RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್‌ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿಯ ಒಡೆತನವು ಅಧಿಕೃತವಾಗಿ ಹೊಸ ಮಾಲೀಕರ ಕೈಸೇರಿದೆ. ಈ ಐತಿಹಾಸಿಕ ಬದಲಾವಣೆಯ ಬೆನ್ನಲ್ಲೇ, ಆರ್‌ಸಿಬಿ ತಂಡದ ಮೊದಲ ಮಾಲೀಕ ಹಾಗೂ ಉದ್ಯಮಿ ವಿಜಯ್ ಮಲ್ಯ ಅವರು ಸಾಮಾಜಿಕ ಜಾಲತಾಣದಲ್ಲಿ ಭಾವುಕ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ. ಹೊಸ ಮಾಲೀಕರಿಗೆ ಶುಭಕೋರಿರುವ ಅವರು, 2008ರಲ್ಲಿ ಕೇವಲ 450 ಕೋಟಿ ರೂಪಾಯಿಗಳಿಗೆ ಈ ತಂಡವನ್ನು ಖರೀದಿಸಿದ ದಿನಗಳನ್ನು ಮೆಲುಕು ಹಾಕಿದ್ದಾರೆ.

ವಿಜಯ್‌ ಮಲ್ಯ ಪೋಸ್ಟ್‌ನಲ್ಲಿ ಏನಿದೆ?

ತಮ್ಮ ಎಕ್ಸ್ ಖಾತೆಯಲ್ಲಿ ಸುದೀರ್ಘ ಪೋಸ್ಟ್ ಮಾಡಿರುವ ವಿಜಯ್ ಮಲ್ಯ, "ಆರ್‌ಸಿಬಿಯ ಹೊಸ ಮಾಲೀಕರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಐಪಿಎಲ್‌ನ ಅತ್ಯಂತ ಮೌಲ್ಯಯುತ ಫ್ರಾಂಚೈಸಿಯೊಂದಿಗೆ ಹೊಸ ಪಯಣ ಆರಂಭಿಸುತ್ತಿರುವ ಅವರಿಗೆ ಶುಭವಾಗಲಿ. 2008ರಲ್ಲಿ ನಾನು 450 ಕೋಟಿ ರೂಪಾಯಿ ನೀಡಿ ಈ ಫ್ರಾಂಚೈಸಿಯನ್ನು ಖರೀದಿಸಿದಾಗ, ಬಹಳಷ್ಟು ಜನರು ನನ್ನನ್ನು ನೋಡಿ ನಕ್ಕಿದ್ದರು. ನನ್ನ ಈ ಹೂಡಿಕೆಯನ್ನು ಕೇವಲ ಶೋಕಿಗಾಗಿ ಮಾಡಿದ 'ವ್ಯಾನಿಟಿ ಪ್ರಾಜೆಕ್ಟ್' (Vanity Project) ಎಂದು ಟೀಕಿಸಿದ್ದರು. ಆದರೆ, ಆ ಟೀಕೆಗಳ ಹಿಂದೆ 'ರಾಯಲ್ ಚಾಲೆಂಜ್' ಬ್ರ್ಯಾಂಡ್ ಕಟ್ಟುವ ನನ್ನ ಹುಚ್ಚು ಕನಸಿತ್ತು. ಹಾಗಾಗಿಯೇ ತಂಡಕ್ಕೆ ಆರ್‌ಸಿಬಿ ಎಂದು ಹೆಸರಿಟ್ಟೆ. ಅಂದು ನಾನು ಹೂಡಿಕೆ ಮಾಡಿದ್ದ 450 ಕೋಟಿ ರೂಪಾಯಿ, ಇಂದು 16,500 ಕೋಟಿ ರೂಪಾಯಿಗಳಿಗೆ ಬೆಳೆದು ನಿಂತಿರುವುದನ್ನು ನೋಡಲು ಅತ್ಯಂತ ಖುಷಿಯಾಗುತ್ತದೆ" ಎಂದು ಬರೆದುಕೊಂಡಿದ್ದಾರೆ.

