SWR: ಪ್ರಯಾಣಿಕರಿಗೆ ಸಿಹಿ ಸುದ್ದಿ, ಸೆಪ್ಟಂಬರ್ ವರೆಗೆ ವಿವಿಧ 8 ಎಕ್ಸ್‌ಪ್ರೆಸ್ ರೈಲುಗಳ ಸೇವೆ ವಿಸ್ತರಣೆ

ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು ನೈಋತ್ಯ ರೈಲ್ವೆ ವ್ಯಾಪ್ತಿಯ ಕೆಲವು ವಿಶೇಷ ರೈಲುಗಳ ಸಂಚಾರ ಅವಧಿ ವಿಸ್ತರಣೆ ಮಾಡಲಾಗಿದೆ. ಪ್ರಸ್ತುತ ಸಮಯ, ನಿಲ್ದಾಣಗಳು ಮತ್ತು ಬೋಗಿಗಳ ಸಂಯೋಜನೆಯೊಂದಿಗೆ ವಿಸ್ತರಿಸಲಾಗಿದೆ. ಜೊತೆಗೆ ಉತ್ತರ ಭಾರತದ ಕಡೆಯಿಂದ ಬರುವ 'ಸಂಪರ್ಕ ಕ್ರಾಂತಿ ಎಕ್ಸ್ ಪ್ರೆಸ್ ರೈಲಿನ ಹೆಚ್ಚುವರಿ ಬೋಗಿ ಜೋಡಣೆ ಮಾಡಲಾಗುತ್ತಿದೆ. ಈ ಬದಲಾವಣೆ ಗಮನಿಸಿ ಸಂಚಾರ ಮಾಡುವಂತೆ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಎಲ್ಲ ರೈಲುಗಳು ವಾರಕ್ಕೊಮ್ಮೆ ಸಂಚರಿಸುವ ವಿಶೇಷ ರೈಲುಗಳಾಗಿವೆ. ವಿಸ್ತರಣಗೊಂಡ ಅವಧಿಯಲ್ಲಿ ಒಟ್ಟು ಎರಡು ದಿಕ್ಕಿನಲ್ಲೂ ತಲಾ 4 ಟ್ರಿಪ್ ಸೇವೆ ನೀಡಲಿವೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

South Western Railway

ಎಕ್ಸ್‌ಪ್ರೆಸ್ ರೈಲುಗಳ ಸೇವೆ ವಿಸ್ತರಣೆ, ಪಟ್ಟಿ

* 2026 ಆಗಸ್ಟ್ 30 ರವರೆಗೆ ಸಂಚರಿಸಲು ನಿಗದಿಯಾಗಿದ್ದ ಎಸ್ಎಸ್ಎಸ್ ಹುಬ್ಬಳ್ಳಿ-ಕೊಲ್ಲಂ ವಿಶೇಷ ರೈಲು (07313) ಸೇವೆಯನ್ನು 2026 ಸೆಪ್ಟಂಬರ್ 06 ರಿಂದ ಸೆಪ್ಟಂಬರ್ 27 ರವರೆಗೆ ವಿಸ್ತರಿಸಲಾಗಿದೆ.

* 2026 ಆಗಸ್ಟ್ 31 ಕಾರ್ಯಾಚರಣೆ ನಡೆಸಬೇಕಿದ್ದ ಕೊಲ್ಲಂ-ಎಸ್ಎಸ್ಎಸ್ ಹುಬ್ಬಳ್ಳಿ ವಿಶೇಷ ರೈಲು (07314) ಸೇವೆಯನ್ನು ಸೆಪ್ಟಂಬರ್ 07 ರಿಂದ 28ರವರೆಗೆ ಕಾರ್ಯಾಚರಣೆ ನಡೆಸುವಂತೆ ವಿಸ್ತರಣೆ ಮಾಡಲಾಗಿದೆ.

* 2026 ಆಗಸ್ಟ್ 31 ಸೇವೆ ನೀಡಬೇಕಿದ್ದ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ತಿರುವನಂತಪುರಂ ನಾರ್ತ್ ವಿಶೇಷ ರೈಲು (06523) ಸೇವೆಯು ಸೆಪ್ಟಂಬರ್ 07 ರಿಂದ 28ರವರೆಗೆ ಲಭ್ಯವಾಗುವಂತೆ ವಿಸ್ತರಣೆಯಾಗಿದೆ.

* 2026 ಸೆಪ್ಟಂಬರ್ 01ರವರೆಗೆ ಸಂಚರಿಸಲು ನಿಗದಿಪಡಿಸಲಾಗಿದ್ದ ತಿರುವನಂತಪುರಂ ನಾರ್ತ್-ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ವಿಶೇಷ ರೈಲು (06524) ಮತ್ತೆ ಸೆಪ್ಟಂಬರ್ 08 ರಿಂದ 29 ರವರೆಗೆ ವಿಸ್ತರಣೆಗೊಂಡಿದೆ.

