Get Updates
Get notified of breaking news, exclusive insights, and must-see stories!

ಇರುಳು

ಪಡುವಣದೋಳ್‌ ರವಿಯು ಕೂಡಲು
ಅಸೂಯೆಯಿಂದ ಕಣ್ಮುಚ್ಚಿದ ಹಗಲು
ಜಾರಿಣಿಯರಿಗೆ ಬದುಕು, ಚೋರರಿಗೆ ಬೆಳಕು
ಗೂಬೆಗೆ ಹಗಲಾಗುವುದು ಈ

ಬಣ್ಣವಿದ್ದಂತೆ ವೃದ್ಧರ ಬಿಳಿ ಕೂದಲಿಗೆ
ಆಗಸದಿಂದೀ ನಭದೊಳು ಚೆಲ್ಲಿದ ಕಾಡಿಗೆ
ಕವಿರತ್ನ ಮಾತೃವಿನ ಹರಡಿದ ಸಿರಿಮುಡಿ
ಅವಳ ಕೆಂಗಣ್ಣಿಗೆ ಕರಕಲಾದ ಪುಡಿ ಈ

ಮನದ ಒಂದು ಮೂಲೆಯಾಳಗೆ
ಕನಸನ್ನು ನೆನಪಿಸಿತು ಮಬ್ಬಿನೊಳಗೆ
ಕನಸುಗಳ ಕುದುರೆಯನ್ನೇರಿ ಹಾರಿ ಹೋಗಲು
ಕಾಲವು ಬೀಸಿದ ಬಲೆಯು ಈ

ತಮಮೇ ಕಂಗಳುಗಳಿಗೆ, ಕರ್ಣಗಳಿಗೆ
ತಮಮೇ ಇಂದ್ರಿಯಗಳಿಗೆ, ಕವಚ ಆಹಂಗೆ
ಎಚ್ಚರವಾಗುವುದೇನು? ಮೂರ್ಚೆ ಹೋದ ಜಗವು
ಈ ಭೀಷಣತೆಯಿಂದೆದ್ದು ಬರುವುದೇನು ಹಗಲು

ಇರುಳೆಂದರೇನು? ಬೆಳಕಿನ ನೆರಳು
ಕಾಣಲಾದೀತೇ? ಬೆಳಕಿನಿಂದ
ಬೆಳಕಾಯಿಸೆ ಇರಿದಂತೆ ಅದರ ಕೊರಳು
ಒಳ ಬೆಳಕಿನಿಂದೊಡಿಸಬೇಕು ಈ


ಮುಖಪುಟ / ಸಾಹಿತ್ಯ-ಸಂಸ್ಕೃತಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+