Vijay Mallya

ವಿರಾಟ್ ಕೊಹ್ಲಿ ಬಗ್ಗೆ ವಿಶೇಷ ಮೆಚ್ಚುಗೆ

ಹಾಗೆಯೇ ಆರ್‌ಸಿಬಿ ತಂಡವು ಯಾವಾಗಲೂ ತಮ್ಮ ಡಿಎನ್‌ಎ (DNA) ಯ ಒಂದು ಭಾಗವಾಗಿ ಉಳಿಯುತ್ತದೆ ಎಂದಿರುವ ಮಲ್ಯ, ಯುವ ಆಟಗಾರನಾಗಿದ್ದ ವಿರಾಟ್ ಕೊಹ್ಲಿಯನ್ನು ಆಯ್ಕೆ ಮಾಡಿದ ಮರೆಯಲಾಗದ ನೆನಪುಗಳನ್ನು ಹಂಚಿಕೊಂಡಿದ್ದಾರೆ. "ಇಂದು ವಿಶ್ವದ ಶ್ರೇಷ್ಠ ಆಟಗಾರರ ಸಾಲಿನಲ್ಲಿರುವ ವಿರಾಟ್ ಕೊಹ್ಲಿಯನ್ನು ಅಂದು ತಂಡಕ್ಕೆ ಆಯ್ಕೆ ಮಾಡಿದ್ದು ನನ್ನ ಪಾಲಿನ ಮರೆಯಲಾಗದ ನೆನಪು. ನನ್ನ ಆಡಳಿತಾವಧಿಯಲ್ಲಿ ಮತ್ತು ಆ ನಂತರವೂ ಆರ್‌ಸಿಬಿಯನ್ನು ಬೆಂಬಲಿಸಿದ ಎಲ್ಲಾ ಅಭಿಮಾನಿಗಳಿಗೂ ನನ್ನ ಕೃತಜ್ಞತೆಗಳು. ದಯವಿಟ್ಟು ಬೆಂಗಳೂರಿನ ಸಿಂಹ ಆರ್‌ಸಿಬಿಯನ್ನು ಹೀಗೆಯೇ ಬೆಂಬಲಿಸುತ್ತಿರಿ. ನಮಸ್ಕಾರ" ಎಂದು ಹೇಳಿದ್ದಾರೆ. ಈ ಹಿಂದೆ 2025ರಲ್ಲಿ ಆರ್‌ಸಿಬಿ ಮೊದಲ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದಾಗಲೂ ಮಲ್ಯ, ಕೊಹ್ಲಿಯನ್ನು ಆಯ್ಕೆ ಮಾಡಿದ ಕ್ಷಣವನ್ನು ಸ್ಮರಿಸಿದ್ದರು ಮತ್ತು 18 ವರ್ಷಗಳ ಕಾಲ ಕೊಹ್ಲಿ ಒಂದೇ ತಂಡದಲ್ಲಿ ಉಳಿದದ್ದನ್ನು ಶ್ಲಾಘಿಸಿದ್ದರು.

ಅಭಿಮಾನಿಗಳ ಪ್ರತಿಕ್ರಿಯೆ

ವಿಜಯ್ ಮಲ್ಯ ಅವರ ಈ ಪೋಸ್ಟ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಭಿಮಾನಿಯೊಬ್ಬರು, "ಒಂದು ವ್ಯಾನಿಟಿ ಪ್ರಾಜೆಕ್ಟ್‌ನಿಂದ ಶತಕೋಟಿ ಡಾಲರ್ ಸಾಮ್ರಾಜ್ಯವಾಗಿ ಬೆಳೆದದ್ದು ನಿಜಕ್ಕೂ ಒಂದು ರೋಚಕ ಕಥೆ" ಎಂದಿದ್ದಾರೆ. ಮತ್ತೊಬ್ಬರು, "ನಿಮ್ಮ ಅತ್ಯುತ್ತಮ ಹೂಡಿಕೆ ಎಂದರೆ ಅದು ವಿರಾಟ್ ಕೊಹ್ಲಿಯನ್ನು ಆಯ್ಕೆ ಮಾಡಿದ್ದು. ಆತ ಒಂಟಿ ಸಲಗದಂತೆ ತಂಡವನ್ನು ಮುನ್ನಡೆಸಿದ್ದಾರೆ. ಇಲ್ಲದಿದ್ದರೆ ಈ ತಂಡ ಎಂದೋ ಮರೆಯಾಗಿರುತ್ತಿತ್ತು" ಎಂದು ಕಮೆಂಟ್ ಮಾಡಿದ್ದಾರೆ.

ಆರ್‌ಸಿಬಿಯ ಹೊಸ ಮಾಲೀಕರು ಯಾರು?

ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ (USL) ಒಡೆತನದಲ್ಲಿದ್ದ ಆರ್‌ಸಿಬಿಯನ್ನು ಇದೀಗ ಭಾರತೀಯ ಮತ್ತು ಜಾಗತಿಕ ಉದ್ಯಮಗಳ ಒಕ್ಕೂಟವೊಂದು ಖರೀದಿಸಿದೆ. ವರದಿಗಳ ಪ್ರಕಾರ, ಆದಿತ್ಯ ಬಿರ್ಲಾ ಗ್ರೂಪ್, ಬ್ಲಾಕ್‌ಸ್ಟೋನ್ (Blackstone), ಬೋಲ್ಟ್ ವೆಂಚರ್ಸ್ (Bolt Ventures) ಮತ್ತು ಟೈಮ್ಸ್ ಆಫ್ ಇಂಡಿಯಾ ಗ್ರೂಪ್ ಒಳಗೊಂಡ ಒಕ್ಕೂಟವು ಬರೋಬ್ಬರಿ 1.78 ಬಿಲಿಯನ್ ಡಾಲರ್ (ಅಂದಾಜು 16,660 ಕೋಟಿ ರೂಪಾಯಿ) ನೀಡಿ ತಂಡವನ್ನು ಸಂಪೂರ್ಣವಾಗಿ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+