* ಇನ್ನೂ 2026 ಆಗಸ್ಟ್ 26ರವರೆಗೆ ಮಾತ್ರವೇ ಕಾರ್ಯಾಚರಣೆ ಮಾಡಲಿದ್ದ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ತಿರುವನಂತಪುರಂ ನಾರ್ತ್ ವಿಶೇಷ ರೈಲು (06547) ಸೆಪ್ಟಟಂಬರ್ 2ರಿಂದ 23 ರವರೆಗೆ ವಿಸ್ತರಣೆಯಾಗಿದ್ದು, ಮುಂದಿನ ಆದೇಶವರೆಗೆ ಸೇವೆ ನೀಡಲಿದೆ.

* ತಿರುವನಂತಪುರಂ ನಾರ್ತ್-ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ವಿಶೇಷ ರೈಲು (06548) ಇದೇ 2026 ಆಗಸ್ಟ್ 27 ರ ಕೊನೆದಿನ ಬದಲಾಗಿ ವಿಸ್ತರಣಗೊಂಡ ಸೆಪ್ಟಂಬರ್ 03 ರಿಂದ ಸೆಪ್ಟಂಬರ್ 24ರವರೆಗೂ ಅವಧಿವರೆಗೂ ಸೇವೆ ನೀಡಲಿದೆ.

* ಆಗಸ್ಟ್ 28 ರವರೆಗೆ ಮಾತ್ರವೇ ಸಂಚರಿಸಬೇಕಿದ್ದ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ತಿರುವನಂತಪುರಂ ನಾರ್ತ್ ವಿಶೇಷ ರೈಲು (06555) ವಿಸ್ತರಣೆಗೊಂಡ ಸೆಪ್ಟಂಬರ್ 4 ರಿಂದ 25ರವರೆಗೂ ಸೇವೆ ಒದಗಿಸಲಿದೆ.

* ಆಗಸ್ಟ 30ರವರೆಗೆ ಸಂಚರಿಸಲು ನಿಗದಿಪಡಿಸಲಾಗಿದ್ದ ತಿರುವನಂತಪುರಂ ನಾರ್ತ್-ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ವಿಶೇಷ ರೈಲು (06556) ಸೇವೆಯು ಸೆಪ್ಟಂಬರ್ 06 ರಿಂದ 27 ವಿಸ್ತರಿಸಲಾಗಿದೆ.

ಪ್ರಯಾಣಿಕರಿಗೆ ಗುಡ್‌ನ್ಯೂಸ್: 'ಸಂಪರ್ಕ ಕ್ರಾಂತಿ'ಗೆ ಹೆಚ್ಚುವರಿ ಬೋಗಿ

ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು, ನೈರುತ್ಯ ರೈಲ್ವೆಯು ಆಗಸ್ಟ್ 14 ರಂದು ಹೊರಡುವ ಯಶವಂತಪುರ - ಹಜರತ್ ನಿಜಾಮುದ್ದೀನ್ ಎಕ್ಸ್'ಪ್ರೆಸ್ (ಸಂಪರ್ಕ ಕ್ರಾಂತಿ) ರೈಲು (12649) ಒಂದು ಹೆಚ್ಚುವರಿ ಸ್ಲೀಪರ್ ಕ್ಲಾಸ್ ಬೋಗಿಯನ್ನು ಜೋಡಿಸಿ ಕಾರ್ಯಾಚರಣೆ ನಡೆಸಲು ತೀರ್ಮಾನಿಸಲಾಗಿದೆ.

ರೈಲುಗಳ ವೇಳಾಪಟ್ಟಿ ಪರಿಷ್ಕರಣೆ

ದಕ್ಷಿಣ ರೈಲ್ವೆಯು ಮುಂದಿನ 2026 ಅಕ್ಟೋಬರ್ 07 ರಿಂದ ಜಾರಿಗೆ ಬರುವಂತೆ, ಜೋಲಾರ್'ಪೇಟೆಯಲ್ಲಿ ಪುರಚ್ಚಿ ತಲೈವರ್ ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್-ಅಶೋಕಪುರಂ ಕಾವೇರಿ ಎಕ್ಸ್'ಪ್ರೆಸ್ ರೈಲು (16021) ಮತ್ತು ತಿರುಪತಿ-ಚಾಮರಾಜನಗರ ಎಕ್ಸ್'ಪ್ರೆಸ್ ರೈಲು (16220) ಆಗಮನ ಹಾಗೂ ನಿರ್ಗಮನ ಸಮಯ ಪರಿಷ್ಕರಿಸಿದೆ.

ಪ್ರಸ್ತು ರೈಲು (16021) 00:45/00:50 ಗಂಟೆಗೆ ಬದಲಾಗಿ 00:35/00:40 ಗಂಟೆಗೆ ಬಂದು ನಿರ್ಗಮಿಸಲಿದೆ. ಹಾಗೂ ಎರಡನೇ ರೈಲು (16220) ಪ್ರಸ್ತುತ 01:08/01:10 ಗಂಟೆಗೆ ಬದಲಾಗಿ 00:58/01:00 ಗಂಟೆಗೆ ಬಂದು ತೆರಳಲಿದೆ ಎಂದು ಪ್ರಕಟಣೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+