ನಮಸ್ಕಾರ ಸಾರ್ ಅಂತೀನಿ
ಅನಂತ
ಸಾರ್
ನಿಮ್ಮ ಕತೆ
ಮುಗಿಯದ ಕತೆ
ಎಂದೆಂದೂ ಮುಗಿಯದ ಕತೆ !
ಅದಕ್ಕೆ ಮೂಲ
ನೀವು ಬದುಕಿರುವ ಕಾಲ
ಅದಕ್ಕೆ ನೀವೆಸೆದ ಸವಾಲು
ಅದೆಲ್ಲ ಎಂದಿನ ಮಾಮೂಲು
ನಿಮ್ಮನ್ನು ಕಾಡಿದ ಪ್ರಶ್ನೆ
ನಿಮ್ಮ ಪರಿಸರದ ಪ್ರಜ್ಞೆ
ನಿಮ್ಮ ಪ್ರಜ್ಞೆಯ ಪರಿಸರ !
ಅದರಿಂದಾದ ಸಂಸ್ಕಾರ
ರಜತ ಪರದೆಯನ್ನೇರುವ ಮೊದಲು
ಬಡಿಯಿತು ನ್ಯಾಯಾಲಯದ ಬಾಗಿಲು !
ನೀವು ಮಡಿವಂತರಿಗೆ ಮಾಡಿದ ತಿಥಿ
ಅದು ಎಲ್ಲರಿಗೂ ಗೊತ್ತಿರುವ ಕತಿ !
ನೀವು ಮಾಡಿಸಿದ ಘಟಶ್ರಾದ್ಧ,
ಯುದ್ಧ, ನಂ ಸಮಾಜದ ವಿರುದ್ಧ
ಹುಲಿಯ ಕ್ರೌರ್ಯದಲ್ಲೂ
ಹೆಂಗರುಳು ಕಾಣುವ ಹುಚ್ಚು
ಮೌನಿಯ ಬಾಯಲ್ಲು
ಮಾತು ಬರಿಸುವ ನಚ್ಚು
ಭಾರತೀ ಪುರದಲ್ಲೂ ಮಂಜುನಾಥನನ್ನೇ
ಕಿತ್ತೊಗೆಯುವ ಕೆಚ್ಚು
ದೇವರ ಕೊಳದಲ್ಲಿ ಸಾಬರ ಕೈಲಿ
ಮೀನು ಹಿಡಿಸುವ ರಚ್ಚು !
ನಿಜ ಹೇಳಿ ಸಾರ್ ,
ಸಂಯಮಿಗಳನ್ನು ಜಾರಿಸುವಾಗ
ಒಳಗೊಳಗೇ ನಿಮಗಾಗುವುದಿಲ್ಲವಾ ಖುಷಿ ?
ಛೆ-ಛೆ ಹೀಗಾಗಬಾರದಿತ್ತು ಸಾರ್
ಪ್ರಾಣೇಶಾಚಾರ್ಯನಂತಹ ಆ ಋಷಿ !
ನಂಗಂತೂ ಅರ್ಥವಾಗದು ಸಾರ್
ನಿಮ್ಮವಸ್ಥೆ , ನಿಮ್ಮ
ಬರವಣಿಗೆಯ ವ್ಯವಸ್ಥೆ !
ಅಲ್ಲಾ ಸಾರ್,
ರಾಜಕೀಯ ಸಮಾಜವಾದವೇನೋ ಸರಿ,
ಆದ್ರೆ ಎಲ್ಲಾ ಬಿಟ್ಟು, ಅದೂ ಆ -
ಲಕ್ವಾ ಬಡಿದ ಬಡಪಾಯಿಯ ಮೇಲೆ
ಮಾಡಿಸಲೇ ಬೇಕಿತ್ತೇ ಸಾರ್ ರತಿಲೀಲೆ?
ಮೂಡಿಸಬೇಕಿತ್ತೇ ಸಾರ್ ಕಾಮಜ್ವಾಲೆ ?
ಎಲ್ಲಾ ಆ (ದನಕಾಯುವ) ಭಗವಂತನ ಲೀಲೆ !
ಸಾರ್ ಗಣಪತಿ ಪೂಜೆಯಲ್ಲಿ
ನಿಮಾಗಾದ ಆವಾಹನೆ
ಕೆಲವರಿಗೆ ಬಂದಿಲ್ಲ ಆವಗಾಹನೆಗೆ
ಅದಿರಲಿ ಸಾರ್ ಆಕಾಶವೆಲ್ಲಿ , ಬೆಕ್ಕೆಲ್ಲಿ ?
ರಾಜಾರಾಯರು ಶೇಕ್ಸಪಿಯರನಿಗೂ
ಬೆಕ್ಕಿಗೂ ಗಂಟು ಹಾಕಿದ ಹಾಗೆ
(ಅಂದ ಹಾಗೆ ಆ ಕಥೆಯಂತೂ
ನನಗರ್ಥವಾಗಲೇ ಇಲ್ಲ ಸಾರ್ )
ಸಾರ್,
ನಮಗೆ ನೀವು ಹಾಸನದಲ್ಲಿ ಮೇಷ್ಟ್ರಾಗಿದ್ದಾಗ
ನೀವಿನ್ನೂ ನಿಮ್ಮ ಜೀವನದ
ಸ್ತರಗಳನ್ನು ಹುಡುಕುತ್ತಿದ್ದಾಗ
ಯೌವನದ ಹಾದಿಯಲ್ಲಿ
ಆ-ಸ್ತರ ಈ ಸ್ತರಗಳನ್ನು ತಡಕುತ್ತಿದ್ದಾಗ
ನಿಮಗೆ ದೊರೆತದ್ದು ?
