ತಮಿಳು ಭಾಷಿಗರ 'ಅಮ್ಮ' ಕು. ಜಯಲಲಿತಾ ವ್ಯಕ್ತಿಚಿತ್ರ

Posted By:
Subscribe to Oneindia Kannada

ಭಾರತದ ಪ್ರಭಾವಿ ಮಹಿಳೆ, ಎಐಎಡಿಎಂಕೆ ಪ್ರಶ್ನಾತೀತ ನಾಯಕಿ ಜಯರಾಮ್ ಜಯಲಲಿತಾ ಬದುಕಿನ ಕಥೆ ಮುಗಿದಿದೆ. ಸಿನಿಮಾದಷ್ಟೇ ರೋಚಕವಾದ ಜೀವನಗಾಥೆಯೊಂದರ ಕೊನೆ ರೀಲು ಆಸ್ಪತ್ರೆಯಲ್ಲೇ ಮುಗಿದಿದ್ದು, ಆಕೆ ಜೀವನದ ಕೊನೆ ಎಪ್ಪತ್ನಾಲ್ಕು ದಿನವನ್ನು ತಮಿಳುನಾಡಿನ ಜನರ್ಯಾರೂ ನೋಡದೆ ಮುಗಿದು ಹೋಗಿದೆ.

[ಗ್ಯಾಲರಿ: ಶೋಕಸಾಗರದಲ್ಲಿ 'ಅಮ್ಮ'ನ ಮಕ್ಕಳು]

ಛಲದೋಳ್ ಧುರ್ಯೋಧನ ಎಂಬಂತೆ ಛಲದಿಂದಲೇ ರಾಜಕೀಯಕ್ಕೆ ಬಂದು ಸಾಧಿಸಿ ತೋರಿಸಿದವರು ಜಯಲಲಿತಾ. ಹಲವಾರು ಹಗರಣಗಳಲ್ಲಿ ಭಾಗಿಯಾದರೂ 6 ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದು ವ್ಯಕ್ತಿತ್ವದ ಹಿಂದಿನ ಶಕ್ತಿಯನ್ನು, ಆಕೆಯಲ್ಲಿರುವ ಛಲವನ್ನು ತೋರಿಸುತ್ತದೆ.

ಅಯ್ಯಂಗಾರಿ ಕುಟುಂಬದಲ್ಲಿ ಹುಟ್ಟಿದ ಹೆಣ್ಣು ಮಗಳು ಕೋಮಲವಲ್ಲಿಯನ್ನು ಯಾರಾದರೂ ಟೀಕಿಸಿದರೆ, ಅವಮಾನಿಸಿದರೆ ಕಣ್ಣಿನಲ್ಲಿ ನೀರು ತುಂಬಿಕೊಂಡು ಮನೆಗೆ ಬರುತ್ತಿದ್ದಳು. ಆ ಹಂತದಿಂದ ತಮಿಳರ ಪಾಲಿನ ಪುರುಚ್ಚಿ ತಲೈವಿ ಆಗಲು ಜಯಲಲಿತಾ ಸವೆಸಿದ ಹಾದಿ ಹೂವಿನ ಹಾಸಿಗೆ ಆಗಿರಲಿಲ್ಲ. ನಿರಾಸೆ, ಹತಾಶೆ, ಹೋರಾಟ, ಸೇಡು ಪ್ರತಿ ಹೆಜ್ಜೆಗೂ ಗಾಜಿನ ಚೂರಿನಂತೆ ಆಕೆಯ ದಾರಿಯುದ್ದಕ್ಕೂ ಅಡ್ಡವಾದವು.

