ಮನೆಯಲ್ಲಿ ಕಸದ ಬುಟ್ಟಿ ಎಲ್ಲಿ ಇಡಬೇಕು? ಈ ವಾಸ್ತು ನಿಯಮಗಳು ತಿಳಿದುಕೊಳ್ಳಿ
ಇಂದಿನ ದಿನಗಳಲ್ಲಿ ಬಹುತೇಕ ಜನರು ಅಪಾರ್ಟ್‌ಮೆಂಟಗಳಲ್ಲಿ ವಾಸಿಸುತ್ತಿದ್ದಾರೆ. ಸ್ಥಳದ ಅಭಾವದಿಂದಾಗಿ ಕೆಲವರು ಕಸದ ಬುಟ್ಟಿಯನ್ನು ಮನೆಯ ಮುಖ್ಯ ಬಾಗಿಲಿನ ಬಳಿ ಇಡುತ್ತಾರೆ. ಆದರೆ ಇದು ವಾಸ್ತು ಶಾಸ್ತ್ರದ ಪ್ರಕಾರ ತಪ್ಪು ಇದು ಸರಿಯಾದ ಪದ್ದತಿ ಅಲ್ಲವೆಂದು ತಜ್ಞರು ಹೇಳುತ್ತಾರೆ.
ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮುಖ್ಯ ದ್ವಾರವು ಸದಾ ಸ್ವಚ್ಚಂದವಾಗಿ ಮತ್ತು ಯಾವುದೇ ಅಡೆತಡೆಗಳಿಲ್ಲದೆ ಇರಬೇಕಾಗುತ್ತದೆ. ಬಾಗಿಲಿನ ಮುಂದೆ ಕಸದ ಬುಟ್ಟಿಯನ್ನು ಇಡುವುದರಿಂದ ಮನೆಯಲ್ಲಿ ನಕಾರತ್ಮಕ ಪರಿಣಾಮಗಳನ್ನು ಉಂಟುಮಾಡುತ್ತದೆ ಎಂದು ವಾಸ್ತು ತಜ್ಞರು ಹೇಳುತ್ತಾರೆ. ಆದ್ದರಿಂದ ಕಸದ ಬುಟ್ಟಿಯನ್ನು ಹೊಸ್ತಿಲಿನ ಬಳಿ ಇಡುವುದು ವಾಸ್ತು ಪ್ರಕಾರ ತಪ್ಪು ಎಂದು ಹೇಳುತ್ತಾರೆ.

ಇನ್ನು ದಿಕ್ಕುಗಳ ವಿಚಾರಕ್ಕೆ ಬಂದರೆ ಮನೆಯ ಆಗ್ನೇಯ ದಿಕ್ಕನ್ನು ಕಸದ ಬುಟ್ಟಿಗೆ ಸೂಕ್ತವಾದ ಜಾಗ ಎಂದು ಹೇಳಲಾಗುತ್ತದೆ. ನೈಋತ್ಯ ದಿಕ್ಕಿನಲ್ಲೂ ಇಡಬಹುದು ಇದರಿಂದ ಮನೆಯಲ್ಲಿ ಸಕಾರತ್ಮಕ ಶಕ್ತಿಯು ಹೆಚ್ಚುತ್ತದೆ ಎಂದು ನಂಬಲಾಗಿದೆ. ಪಶ್ಚಿಮ ಅಥವಾ ವಾಯುವ್ಯ ದಿಕ್ಕಿನಲ್ಲಿ ಇಡುವುದರಿಂದ ನಮ್ಮಲ್ಲಿ ಮಾನಸಿಕ ಒತ್ತಡವು ಕಡಿಮೆ ಆಗುತ್ತದೆ ಹಾಗೂ ನಾವು ಮಾಡುವ ಕೆಲಸದ ಮೇಲೆ ಗಮನವು ಹೆಚ್ಚುತ್ತದೆ.
ಆದರೆ ಅದೆ ದಿಕ್ಕುಗಳ ವಿಚಾರಕ್ಕೆ ಬಂದರೆ ಕೆಲವು ದಿಕ್ಕುಗಳಲ್ಲಿ ಕಸದ ಬುಟ್ಟಿಯನ್ನು ಇಡುವುದು ಒಳ್ಳೆಯದಲ್ಲಾ ಎಂದು ಹೇಳುತ್ತಾರೆ. ಈಶಾನ್ಯ ದಿಕ್ಕಿನಲ್ಲಿ ಇಟ್ಟರೆ ಆರೋಗ್ಯ ಮತ್ತು ಆರ್ಥಿಕ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ. ಉತ್ತರ ದಿಕ್ಕು ಕುಬೇರನ ಸ್ಥಾನ ಆಗಿರುವುದರಿಂದ ಅಲ್ಲಿ ಕಸ ಇಟ್ಟರೆ ಹಣಕಾಸಿನ ನಷ್ಟ ಉಂಟಾಗಬಹುದು. ಪೂರ್ವ ದಿಕ್ಕಿನಲ್ಲಿ ಇಟ್ಟರೆ ಸಮಾಜದಲ್ಲಿ ಗೌರವ ಕಡಿಮೆಯಾಗುವ ಸಾಧ್ಯತೆ ಇದೆ.
ಇನ್ನೊಂದು ಮುಖ್ಯ ವಿಷಯವೆಂದರೆ ಕಸದ ಬುಟ್ಟಿಗೆ ಯಾವಾಗಲೂ ಮುಚ್ಚಳ ಇರಬೇಕು. ತೆರೆದಿಟ್ಟರೆ ಬ್ಯಾಕ್ಟೀರಿಯಾ ಹರಡುವುದರ ಜೊತೆಗೆ ನಕಾರಾತ್ಮಕ ಶಕ್ತಿಯೂ ಹೆಚ್ಚುತ್ತದೆ ಎನ್ನಲಾಗುತ್ತದೆ. ಅಡುಗೆ ಮನೆಯಲ್ಲಿ ಕಸದ ಬುಟ್ಟಿ ಇಡುವುದು ಸಹ ವಾಸ್ತು ಪ್ರಕಾರ ಉತ್ತಮವಲ್ಲ. ಅಗತ್ಯವಿದ್ದರೆ ಮುಚ್ಚಳ ಇರುವ ಪಾತ್ರೆಯನ್ನು ಬಳಸುವುದು ಉತ್ತಮ.
ಕಸದ ಬುಟ್ಟಿಯನ್ನು ಸರಿಯಾದ ಸ್ಥಳದಲ್ಲಿ ಇಡುವುದು ಸಣ್ಣ ವಿಷಯವೆಂದು ಕಾಣಿಸಿಕೊಂಡರೂ, ವಾಸ್ತು ಪ್ರಕಾರ ಅದು ಮನೆಯ ಶಾಂತಿ, ಆರೋಗ್ಯ ಮತ್ತು ಸಮೃದ್ಧಿಯ ಮೇಲೆ ಪ್ರಭಾವ ಬೀರುತ್ತದೆ. ಸರಿಯಾದ ದಿಕ್ಕುಗಳನ್ನು ಪಾಲಿಸುವುದರಿಂದ ಮನೆಯಲ್ಲಿನ ಸ್ವಚ್ಛತೆ ಹೆಚ್ಚುವುದರ ಜೊತೆಗೆ ಸಕಾರಾತ್ಮಕ ವಾತಾವರಣವೂ ನಿರ್ಮಾಣವಾಗುತ್ತದೆ.












Click it and Unblock the Notifications