ಚಂದ್ರಾಮನ ಮೋಡಿ
- ರೇಣುಕಾ ಶ್ಯಾಮ್, ನವದೆಹಲಿ
[email protected]
ಕಿಲುಗುಡುವ ಚುಕ್ಕಿಗಳ ಖಾಲಿ ಗೂಡಿನಲಿ,
ಬೆಳ್ಳಿ ಗಿಂಡಿಯ ತುಂಬ ಕರೆದು ನೊರೆಹಾಲು
ಸುರಿದಂಗ ಬೆಳಗ್ಯಾನೋ ಚೆಲುವ ಚೆನ್ನಿಗನು
ಚೆಲುವ ಚೆನ್ನಿಗ ನಮ ಚಂದ್ರಾಮ..
ಅಂಗಳದ ತುಂಬೆಲ್ಲ ರಂಗೋಲಿ ಎಳೆದಾನೋ,
ಗಂಗಾಳದ ಬಾನಕ್ಕೆ ಕೆನೆಮೊಸರು ನೀಡ್ಯಾನೋ,
ಚಪ್ಪರದ ಅವರಿಯ ಹೂವಾಲ್ಲಿ ಅಡಿಗ್ಯಾನೋ,
ತೊಟ್ಟಿಲದ ಹಸುಗೂಸಿನ ಮಾರಿಯ ತೊಳದಾನೋ....
ಮಾರಿಯ ತೊಳದಾನೋ ನಮ ಚಂದ್ರಾಮ.
ಕಾಡು ಮೇಡಲಿ ನುಸುಳಿ ಅರಸರಸಿ ಅಲೆದಾನೋ,
ಮುಂಬಾಗಿಲ ತುಂಬೆಲ್ಲ ಸಿರಿಬೆಳಕ ಚೆಲ್ಲ್ಯಾನೋ,
ಮೆಲ್ಲಗೆ ಹಿತ್ತಲ ನಸುಬಳ್ಳಿಯ ತಡವ್ಯಾನೊ,
ಗಡಬಡಿಸಿ ಮೋಡಗಳ ಚದುರಿಸುತ ಓಡ್ಯಾನೋ.
ಚದುರಿಸುತ ಓಡ್ಯಾನೋ ನಮ ಚಂದ್ರಾಮ
ಉಕ್ಕೇರಿ ಸೊಕ್ಕೇರಿ ಅಂಬುಧಿಯು ಮೆರೆದಾಳು,
ಹುಚ್ಚೇರಿ ಮತ್ತೇರಿ ವನರಾಜೀ ನಕ್ಕಾಳು,
ನೊಂದೊರಿಗೆ ಬೆಂದೊರಿಗೆ ತಂಬೆಳಕ ತಂದಾನೊ
ಕಾರ್ತಿಕದ ದೀವಳಿಗೆಗೆ ಹೊಂಬೆಳಕ ತುಂಬ್ಯಾನೋ....
ಹೊಂಬೆಳಕ ತುಂಬ್ಯಾನೋ ನಮ ಚಂದ್ರಾಮ !
ಇರುಳ ಹೊಳೆಸಾಲಲ್ಲಿ ಬೆಳ್ಳಕ್ಕಿ ಹಾರ್ಯಾವು.
ಹಗಲ ಮಗ್ಗುಲ ಸರಿದು ನಿಶೆಯು ತೂಕಡಿಸ್ಯಾಳು,
ಚಿಕ್ಕರಸಿಯ ಕಣ್ಗೊಳದಿ ಕನಸುಗಳು ತೇಲ್ಯಾವು,
ಲೌಕಿಕದ ಸೊಂಕುಗಳು ವಿಸ್ಮಯದಿ ಓಡ್ಯಾವು,
ಬೆರಗಾಗಿ ನಕ್ಕಾನೋ ನಮ ಚಂದ್ರಾಮ !!
More From
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications