ಜೀವನ ನಡೆಸುವುದು ಅವರಿಗೆ ದೊಡ್ಡ ಸವಾಲಾಗಿದೆ. ಸದ್ಯಕ್ಕೆ ಸಿಂಗಾಪುರದಲ್ಲಿ ಕೆಲಸ ಮಾಡುವಾಗ ಉಳಿತಾಯ ಮಾಡಿದ್ದ ಹಣದಲ್ಲೇ ಅವರು ತಮ್ಮ ದಿನಚರಿಯನ್ನು ನಿರ್ವಹಿಸುತ್ತಿದ್ದಾರೆ.

ತಮ್ಮ ಕನಸಿಗೆ ಪೂರ್ಣ ಪ್ರಮಾಣದ ತೊಡಗಿಸಿಕೊಳ್ಳಲು ನಿರ್ಧರಿಸಿರುವ ನಮ್ರತಾ, ಮಾರ್ಚ್ 28 ರಂದು ತಮ್ಮ ಚೊಚ್ಚಲ ಏಕವ್ಯಕ್ತಿ ಕವನ ವಾಚನ ಕಾರ್ಯಕ್ರಮಕ್ಕೆ (Solo debut poetry show) ಸಿದ್ಧತೆ ನಡೆಸುತ್ತಿದ್ದಾರೆ. ಕಾರ್ಪೊರೇಟ್ ಜಗತ್ತಿನಲ್ಲಿದ್ದಂತೆ, ಮಾಡಿದ ಕೆಲಸಕ್ಕೆ ತಕ್ಷಣದ ಪ್ರತಿಫಲ ನಿರೀಕ್ಷಿಸುವ ಮನಸ್ಥಿತಿಯಿಂದ ಅವರು ಹೊರಬರುತ್ತಿದ್ದಾರೆ. "ಕೆಲವೊಮ್ಮೆ ನಾನು ಬರೆದದ್ದು ನನಗೇ ಇಷ್ಟವಾಗುತ್ತದೆ, ಇನ್ನು ಕೆಲವೊಮ್ಮೆ ಅದು ಇತರರೊಂದಿಗೆ ಹಂಚಿಕೊಳ್ಳಲು ಯೋಗ್ಯವಾಗಿರುವುದಿಲ್ಲ. ಹಾಗಾಗಿ ನಾನು ತಾಳ್ಮೆಯಿಂದಿರಲು ಕಲಿತಿದ್ದೇನೆ" ಎನ್ನುತ್ತಾರೆ.

ಬೆಂಗಳೂರು ಬಿಸಿನೆಸ್ ಕಾರಿಡಾರ್ ಆಗಿ ಬದಲಾದ ಪೆರಿಫೆರಲ್ ರಿಂಗ್ ರೋಡ್: 2029ರ ವೇಳೆಗೆ ನಗರದ ಟ್ರಾಫಿಕ್‌ಗೆ ಸಿಗಲಿದೆ ಮುಕ್ತಿ
ಬೆಂಗಳೂರು ಬಿಸಿನೆಸ್ ಕಾರಿಡಾರ್ ಆಗಿ ಬದಲಾದ ಪೆರಿಫೆರಲ್ ರಿಂಗ್ ರೋಡ್: 2029ರ ವೇಳೆಗೆ ನಗರದ ಟ್ರಾಫಿಕ್‌ಗೆ ಸಿಗಲಿದೆ ಮುಕ್ತಿ

ಆರಂಭದಲ್ಲಿ ಅವರ ನಿರ್ಧಾರವನ್ನು ವಿರೋಧಿಸಿದ್ದ ಪೋಷಕರು, ಈಗ ಮಗಳ ಪರಿಶ್ರಮವನ್ನು ನೋಡಿ ಬೆಂಬಲಿಸುತ್ತಿದ್ದಾರೆ. ಭವಿಷ್ಯದಲ್ಲಿ ಕಲೆಗಾಗಿ ಮತ್ತೆ ಕೆಲಸಕ್ಕೆ ಹೋಗುವ ಅನಿವಾರ್ಯತೆ ಬರಬಹುದು ಎಂಬುದನ್ನು ಅರಿತಿರುವ ನಮ್ರತಾ, ತಾವು ತೆಗೆದುಕೊಂಡ ನಿರ್ಧಾರದ ಬಗ್ಗೆ ಯಾವುದೇ ಪಶ್ಚಾತ್ತಾಪ ಹೊಂದಿಲ್ಲ. ಒಟ್ಟಿನಲ್ಲಿ, ತಮ್ಮ ಕನಸಿನ ಬೆನ್ನೇರಿ ಹೊರಟಿರುವ ನಮ್ರತಾ ಯಾದವ್ ಅವರ ಕಥೆ ಇಂದಿನ ಯುವಜನತೆಗೆ ನಿಜಕ್ಕೂ ಒಂದು ದೊಡ್ಡ ಸ್ಫೂರ್ತಿಯಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+