ತೀರ್ಪುಗಾರರ ಮೆಚ್ಚುಗೆ ಪಡೆದ ಕವಿತೆ

  • ಮೀರಾ ಪಿ.ಆರ್‌., [email protected]
    ವಿಳಾಸ : ಫ್ರಾಂಕ್ಲಿನ್‌, ಅಮೆರಿಕಾ
Meeraಕಾಡಿನಲ್ಲಿ ಕಳೆದುಹೋದ
ರಾಜಕುಮಾರಿಗೆ
ಯಾವಾಗಲೂ,
ಕುದುರೆಯೇರಿ ಬರುವ
ರಾಜಕುಮಾರನದೇ ಕನಸು.

ಕುದುರೆಯೇರಿ ಬಂದವರ್ಯಾರೂ
ರಾಜಕುಮಾರರಾಗಿರಲಿಲ್ಲ
ಅಸಲಿ ರಾಜಕುಮಾರ ಬಂದಾಗ,
ಅವನ ಬಳಿ ಕುದುರೆಯೇ ಇರಲಿಲ್ಲ .

ಇಷ್ಟು ದಿನ ಕನಸು ಕಂಡಿದ್ದು,
ಧ್ಯಾನಿಸುತ್ತಾ ಕಾದಿದ್ದು
ರಾಜಕುಮಾರನಿಗಾಗೋ ಅಥವಾ
ಕುದುರೆಗಾಗೋ!....
ಅಂತ ತಿಳಿಯದೆ ಕಳವಳಿಸುತ್ತಾ ನಿಂತ
ರಾಜಕುಮಾರಿಗೆ ಈಗ
ಶುದ್ಧ ಗೊಂದಲ.

ಕಡೆಗೆ,
‘ಈ ಕನಸುಗಳು ಯಾಕಾದರೂ ನನಸಾಗುತ್ತವೋ’
ಎಂದು ಹಳಹಳಿಸಿ,
ಎಲ್ಲದಕ್ಕೂ ಬೆನ್ನು ತಿರುಗಿಸಿ,
ಇದೇ ಲೇಸು ಅನ್ನಿಸಿ
ರಾಜಕುಮಾರಿ ಮತ್ತೊಮ್ಮೆ
ಕಾಡಿನಲ್ಲಿ ಕಳೆದುಹೋದಳು.


Click here to go to top
ಮುಖಪುಟ / ಸಾಹಿತ್ಯ ಸೊಗಡು / ಕವನ ಸ್ಪರ್ಧೆ ಫಲಿತಾಂಶಗಳು
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+