ತನ್ನ ಯಾವ ಸಿನಿಮಾದಲ್ಲೂ ತಾಯಿಯ ಪಾತ್ರ ನಿರ್ವಹಿಸದ ಜಯಲಲಿತಾ ತಮಿಳರ ಪಾಲಿಗೆ 'ಅಮ್ಮ'. ಆಕೆ ಮದುವೆಯಾಗದಿದ್ದರೂ ಕೋಟ್ಯಂತರ ಮಕ್ಕಳಿಗೆ ಅಮ್ಮನ ಅಂತಃಕರಣ ಹಂಚಿದ ಮಹಾತಾಯಿ. ಕನ್ನಡದಲ್ಲಿ ಶ್ರೀಶೈಲ ಮಹಿಮೆ, ಚಿನ್ನದ ಗೊಂಬೆ, ಬದುಕುವ ದಾರಿ, ಮಾವನ ಮಗಳು, ನನ್ನ ಕರ್ತವ್ಯ, ಮನೆ ಅಳಿಯ ಮುಂತಾದ ಚಿತ್ರಗಳಲ್ಲಿ ನಟಿಸಿದ್ದ ಜಯಲಲಿತಾ ಬದುಕು ಅನೇಕ ಏರು-ಇಳಿತಗಳನ್ನು ಕಂಡಿದೆ.

ಅಪ್ಪಟ ಕಲಾವಿದೆಯಾಗಿ, ಛಲಬಿಡದ ರಾಜಕಾರಣಿಯಾಗಿ, ಬಡವರ ಪಾಲಿನ ಪ್ರೀತಿಯ ಅಮ್ಮನಾಗಿ, ಅಭಿಮಾನಿಗಳ ನೆಚ್ಚಿನ ಪುರಚ್ಚಿ ತಲೈವಿಯಾಗಿ, ಜೀವನದಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡ ಜಯಲಲಿತಾ ಅವರ ವರ್ಣರಂಜಿತ ಜೀವನದ ಸಂಕ್ಷಿಪ್ತ ನೋಟ ಇಲ್ಲಿದೆ.

ಆಕೆಗೆ ಇಟ್ಟಿದ್ದು ಮೈಸೂರು ರಾಜ ಮನೆತನದ ಹೆಸರು

ಆಕೆಗೆ ಇಟ್ಟಿದ್ದು ಮೈಸೂರು ರಾಜ ಮನೆತನದ ಹೆಸರು

* 1948ರ ಫೆಬ್ರವರಿ 24ರಂದು ಮೇಲುಕೋಟೆಯ ಜಯರಾಮ್, ಸಂಧ್ಯಾ ದಂಪತಿಗೆ ಜನಿಸಿದ ಜೆ.ಜಯಲಲಿತಾ ಹುಟ್ಟು ಹೆಸರು `ಕೋಮಲವಲ್ಲಿ. ಹುಟ್ಟಿದ್ದು ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ.
* ಮೈಸೂರು ಒಡೆಯರ್ ಬಳಿ ಕೆಲಸ ಮಾಡುತ್ತಿದ್ದರಿಂದ ಅಜ್ಜ (ತಂದೆಯ ತಂದೆ) ಅರಸರ ಮೇಲಿನ ಗೌರವಕ್ಕೆ ಜಯಲಲಿತಾ ಎಂದು ಮರುನಾಮಕರಣ ಮಾಡಿದರು.
* ಜಯಾಗೆ ಎರಡು ವರ್ಷವಿದ್ದಾಗಲೇ ಪಿತೃ ವಿಯೋಗ.
* ತವರು ಮನೆಗೆ ತೆರಳಿದ ಸಂಧ್ಯಾ, ಜತೆಗೆ ಮಗಳು ಜಯಾ ಬೆಂಗಳೂರಿಗೆ.
* ತಾತ- ಅಜ್ಜಿ ಕಣ್ಣಳತೆಯಲ್ಲಿ ಜಯಾ ಕಲಿತದ್ದು ಬೆಂಗಳೂರಿನ ಬಿಷಪ್ ಕಾಟನ್ ಗರ್ಲ್ಸ್ ಶಾಲೆಯಲ್ಲಿ. ಜೊತೆಗೆ ಸಂಗೀತ, ಭರತನಾಟ್ಯ ಅಭ್ಯಾಸ.

