Get Updates
Get notified of breaking news, exclusive insights, and must-see stories!

ಜುಟ್ಟು

  • ಕಡೂರು ನಾಗರಾಜ್‌, ಚಿಕ್ಕಮಗಳೂರು
    [email protected]
ನಮ್ಮ
ತಲೆಮಾರಿನವರು ನೆಟ್ಟ
ಸಸಿ ಬೇರು ಬಿಟ್ಟು
ದರ ಪರಿಣಾಮ ಈ
ಎಲ್ಲಿದರ ಹುಟ್ಟು ?

ಕಂದಾಚಾರದ
ಕಂದಕದೊಳಗೆ
ಮಿಂದುಬಂದವರಂತೆ
ತಮ್ಮನ್ನು ತಾವೇ
ಶೋಷಿಸಿಕೊಂಡು
ಕಾಣದೂರಿನ ನಾಯಕ
ಮಣಿಗಳು ತಾವೆಂಬ
ಹಮ್ಮು ಬಿಮ್ಮಲಿ ಮೆರೆದು
ನಡೆದಾಡುವ ಈ ತಲೆಗಳ
ಮೇಲಿನ ತಲತಲಾಂತರದ

ಏನಿದರ ಗುಟ್ಟು ?

ಸುತ್ತ ತನ್ನವರೆಲ್ಲ
ಕಾಲನ ಕತ್ತರಿಯ
ದವಡೆಯಲಿ ನಜ್ಜು
ಗುಜ್ಜಾಗುತ್ತಿದ್ದರೂ
ತಾನು ಮಾತ್ರ
ಅಚಲನೆಂಬಂತೆ
ಸಾವಿಲ್ಲದವನಂತೆ
ಮಂಡೆಯ ಮೇಲೆ
ರಾರಾಜಿಸುತ್ತಿರುವ
ಈ ಬಡಪಾಯಿ
ಇಂದಲ್ಲ - ನಾಳೆ
ಸರಿಯದಿದ್ದೀತೇ?
ಈ ಜಗವ ಬಿಟ್ಟು ?


ಮುಖಪುಟ / ಸಾಹಿತ್ಯ-ಸಂಸ್ಕೃತಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+