ಅಲೆಯುತಿದೆ ಹೃದಯ

Munikumar Koteraಅಲೆಯುತಿದೆ ಈ ಹೃದಯ ಪ್ರೀತಿಯ ಹುಡುಕಾಟದಲಿ
ಸಿಕ್ಕಿತಲ್ಲವೋ ಶೂನ್ಯ ಈ ಅನಂತ ಜೀವರಾಶಿಯಲಿ
ಆದರೂ ಕಾಯುತಿದೆ ಉತ್ಸಾಹ ಚಿಲುಮೆಯಲಿ ಈ
ಬಾಳ ಪಯಣದಲಿ ಪ್ರೀತಿಯ ಹುಡುಕಾಟದಲಿ

ಗೊತ್ತಾಗಿರಬೇಕು ಆ ದೇವರಿಗೆ ನನ್ನ ಹುಡುಕಾಟಧರೆಗಿಳಿದು ಬಂದಳು ಜಗವನೆ ನಾಚಿಸುವ ಸುಂದರಿ
ಉಸಿರಿಗೆ ಬೆರೆತು ಉಸಿರಾಗಿ ಹೋದಳು
ಕಾಲನ ದಾಳಿಗೆ ಸಿಕ್ಕಿ ಮಿಂಚಿ ಮರೆಯಾಗಿ ಹೋದಳು
ಅಲೆಯುತಿದೆ ಈ ಹೃದಯ ಪ್ರೀತಿಯ ಹುಡುಕಾಟದಲಿ

ಎಷ್ಟು ಸುಂದರವಾಗಿದೆ ಈ ಜಗವು ವಸುಂಧರೆಯ ನಿಶ್ಚಿಂತ ಜೋಗುಳದಲಿ
ಬೇಡುತಿಹೆನು ದಿನಮಣಿಯ ಕೊಲ್ಲದಿರು ಈ ಸುಂದರ ಸಂಜೆಯನು
ಪ್ರೀತಿಯ ನಂಜು ಕುಡಿದ ಈ ಹುಚ್ಚು ಹೃದಯಕೆ ಎಲ್ಲವು ಸುಂದರ
ಅಲೆಯುತಿದೆ ಈ ಹೃದಯ ಪ್ರೀತಿಯ ಹುಡುಕಾಟದಲಿ

ಹಕ್ಕಿಗಳ ಚಿಲಿಪಿಲಿ ಕಲರವ, ನದಿಯ ವಯ್ಯಾರದ ಬಳುಕು
ವನದೇವತೆಯ ಸೆರಗಿನಿಂದ ಹೊಮ್ಮುವ ಘಮಘಮಮಿಸುವ ತಂಗಾಳಿ
ಪ್ರಕೃತಿಯೀ ತಾಯಿಯಾಗಿ ಹೇಳಿದರು ಸಾಂತ್ವನ
ಅಲೆಯುತಿದೆ ಈ ಹುಚ್ಚು ಹೃದಯ ಪ್ರೀತಿಯ ಹುಡುಕಾಟದಲಿ

ಅಲೆಯುತಿಹ ಹೃದಯಕ್ಕೆ ನಿಮ್ಮ ಸಮಾಧಾನವೇನು ?

Click here to go to top
ಮುಖಪುಟ / ಸಾಹಿತ್ಯ ಸೊಗಡು


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+