ಕವಿತೆ ಹಣತೆ

  • ಆಶಾ ಬಾಲಕೃಷ್ಣ , Email : [email protected]
    ಫ್ರೀಮಾಂಟ್‌, ಕ್ಯಾಲಿಫೊರ್ನಿಯಾ.
ದೂರದರ್ಶನಗಳಲ್ಲಿ ,
ಛಾಯಾ ಚಿತ್ರಗಳಲ್ಲಿ ,
ಮೇಲುನೋಟಕ್ಕೆ ,
ಬಲು ರಮಣೀಯ,
ಆಮೆಜಾನಿನ ನಿತ್ಯ ಹರಿದ್ವರ್ಣದ
ಗೊಂಡಾರಣ್ಯ.
ಆದರೆ ಒಳನೋಟದ ನಗ್ನ ಸತ್ಯ
ಕ್ರೌರ್ಯದ ಕಚ್ಛಾರೂಪ
ದುರ್ಬಲರ ಗೋರಿಗಳ ಮೇಲೆ
ಬದುಕ ಕಟ್ಟುವ ಸಬಲರ
ಜೀವಿತದ ಸ್ವರೂಪ
ಹುಲ್ಲ ತಿಂದು ಬದುಕುವ ಹರಿಣ
ಹುಲಿಯ ಪಾಲಿಗೆ
ಸೊಪ್ಪು ಅರಸಿ ತಿನುವ ಕಾಡೆಮ್ಮೆ
ಸಿಂಹದ ಬಾಯಿಗೆ.
ಇದು ಭೂತ, ವರ್ತಮಾನ,
ಭವಿಷ್ಯ, ಇದೇ ಮೆದುಳಿರುವ ಮಾನವರೂ
ಬದುಕುವ ರೀತಿ, ಇದೇ ಲೋಕ ನೀತಿ
ಯಾರ ದೃಷ್ಟಿಯಲೂ ಆಗದ ಅನೀತಿ.
ಸುಂದರ ನಾಗರಿಕತೆಯ
ಒಳನೋಟ,
ವಿವಿಧ ದಬ್ಬಾಳಿಕೆ, ಮೋಸ,
ಭ್ರಷ್ಟಾಚಾರ, ಕ್ರೌರ್ಯಗಳ ಮೆರೆದಾಟ
ಇದೇ ಜೀವನ ನಾಟಕ
ಇದು ನಿರಂತರ

ಈ ಕವಿತೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

Click here to go to top
ಮುಖಪುಟ / ಸಾಹಿತ್ಯ ಸೊಗಡು
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+