ಹೊಸವರುಷವೆಂದರೆ
- ಎಸ್.ಎಲ್. ಸುರೇಂದ್ರಕುಮಾರ್, ತುಮಕೂರು
[email protected]
ಹೊಸ ವರುಷ ಬಂದಿದೆ
ಹರುಷ ಹರುಷ ತಂದಿದೆ
ಹೊಸತು ಹೊಸತು ಎಂದಿದೆ...
ಹೊಸ ವರುಷವಿದು ಬಂದಿರಲು
ಎಲ್ಲರೊಳಗೆ ಹೊಸ ಆಸೆಗಳು
ಹೊಸ ತನವನು ತಂದಿರಲು
ಜನರೊಳಗೆ ಹೊಸ ಬಯಕೆಗಳು...
ಯಾರಿಗಿದು ಹೊಸದು ಎಂದಾಗ
ಭೂಮಿಗಾದರು ಆ ಸೂರ್ಯನೆ ದಿನವು
ಇರುಳಿಗಾದರು ಆ ಚಂದಿರನೆ ಕತ್ತಲು
ಬದಲಾವಣೆಗಳಿರದು ನಮಗಾದರೇವುದರಲು
ನಾವಾದರು ಕುಳಿತು ಯೋಚಿಸಿದಾಗ
ಯಾವುದು ಹೊಸ ವರುಷ ಹರುಷ
ನಮ್ಮ ಭ್ರಮೆಯಾಳ ಹೊಕ್ಕ ಗಾಳ
ಸಿಲುಕಿ ಒದ್ದಾಡುತಿಹವು ಲೌಕಿಕದೊಳಗೆ
ಈ ಹೊಸ ವರುಷ ಹೊಸ ಹರುಷ
ಉನ್ಮಾದದ ಉಮೇದಿಗೊಳಗಾದವರ ಪೌರುಷ
ನಿಜ ಬದುಕಿನ ನೈಜತೆಯಾಳವ ಅರಿತವರಿಗೆ
ಸತ್ಯದರಿವು ಮೌಲ್ಯವಾದ ಸಮಯ ಕರಗುತಿಹುದೆಂಬುದಾಗಿದೆ.












Click it and Unblock the Notifications