Get Updates
Get notified of breaking news, exclusive insights, and must-see stories!

ಗತಿ-ಚಿತ್ರ

  • ಪ್ರಮೀಳಾ ಚೊಕ್ಕಾಡಿ, ಬೆಳ್ತಂಗಡಿ
1

ಜಾತಿ ಅಂತಸ್ತಿನ ಪ್ರಶ್ನೆ ನಿನ್ನಂಥ ವಿವೇಕಿಗೆ
ಸರಿಹೊಂದುವುದಿಲ್ಲ ಅಂದಿದ್ದಳು
ಅಷ್ಟಕ್ಕೂ ಅವನೇನು ಕುಡುಕನೇ? ಡಕಾಯಿತನೇ?
ಸುಸಂಸ್ಕೃತ ಸುಶಿಕ್ಷಿತ ಮಿಗಿಲಾಗಿ
ಮನುಷ್ಯ ರೂಪದ ಮನುಷ್ಯನೇ ಹೌದೆಂದಿದ್ದಳು
ಜಪ್ಪೆನ್ನಲಿಲ್ಲ ಅಪ್ಪ

2

ಮಗಳು ಮನೆಬಿಟ್ಟು ದೂರದೂರು ಸೇರಿದ್ದಾಯ್ತು
ವರ್ಷಗಟ್ಟಲೆ ಮನೆಯವರ ಒಪ್ಪಿಸಲು ಆಗಾಗ
ತವರೂರಿಗೆ ಅಲೆದದ್ದಾಯ್ತು
ದ್ವೇಷ ಸಾರ್ವಕಾಲಿಕವಲ್ಲ
ಕಳೆದ ಕಾಲ ಮರಳಿ ಬರುವುದಿಲ್ಲ
ಇರುವೊಂದು ಬದುಕಿನುದ್ದ ನಮ್ಮ ನಮ್ಮೊಳಗೆ
ಖಾಲಿತನದ ಕಾರ್ಮೋಡಗಳೇಕೆ-
ಅಂಗಲಾಚಿದಳು ಮಗಳು
ಜಪ್ಪೆನ್ನಲಿಲ್ಲ ಅಪ್ಪ

3

ಮೊನ್ನೆ ಮೊನ್ನೆ ಆ್ಯಕ್ಸಿಡೆಂಟಿನಲಿ
ತೀರಿಹೋದದ್ದೇ ಅಳಿಯ
ಯಾಕೋ ಬಂದೇಬಿಟ್ಟ ಮಾವ
ಮಗಳಿಗಿನ್ನೂ ಹರೆಯ
ಕಂಬನಿಗರೆದು ಅಪ್ಪ
ಮನೆಗೆ ಕರೆದ-
ನಕ್ಕುಬಿಟ್ಟಳು ಹುಡುಗಿ
ಅವ ಬಿಟ್ಟುಹೋದ ಉಸಿರಿನೊಂದಿಗೆ ಬದುಕುತ್ತಿದ್ದೇನೆ
ಬರಲಾರೆ ಅಂದಳು

4

ಹಳ್ಳಿಯಲ್ಲೀಗ ಮುದುಕನಿಗೆ ಮಗಳ ಬಾಲ್ಯದ್ದೇ ಮೆಲುಕುಗಳು..........


ಮುಖಪುಟ / ಸಾಹಿತ್ಯ-ಸಂಸ್ಕೃತಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+