Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ.
Jowar Price Today in Karnataka: ಕರ್ನಾಟಕದಲ್ಲಿ ಈ ಬಾರಿ ಉತ್ತಮ ಜೋಳದ ಇಳುವರಿ ಬಂದಿದೆ. ಆದರೆ ಪ್ರತಿ ವರ್ಷದಷ್ಟು ಹೇರಳ ಪ್ರಯಾಣದಲ್ಲಿ ಉತ್ಪಾದನೆ ಆಗಲಿಲ್ಲ. ಕಡಿಮೆ ಪ್ರಮಾಣದಲ್ಲಿ ಜೋಳ ಬೆಳೆಯಲಾಗಿದೆ. ಹೀಗಿದ್ದರೂ ಕ್ವಿಂಟಾಲ್ ಜೋಳದ ಬೆಲೆ 1619 ರೂಪಾಯಿಯಿಂದ 4211ರೂಪಾಯಿಯಷ್ಟಿದೆ. ರಾಜ್ಯದ ಬಹುತೇಕ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ (APMC) ದರ ಕಡಿಮೆ ಇದ್ದು, ರೈತರಿಗೆ ಲಾಭದಾಯಕ ಬೆಲೆ ಸಿಗುತ್ತಿಲ್ಲ ಎಂಬ ದೂರುಗಳಿವೆ. ಈಗಾಗಲೇ ಜೋಳ ಕಟಾವು ಮಾಡಿರುವ ರೈತರಲ್ಲಿ ಕೆಲವರು ಉತ್ತಮ ಬೆಲೆಗಾಗಿ ಕಾಯುತ್ತಿದ್ದು, ದಾಸ್ತಾನು ಮಾಡಿಟ್ಟುಕೊಂಡಿದ್ದಾರೆ.
ರಾಜ್ಯದಲ್ಲಿ ಉತ್ತರ ಕರ್ನಾಟಕದ ಹಾವೇರಿ, ಧಾರವಾಡ, ವಿಜಯಪುರ, ರಾಯಚೂರು, ಗದಗ, ಕೊಪ್ಪಳ, ಕಲಬುರಗಿ ಸೇರಿದಂತೆ ವಿವಿಧೆಡೆ ಪ್ರತಿ ವರ್ಷ ಜೋಳ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಹಿಂಗಾರು ಬೆಳೆಯಾಗಿರುವ ಈ ಜೋಳ ಉತ್ತಮ ಇಳುವರಿ ನೀಡಿದೆ. ಆದರೆ ಮಾರುಕಟ್ಟೆಯಲ್ಲಿ ಉತ್ತಮ ದರ ಇಲ್ಲ ಎನ್ನಲಾಗಿದೆ. ಒಂದೊಂದು ಕಡೆ ಒಂದೊಂದು ದರ ಇದೆ. 2025ರ ಇದೇ ಋತುವಿನಲ್ಲಿ ಹೊಸಪೇಟೆಯಲ್ಲಿ ಕ್ವಿಂಟಾಲ್ ಜೋಳದ ಗರಿಷ್ಠ ದರ 5451 ರೂ.ವರೆಗೂ ಮಾರಾಟವಾಗಿತ್ತು. ಮಹಾರಾಷ್ಟ್ರದಲ್ಲಿ 6000 ರೂಪಾಯಿವರೆಗೆ ಮಾರಾಟವಾಗಿತ್ತು.

ಈ ವರ್ಷ 2000-4000 ರೂಪಾಯಿ ಆಸುಪಾಸಿನಲ್ಲಿ ಜೋಳ ಮಾರಾಟವಾಗುತ್ತಿದೆ. ಇಂದು (ಮಾ.27ರ ಸಂಜೆವರೆಗಿನ ಬೆಲೆ ಮಾಹಿತಿ ಪ್ರಕಾರ) ರಾಜ್ಯದ ಮಾರುಕಟ್ಟೆಗಳಲ್ಲಿ ಜೋಳ ಪ್ರತಿ ಕ್ವಿಂಟಾಲ್ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.
ಕ್ವಿಂಟಲ್ ಜೋಳದ ಮಾರುಕಟ್ಟೆವಾರು ದರ ಪಟ್ಟಿ
* ವಿಜಯಪುರ (ಬಿಜಾಪುರ) ಮಾರುಕಟ್ಟೆ: ಕನಿಷ್ಠ ದರ 4145 ರೂ. ಮತ್ತು ಗರಿಷ್ಠ ಬೆಲೆ 4145 ರೂಪಾಯಿ
* ರಾಣೆಬೆನ್ನೂರು (ಹಾವೇರಿ): ಕನಿಷ್ಠ ದರ 2600 ರೂ. ಮತ್ತು ಗರಿಷ್ಠ ಬೆಲೆ 2600 ರೂಪಾಯಿ
* ರಾಯಚೂರು: ಕನಿಷ್ಠ 2850 ರೂಪಾಯಿ ಮತ್ತು ಗರಿಷ್ಠ 2850 ರೂಪಾಯಿ
* ಮಾನ್ವಿ (ರಾಯಚೂರು): ಕನಿಷ್ಠ ದರ 3000 ರೂ. ಗರಿಷ್ಠ ಬೆಲೆ 3000 ರೂಪಾಯಿ
* ಕಲಬುರಗಿ: ಕನಿಷ್ಠ ದರ 3200 ರೂ. ಮತ್ತು 4625 ರೂಪಾಯಿ
* ಗದಗ: ಕನಿಷ್ಠ ದರ 1619 ರೂ. ಹಾಗೂ ಗರಿಷ್ಠ ಬೆಲೆ 4465 ರೂಪಾಯಿ
* ಅಮರಗೋಳ (ಹುಬ್ಬಳ್ಳಿ-ಧಾರವಾಡ): ಕನಿಷ್ಠ ದರ 1209 ರೂ. ಮತ್ತು ಗರಿಷ್ಠ ಬೆಲೆ 4015 ರೂಪಾಯಿ
* ಬೀದರ್: ಕನಿಷ್ಠ ದರ 3500 ರೂ. ಹಾಗೂ ಗರಿಷ್ಠ ಬೆಲೆ 4500 ರೂಪಾಯಿ.
* ಬಸವ ಕಲ್ಯಾಣ (ಬೀದರ್): ಕನಿಷ್ಠ ದರ 1600 ರೂ. ಹಾಗೂ ಗರಿಷ್ಠ ಬೆಲೆ 4200
ಕೆಲವೆಡೆ ಜೋಳ ಕಟಾವು ಮಾಡುವ ಹೊತ್ತಿಗೆ ಅಕಾಲಿಕ ಪೂರ್ವ ಮುಂಗಾರು ಮಳೆ ಆಗಿದೆ. ಅಲಿಕಲ್ಲು ಸಹಿತ ದ ಮಳೆಗೆ ಉತ್ತರ ಕರ್ನಾಟಕದ ಕೆಲವು ರೈತರು ಸಂಕಷ್ಟ ಅನುಭವಿಸುವಂತಾಗಿದೆ. ಜೋಳಕ್ಕೆ ಇನ್ನಷ್ಟು ಬೆಲೆ ಸಿಗಬಹುದೆಂಬ ನಿರೀಕ್ಷೆಯಲ್ಲಿ ಬೆಳೆದ ಬೆಳೆಯನ್ನು ದಾಸ್ತಾನು ಮಾಡಿಟ್ಟುಕೊಂಡಿದ್ದಾರೆ. ಕಳೆದ ಬಾರಿ ಮುಂಗಾರು ಬೆಳೆ ಮೆಕ್ಕೆ ಜೋಳಕ್ಕೆ ಆರಂಭದಲ್ಲಿ ಉತ್ತಮ ಸಿಕ್ಕಿತಾದರೂ ನಂತರ ಇಳಿಕೆ ಆಗಿತ್ತು.












Click it and Unblock the Notifications