ಮೊದಲು ನಟಿಸಿದ್ದು ವಯಸ್ಕರ ಚಿತ್ರದಲ್ಲಿ

ಮೊದಲು ನಟಿಸಿದ್ದು ವಯಸ್ಕರ ಚಿತ್ರದಲ್ಲಿ

* ಬಣ್ಣದ ಬದುಕಿನ ಆಕರ್ಷಣೆಗೆ ಸಂಧ್ಯಾ ಮದ್ರಾಸ್ ಪಯಣ.
* 1961ರಲ್ಲಿ ಬಿಡುಗಡೆಯಾದ ಎಪಿಸ್ಟಟ್ ಎಂಬ ಇಂಗ್ಲಿಷ್ ಚಿತ್ರದಲ್ಲಿ ಮೊದಲ ಬಾರಿಗೆ ನಟನೆ. ಅದು ವಯಸ್ಕರ ಚಿತ್ರವಾದ್ದರಿಂದ ಅದನ್ನು ಜಯಲಲಿತಾ ನೋಡಲು ಕೂಡ ಸಾಧ್ಯವಾಗಲಿಲ್ಲ
* ಮೊದಲ ಬಾರಿಗೆ ನಾಯಕಿಯಾಗಿದ್ದು 15 ವರ್ಷದಲ್ಲಿ. 1964ರಲ್ಲಿ ಬಿಡುಗಡೆಯಾದ ಕನ್ನಡ ಚಿತ್ರ 'ಚಿನ್ನದ ಗೊಂಬೆ'ಯಲ್ಲಿ ಅಭಿನಯ, ಕಲ್ಯಾಣ್‌ಕುಮಾರ್ ನಾಯಕ.
* ತಮಿಳು ಚಿತ್ರರಂಗದಲ್ಲಿ 1964ರಿಂದ ಅಭಿನಯ ಪಯಣ ಪ್ರಾರಂಭ
* 1964ರಿಂದ 1971ರ ಅವಧಿಯಲ್ಲಿ ಎಂಜಿಆರ್ ಜೊತೆ ಇಪ್ಪತ್ತಕ್ಕೂ ಹೆಚ್ಚು ಚಿತ್ರದಲ್ಲಿ ನಟನೆ

ಡಿಎಂಕೆ ಮೊದಲ ರಾಜಕೀಯ ಹೆಜ್ಜೆ

ಡಿಎಂಕೆ ಮೊದಲ ರಾಜಕೀಯ ಹೆಜ್ಜೆ

* ದ್ರಾವಿಡ ಮುನ್ನೇತ್ರ ಕಳಗಂ ಪಕ್ಷಕ್ಕೆ ಸೇರ್ಪಡೆ
* 1972ರಲ್ಲಿ ಕರುಣಾನಿಧಿ ಜತೆ ಭಿನ್ನಾಭಿಪ್ರಾಯ. ಎಂಜಿಆರ್ ಅಣ್ಣಾ ಡಿಎಂಕೆ ಸ್ಥಾಪಿಸಿದಾಗ ಜಯಾ ಆ ಪಕ್ಷಕ್ಕೆ ಸೇರ್ಪಡೆ.
* 1977ರ ಚುನಾವಣೆಯಲ್ಲಿ ಜಯ ಗಳಿಸಿ ಮುಖ್ಯಮಂತ್ರಿಯಾದ ಎಂಜಿಆರ್ 1980ರಲ್ಲಿ ಜಯಲಲಿತಾರನ್ನು ಪಕ್ಷದ ಪ್ರಚಾರ ಕಾರ್ಯದರ್ಶಿಯಾಗಿ ನೇಮಿಸಿದರು.
* 1984ರಲ್ಲಿ ರಾಜ್ಯಸಭೆಗೆ ಆಯ್ಕೆಯಾದ ಜಯಾ, ಸಂಸತ್‌ನಲ್ಲಿ ಮಾಡಿದ ನಿರರ್ಗಳ ಭಾಷಣಕ್ಕೆ ಅಂದಿನ ಪ್ರಧಾನಿ ಇಂದಿರಾ ತಲೆದೂಗಿದ್ದರು.
* 1987ರ ಡಿಸೆಂಬರ್ 24ರ ನಸುಕಿನಲ್ಲಿ ಎಂಜಿಆರ್ ಕೊನೆಯುಸಿರೆಳೆದಿದ್ದರು. ಯಾವಾಗಲೂ ಜೊತೆಯಲ್ಲಿರುತ್ತಿದ್ದ ಜಯಾ ಅಂದು ಎಂಜಿಆರ್ ಮುಖವನ್ನೂ ಸಹ ನೋಡಲಾಗಲಿಲ್ಲ.

ಎಂಜಿಆರ್ ಉತ್ತರಾಧಿಕಾರಿ ಯಾರು?

ಎಂಜಿಆರ್ ಉತ್ತರಾಧಿಕಾರಿ ಯಾರು?

* ಎಂಜಿಆರ್ ಉತ್ತರಾಧಿಕಾರಿಯೆಂದು ಘೋಷಿಸಿಕೊಂಡ ಜಾನಕಿ ರಾಮಚಂದ್ರನ್ ಮುಖ್ಯಮಂತ್ರಿಯಾದರು. ಆದರೆ ಪಕ್ಷ ಹೋಳಾಯಿತು.
* ಹೋಳಾಗಿದ್ದ ಪಕ್ಷ 1988ರಲ್ಲಿ ಜಯಾ ನೇತೃತ್ವದಲ್ಲಿ ಮತ್ತೆ ಸಂಘಟನೆಯಾಯಿತು.
* ವಿಧಾನಸಭೆ ವಿಸರ್ಜನೆ ನಂತರದ ಚುನಾವಣೆಯಲ್ಲಿ ಡಿಎಂಕೆ ಅಧಿಕಾರ ಪಡೆಯಿತು.
* ವಿರೋಧ ಪಕ್ಷದ ನಾಯಕಿಯಾದ ಜಯಾ ಸೀರೆಯನ್ನು ಡಿಎಂಕೆ ಶಾಸಕರು ಸೆಳೆದ ದುಶ್ಶಾಸನ ಪ್ರಸಂಗ ಜಯಾ ಮೇಲಂಗಿಯನ್ನು ಹಾಕಲು ಕಾರಣವಾಯಿತು. ಎಂಜಿಆರ್ ರಾಜ್ಯವನ್ನು ತರುತ್ತೇನೆ ಎಂದು ಜಯಾ ಪಣ ತೊಟ್ಟರು.

ಸಿಎಂ ಆದ ಜಯಲಲಿತಾ

ಸಿಎಂ ಆದ ಜಯಲಲಿತಾ

* 1991ರ ಚುನಾವಣೆಯಲ್ಲಿ ತಮಿಳು ಮತದಾರರು ಕೈಬಿಚ್ಚಿ ಮತ ನೀಡಿ ಹಾರೈಸಿದರು. ಜಯಾ ಸಿಎಂ ಆದರು.
* 1991-1996ರ ಅವಧಿ ತಮಿಳುನಾಡಿಗಿಂತ ಜಯಾ ರಾಜಕೀಯವಾಗಿ ಹೆಚ್ಚು ಬೆಳೆದ ಕಾಲ, ಜಯಾ ಅಮ್ಮಾ ಆಗಿ ಮಾರ್ಪಟ್ಟಿದ್ದು ಆ ವೇಳೆಯಲ್ಲಿಯೇ.
* ದತ್ತುಪುತ್ರನ ಮದುವೆ ಆಡಂಬರ ಜಯಾ ಕುಖ್ಯಾತಿಯನ್ನು ಪರಿಚಯಿಸಿತು.
* ಗೆಳತಿ ಶಶಿಕಲಾ ಖರೀದಿಸಿದ್ದ ಆಭರಣ, ಲೆಕ್ಕವಿಲ್ಲದಷ್ಟು ಸೀರೆ, ಚಪ್ಪಲಿ, ಚಿರಾಸ್ತಿ, ಚರಾಸ್ತಿ ಭ್ರಷ್ಟಾಚಾರ ಅವರ ಮೈಗಂಟಿತು.

ಏರಿಳಿತದ ಸುದೀರ್ಘ ಸರಕಾರ

ಏರಿಳಿತದ ಸುದೀರ್ಘ ಸರಕಾರ

* 1998ರ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಗೆದ್ದ ಜಯಾ, ವಾಜಪೇಯಿ ಸರ್ಕಾರಕ್ಕೆ ನೀಡದ ಬೆಂಬಲ 13 ತಿಂಗಳಲ್ಲಿ ವಾಪಸ್ ಪಡೆದು ಸರ್ಕಾರವನ್ನೇ ಬೀಳಿಸಿದರು.
* 2001ರಲ್ಲಿ ಮತ್ತೆ ತಮಿಳುನಾಡಿನಲ್ಲಿ ಅಮ್ಮಾ ಅಧಿಕಾರ ಹಿಡಿದರು. 2006ರವರೆಗೆ ಸುದೀರ್ಘ ಸರಕಾರ ನಡೆಯಿತು.
* 2006ರ ಚುನಾವಣೆಯಲ್ಲಿ ಕರುಣಾನಿಧಿಗೆ ಮೇಲುಗೈ. ಅದೂ ಟಿವಿ, ಫ್ಯಾನ್, ರೆಫ್ರಿಜರೇಟರ್ ಗಳ ಉಚಿತ ಕೊಡುಗೆ ನೀಡಿ ಪಡೆದ ಮತ.
* 2011ರ ಚುನಾವಣೆಯಲ್ಲಿ ಅಮ್ಮಾಗೆ ಗೆಲವು. ಇಲ್ಲಿ ಅಮ್ಮಾ ಕ್ಯಾಂಟೀನಿನಿಂದ ಹಿಡಿದು ಉತ್ಪನ್ನಗಳು ಜನರಿಗೆ ಕಡಿಮೆ ಬೆಲೆಯಲ್ಲಿ ಸಿಗತೊಡಗಿದವು.

ಅಮ್ಮನ ಕೊನೆಯ ಹೆಜ್ಜೆಗಳು

ಅಮ್ಮನ ಕೊನೆಯ ಹೆಜ್ಜೆಗಳು

* 2015ರಲ್ಲಿ 22 ದಿನಗಳ ಕಾಲ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಸೇರಬೇಕಾಯಿತು. ಅಲ್ಲಿಯ ವರೆಗೆ ಸಹಚರ ಪನ್ನೀರು ಸೆಲ್ವಂ ಅಧಿಕಾರದಲ್ಲಿದ್ದರು.
* 2016 ಸೆಪ್ಟೆಂಬರ್ 22ರಂದು ನಿರ್ಜಲೀಕರಣ ಮತ್ತು ಜ್ವರದ ಕಾರಣಕ್ಕೆ ಜಯಾ ಆಸ್ಪತ್ರೆ ಸೇರಿದರು.
* 2016 ಡಿಸೆಂಬರ್ 5ರಂದು ಅಮ್ಮ ಕೊನೆಯುಸಿರೆಳೆದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Tamil Nadu Chief Minister J Jayalalithaa passed away on 5th December in Chennai. She had suffered a cardiac arrest on Sunday following which her condition remained extremely critical. His life is also critical every step of feet to struggle to grow up in politically and socially.
Please Wait while comments are loading...