ಯಾವ ಸ್ತರ ? .... ಎಸ್ತರಾ ?!
ಆಮೇಲೆ ?....ಮೈಸೂರು
ಮಹಾರಾಜಾ ಕಾಲೇಜು,
ಯಾಕಿವರ ಮುಲಾಜು ?
ನಂತರ, ಗಾಂಧೀ ವಿಶ್ವ ವಿದ್ಯಾನಿಲಯ,
ಮಲೆಯಾಳಿಗಳಿಂದ ಕಮ್ಯೂನಿಸಂ ಪರಿಚಯ !
ಮುಂದೆ ಅಮೆರಿಕದಲ್ಲಿ
ದೊರೆತ 'ಪೂರ್ಣ ಪ್ರಭಾ' ವೇತನ
ಬಡಿದೆಬ್ಬಿಸಿತೇ ನಿಮ್ಮ ಚೇತನ ?
ಬರಹದಂತೆಯೇ ಸಾರ್ ನಿಮ್ಮ ಮಾತು,
ಬರವಿಲ್ಲದ ಚಿಂತನೆಗೆ ರುಜುವಾತು !
ಅದರಿಂದಲೇನೇ ಸಾರ್, ಸಾಹಿತ್ಯ
ಅಕಾಡೆಮಿಯ ಅಧ್ಯಕ್ಷತೆನೂ ಆಯ್ತು !
ಸಾರ್
ಸಾರ್ ಅಯೋವಾದಲ್ಲಾಗದಿದ್ದರೇನು ಕನ್ನಡ ಪೀಠ ?
ಭಾರತದಲ್ಲೇ ದೊರಕಿತಲ್ಲಾ ಜ್ಞಾನ ಪೀಠ !
ಕಾರಂತ-ಗೋಕಾಕ -ಮಾಸ್ತಿ
ಇವರಂತೆ ನೀವೂ ಕನ್ನಡದ ಆಸ್ತಿ !
ಕನ್ನಡ ಕಾವ್ಯರ್ಷಿಗಳ ಗುಂಪು
ದ.ರಾ. ಬೇಂದ್ರೆ- ಕುವೆಂಪು,
ಕನ್ನಡ ದಿಗ್ಗಜಗಳ ಹಿಂಡು
ಇನ್ನೂ ಬೆಳೆಯುತ್ತಿದೆ ದಂಡು !
ಸಾರ್,
ಯೂ ಆರ್ ಟ್ರೂಲಿ ಅನಂತ !
ಯು ಆರ್ ಅನಂತ ಮೂರ್ತಿ
ಮಾತ್ರವಲ್ಲ,
ಯು ಆರ್ ಅನಂತ ಕೀರ್ತಿ
ನಿಮ್ಮ ಶಿಷ್ಯ ಕೋಟಿಗೆಲ್ಲಾ
ಯು ಆರ್ ಅನಂತ ಸ್ಫೂರ್ತಿ !
ಸಾರ್,
ನೀವು ಹಿಂದೆ ಅಯೋವಾದಿಂದ
ಬರೆದ ಅಭಿಮಾನದ ಪತ್ರ
ಈಗಲೂ ಇಟ್ಟಿದ್ದೇನೆ ನನ್ಹತ್ರ,
ಅಂದು ಅದು ನಮ್ಮೇಷ್ಟ್ರು- ಖ್ಯಾತ ಲೇಖಕ
ಬರೆದದ್ದು- ಅನ್ನೋ ಖುಷಿ ಮಾತ್ರ,
ಆದ್ರೆ ಇಂದು ಅದು ಜ್ಞಾನ ಪೀಠ-
ಪ್ರಶಸ್ತಿ ವಿಜೇತರಿಂದ ಬಂದ ಮಾನಪತ್ರ !
ಇಕೋ ಸಾರ್,
ಇನ್ನೊಮ್ಮೆ ಕಾಲಾನಾ ಹಿಂದಕ್ ತಳ್ಳಿ,
ಈ ಪದ್ಯಾನ ಪ್ರೀತಿಯಿಂದ ಕೊಡ್ತೀನಿ
ಇದೋ ಸ್ವೀಕರಿಸಿ ಇಟ್ಕೊಳ್ಳಿ !
ಕನ್ನಡ ಸಾಹಿತ್ಯದ ಕಂಪು
ಮಾಡಲಿ ಕ್ವಾಂಟಂ ಜಂಪು !
ತರಲೀ ನಂಗೆಲ್ಲಾ ತುಂಬಾ ಹೆಮ್ಮೆ
ಬಂದೇಬಿಡ್ಲೀ ನೋಬೆಲ್ ಕೀರ್ತಿನೂ ಒಮ್ಮೆ!
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications