Get Updates
Get notified of breaking news, exclusive insights, and must-see stories!

ಮೆಟ್ಟಲಾಗದ ಮುಗಿಲು

ಬಿಳಿಯ ಆ ಏರು ಎತ್ತರದ
ಜಗದ ಮೋಡದ ಮಾಡಿಗೆ
ಹೆಸರಿಟ್ಟವರು ಯಾರು

ಏರಿದಷ್ಟೂ ಎವರೆಷ್ಟು
ಉಳಿಯುತ್ತದೆ ರವಷ್ಟು

ತೆರೆದ ಅಂಗಡಿಯ ತೆರದಿ
ಕಟ್ಟಕಡೆಯ ಗುಟ್ಟಿನರಿವೆಯ ತೊರೆದು
ಮಲಗಿರುವ ತರಳೆಯನ್ನ ಮಣಿಸಿ
ಮುಂದೇನ ಗೆಲ್ಲಲಿ ? ಎಂದು
ಎದೆಯುಬ್ಬಿಸಿ ನಿಂತವರಿಗೆ
ಎರಡೇ ಎರಡು ಮೆಟ್ಟಿಲೇರಲು
ಇವತ್ತು ಉಬ್ಬಸ-ಪ್ರಯಾಸ

ಮುದುರಿನಿಂತ ಕುದುರೆಗೆ
ಕೆನೆತವಿಲ್ಲ , ಅವತ್ತಿನ ಮೊರೆತವಿಲ್ಲ

ಕೈಗೆ ಮೆತ್ತಿದ ಬಣ್ಣ ನೆನಪು
ಎಷ್ಟು ತೊಳೆದರೂ ಜಾರದು
ಹೆಜ್ಜೆ ಗುರುತುಗಳೆಲ್ಲಾ
ಹಿಮದಡಿಯ ಸಮಾಧಿ

ಈ ಹತ್ಯೆ ಹತಾರುಗಳ
ಹೊತ್ತ ಧೀರರ ಯಾವ ಮಾತೂ
ಅಲ್ಲಿ , ನಿಲ್ಲಲೆಡೆಯಿಲ್ಲ
ಅದೇ ಶೂನ್ಯ ಮೌನದ
ಹಿಮದ ನಿರುತ್ತರ

ತೆರೆದ ಅಂಗಡಿಯ ತೆರದಿ ಕಂಡವರಿಗೆ
ನಿಗೂಢ ಗುಹೆಯ ಕೀಲಿ ಕೈ
ದೊರಕಲೇ ಇಲ್ಲ

ಮಾತಿನೆತ್ತರ ಮೌನದೆತ್ತರ
ಮಾತು-ಮೌನ-ಅರ್ಥಗಳ
ಮೀರಿದ ವಿಸ್ತಾರ
ಮೂರ್ತವಾಗಲೇ ಇಲ್ಲ

ಮೆಟ್ಟಿ ಬಾವುಟ ನೆಟ್ಟ
ಪ್ರತಿ ಎತ್ತರದ ತುದಿಗೂ
ಒಂದೊಂದು ಬಟಾ ಬಯಲು


ತರಳೆ ಮಾತ್ರಾ ನಿರುಮ್ಮಳ
ಮಲಗಿದ್ದಾಳೆ
ಏರಿ ಬರುವವರ
ಮತ್ತೆ ಮತ್ತೆ ಕರೆದು


ಮುಖಪುಟ / ಸಾಹಿತ್ಯ-ಸಂಸ್ಕೃತಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+