ಕೈಕೊಟ್ಟ ಹುಡುಗಿಯ ಸಕಾರಣ ಕಾವ್ಯ
- ಲಲಿತಾ ಸಿದ್ಧಬಸವಯ್ಯ, ತುಮಕೂರು
ಎಂದು ಬಿಟ್ಟಿರಿ ಸುಲೂಭವಾಗಿ
ಕೊಟ್ಟಿದ್ದು ನಿಜ ; ಒಪ್ಪಿಕೊಂಡೆ
ಆದರೆ ದೂರು ಹೊರಿಸುವ ಮೊದಲು
ಕೆದಕಿ ಮೂಲದ ಬೇರು
ಸತ್ಯಾಂಶ ತಿಳಿಯುವುದು ನಿಮ್ಮ
ಭಾದ್ಯತೆಯಲ್ಲವೇನ್ರಿ....
ಅಲ್ಲರೀ
ಆ ಗೂಬೆ ಬರೆದದ್ದೇ ಬರೆದದ್ದು
ಅದರಲ್ಲೇ ಅದಷ್ಟರಲ್ಲೇ
ಕಳೆದುಬಿಟ್ಟ
ಘನವಾದ ಮೂರು ವರುಷ
ಬರೀ ಕಾಗದದ ಮೇಲೇ ಸುರಿತ
ಧೋ ಧೋ ಧೋ ಧೋ
ಅಮೋಘ ಪ್ರೇಮ ವರ್ಷ
ಯಾರೂ ಇಲ್ಲದ ಹೊತ್ತು ಕಾಯ್ದು ಹುಡುಕಿಟ್ಟು
ಮನೆಗೆ ಕರೆದೆ
ಅಯ್ಯ ಅಲ್ಲಿಯೂ ಓದಿದ್ದು
ಅದೇ ಹಳೆಯ ಪದ
ಅದರ ತುಂಬಾ ಗಿಡುಗಿದ್ದ , ಗಿಡುಗಿದ್ದಾ
ಕ್ರಿಯಾಪದವೇ ಇರದ ಪುಂಖಾನುಪುಂಖ
ಉಪಮಾನ, ಉಪಮೇಯ, ಮತ್ತೇಭವಿಕ್ರೀಡಿತ ವೃತ್ತ
ಕವಿತೆಯಲ್ಲಿರಬೇಕು ಪ್ರತಿಮೆ, ಸರಿ
ಕವಿತೆಯೇ ದುರ್ದುಂಡು ಪ್ರತಿಮೆಯಾಗಿ ಕೂತುಬಿಟ್ಟರೆ
ಹ್ಯಾಗ್ರೀ....
ಅವ ಏನಿದ್ದರೂ ನೋಡ್ರೀ
ಸರ್ಕಸ್ಸಿನ ಪುರುಷಸಂಹ
ಬೋನಿನ ತ್ರಿಜ್ಯದೊಳಗೇ ಗಿರಕಿ
ಜಿಗಿತ ಮರೆತುಬಿಟ್ಟಿದ್ದಾನೆ ಹಿಂದಿನ ಜನ್ಮಕ್ಕೇ
ಘರ್ಜನೆಯೂ ವರ್ಜಿತ
ಪಂಜರದ ಬಾಗಿಲು ಇಟ್ಟಿದ್ದರೂ ಖುಲ್ಲಾ
ಮೂರ್ಖ ಮುಂಡೇದಕ್ಕೆ
ಹೊರಬರುವ ಇರಾದೆಯೇ ಇಲ್ಲ
ಹುಲ್ಲಲ್ಲಿ ಕೊಯ್ದಂತೆ ಹಲಸಿನ ಹಣ್ಣು
ತಿಕಮಕವೆಲ್ಲಾ ಅಂಟು
ಇವನ ನೆಂಟಸ್ತನ, ಕಟ್ಟಿಕೊಂಡವಳಿಗೆ ಗಟ್ಟಿ
ನೋಡುತ್ತಿರಿ
ಅಖಂಡ ಕನ್ಯಾ ಮುತ್ತೆೈದೆತನ
ನನಗೆ ಚಪಲವಿಲ್ಲ
ಚಿತ್ತವಿಸ್ತಾರವಿದೆ ಸುಜಲಾ ಸುಫಲಾ ವಾರಿಜಶೀತಲಾ
ಅದಕ್ಕೇ ಆ ಹೇಸರಗತ್ತೆಗೆ ಕೊಟ್ಟೆ ಕೈ
ಅಷ್ಟಕ್ಕೂ ಅವನಿಗೆ ಇನ್ನೇನು
ಕೊಡಬಹುದಿತ್ತು ?
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications