• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕನ್ನಡದ ಕೈ ಕಾಲು ಸೊಂಟ ಮುರಿತ

By * ಉಮೇಶ್ ಸುಬ್ರಮಣ್ಯಂ, ಬೆಂಗಳೂರು
|
ಕನ್ನಡದ ಬಗ್ಗೆ ಆಸಕ್ತಿ ಇರುವ ಎಲ್ಲರಿಗೂ ನಮಸ್ಕಾರಗಳು. ಕನ್ನಡವನ್ನು ಬೆಳೆಸುವುದು ಇರಲಿ, ಉಳಿಸುವುದೇ ದೊಡ್ಡ ಕೆಲಸವಾಗಿದೆ ಇವತ್ತು. ಇಲ್ಲಿ ಕೆಲವು ವಿಷಯಗಳನ್ನು, ಕನ್ನಡದ ಹಿತದೃಷ್ಟಿಯಿಂದ ಬರೆಯುತಿದ್ದೇನೆ. ನಾನು ಯಾವ ಗು೦ಪಿಗೂ, ಯಾವ ರಾಜಕೀಯ ಹಿತಾಸಕ್ತಿಯನ್ನೂ ಇಟ್ಟುಕೊಂಡವನಲ್ಲ. ಕನ್ನಡವನ್ನು ದಿನೇ ದಿನೇ ಹೇಗೆ ಮೂಲೆಗುಂಪು ಮಾಡಲಾಗುತ್ತಿದೆ ಎನ್ನುವುದನ್ನು ಕಳವಳದಿಂದ ಗಮನಿಸುತ್ತಿರುವ ಯಕಶ್ಚಿತ್ ಆದರೆ ಉತ್ಸಾಹಿ ಕನ್ನಡಿಗ ಮಾತ್ರ. ಕನ್ನಡಕ್ಕೆ ಉಂಟಾಗುತ್ತಿರುವ ಕೆಲವು ಅನ್ಯಾಯಗಳತ್ತ ಬೊಟ್ಟು ಮಾಡಿ ತೋರಿಸುವುದೇ ಈ ಕೆಲವು ಟಿಪ್ಪಣಿಗಳು ಉದ್ದೇಶ.

1) ನಮ್ಮ ಊರು ಬೆಂಗಳೂರು

ಈಗ ನಮ್ಮ ಊರು ಅಧಿಕೃತವಾಗಿ ಬೆಂಗಳೂರು ಆಗಿದೆ ಆದರೆ ಎಲ್ಲಾ ಕೇಂದ್ರ ಸರಕಾರೀ ಕಛೇರಿಗಳಲ್ಲಿ ಇನ್ನೂ ಅದು ಬ್ಯಾಂಗಲೋರ್ ಆಗೇ ಉಳಿದಿದೆ. ಇದನ್ನು ಸರಿಪಡಿಸಲು ಯಾವ ಹೋರಾಟಗಾರರು ಅಥವಾ ಸರಕಾರೀ ಸ೦ಸ್ಥೆ ಪ್ರಯತ್ನ ಪಟ್ಟಿಲ್ಲ.'ಬಾಂಬೆ' ಎಂದು ಕರೆದಾಗ, ಅದನ್ನು ಚಿತ್ರದಲ್ಲಿ ಸರಿಯಾಗಿ 'ಮುಂಬೈ' ಎಂದು ಹೇಳಿಸಲು ಹೋರಾಡಿದ ಮಹಾರಾಷ್ಟ್ರದ ಜನತೆಗೆ ಒಂದು ಕೈ ಮುಗಿಯೋಣ.

2) ದ, ಧ, ಬ, ಭ, ನ, ಣಗಳ ವ್ಯತ್ಯಾಸವೇ ಗೊತ್ತಿಲ್ಲ

ಭಿತ್ತಿಪತ್ರಗಳು, ಶುಭಾಶಯ ಕೋರುವ ಹಲವು ಜಾಹಿರಾತುಗಳನ್ನು ನೋಡಿದಾಗ ಕನ್ನಡದ ಕೈ ಕಾಲು ಸೊಂಟ ಮುರಿಯುವ ಕೆಲಸವನ್ನು ನಾವೇ ಮಾಡುತ್ತಿದ್ದೇವೆ ಎನಿಸುತ್ತದೆ. ಕಾರ್ಪೋರೇಟ್ ಸಂಸ್ಕೃತಿಯ, ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ದ, ಧ, ಬ, ಭ, ನ, ಣಗಳ ವ್ಯತ್ಯಾಸ ಗೊತ್ತಿಲ್ಲದವರೇ ಹೆಚ್ಚಾಗಿ ತುಂಬಿಕೊಂಡಿದ್ದಾರೆ. ಅವರು ಬೇಕಾಬಿಟ್ಟಿ ಬಳಸುವ ದೀರ್ಘ, ಹ್ರಸ್ವ, ಅಲ್ಪ ಮಹಾ ಪ್ರಾಣಗಳನ್ನು ಓದಿದರೆ ಪ್ರಾಣವೇ ಹೋದಂತಾಗುತ್ತದೆ. ಕೆಲವು ಉದಾಹರಣೆಗಳು ಹೀಗಿವೆ :

ಹಾರ್ದಿಕಕ್ಕೆ ಬದಲಾಗಿ ಹಾರ್ಧಿಕ ; ಆಶೀರ್ವಾದಕ್ಕೆ ಬದಲಾಗಿ ಆರ್ಶೀವಾದ; ಶುಭಾಶಯ ಹೇಳಬೇಕಾದ ಕಡೆ ಶುಭಾಷಯ, ಶುಭಶಯ. ದಿಗಂಬರ ಧಿಗ೦ಬರನಾಗುವುದು, ಅಂಬಾ ಅ೦ಭಾ ಆಗುವುದು, ವಿಷ್ಣುವರ್ಧನ ವಿಷ್ಣುವರ್ದನ್ ಎಂದಾಗುವುದು, ಕಡೆಯಪಕ್ಷ ಕನ್ನಡ ಬಳಗವೇ ಕನ್ನಡ ಭಳಗ ಆಗುವುದನ್ನು ನನ್ನ ಅನೇಕ ಕನ್ನಡ ಮಿತ್ರರು ಗಮನಿಸಿರಬಹುದು.

ಈ ಬಗೆಯ ಶಬ್ದ ಪ್ರಯೋಗಗಳು ಅವ್ಯಾಹತವಾಗಿ ಸಾಗುತ್ತಿರುವುದನ್ನು ನೋಡಿದರೆ ಕನ್ನಡದ ಪದಗಳ ಆಯಸ್ಸು ಕಡಿಮೆ ಆಗುತ್ತಿದೆ ಎಂದೆನಿಸುತ್ತದೆ. ದ, ಬ, ನ ಅಕ್ಷರಗಳು ಒಂದೊಂದೇ ಮರೆಯಾಗುವ ಕಾಲ ಬಂದಿದೆ. ಇದೆಲ್ಲಾ ನೋಡಿದಾಗ, [ಬರೆಯುವವರು ಎಲ್ಲಾ ಅನ್ಯ ಭಾಷೆಯವರೇ ಹೆಚ್ಚು ಎಂದು ಎಲ್ಲರಿಗೂ ಗೊತ್ತು] ಬರೆಸಬೇಕಾದವರೇ ಗಮನಿಸದಿದ್ದರೆ ಕನ್ನಡಕ್ಕೆ ಅವಮಾನ ಅಲ್ಲವೇ? ತಮ್ಮ ಹೆಸರಿನಲ್ಲಿ ಬರೆದ ಭಿತ್ತಿ ಪತ್ರ, ಫಲಕ ಸರಿ ಇದೆಯೇ ಎಂದು ಗಮನಿಸಲು ಕೂಡ ನಮ್ಮ್ಬ ನಾಯಕರಿಗೆ ಪುರುಸೊತ್ತಿಲ್ಲವೇ.

ಇತ್ತೀಚಿಗೆ ಬಿಬಿಎಂಪಿ ಚುನಾವಣೆಯಲ್ಲಿ ಗೆದ್ದವರು ಕ್ಷೇತ್ರದ ಮತ ಬಾಂಧವರಿಗೆ "ಹಾರ್ಧಿಕ ಕೃತಘ್ನತೆ" ಅರ್ಪಿಸುವುದು ನೋಡಿದಾಗ ಎಷ್ಟು ನಿಜ ಹೇಳುತ್ತಿದ್ದಾರೆ ಎನಿಸುತ್ತದೆ. ಕನ್ನಡ ಸಾಹಿತ್ಯ ಪರಿಷತ್ತು , ಕನ್ನಡದ ಅಭಿವೃದ್ದಿ ಪ್ರಾಧಿಕಾರ, ಕನ್ನಡ ಹೋರಾಟಗಾರರು ಈ ಮೂಲಭೂತ ವಿಷಯಗಳನ್ನು ಗಮನಿಸುತ್ತಿಲ್ಲ. ಫಲಕಗಳನ್ನು ಬರೆಯುವ ಜನಗಳಿಗೆ ಕನ್ನಡದ ಸರಿಯಾದ ಪದ ಹೇಳಿಕೊಡಲು ಕಾರ್ಯಾಗಾರ ನಡೆಸಲು ಯಾಕೆ ಮುಂದಾಗಿಲ್ಲ? ಕನ್ನಡದ ಪತ್ರಿಕಾರಂಗದವರು, ದೂರದರ್ಶನದ ವಿವಿಧ ವಾಹಿನಿಯವರು ಸರಿಯಾದ ಕನ್ನಡ ಉಪಯೋಗಿಸಬೇಕು ಹಾಗೂ ಜಾಹಿರಾತಿನಲ್ಲಿ ಇರುವ ಕನ್ನಡದ ತಪ್ಪುಗಳನ್ನೂ ಸರಿಪಡಿಸಬೇಕು. [ಉದಾ: ಮೆಗಾ ಅನ್ನುವುದನ್ನು ಮೇಗಾ ಅನ್ನುವುದು]

3 ದೆಹಲಿಯಲ್ಲಿ ಕನ್ನಡದ ಸ್ಥಾನಕ್ಕೆ ಚ್ಯುತಿ

ಇತ್ತೀಚೆಗೆ ದೆಹಲಿಯಲ್ಲಿ ಇಂದಿರಾ ಗಾಂಧೀ ಸ್ಮಾರಕ ನೋಡಲು ಹೋಗಿದ್ದೆ . ಕನ್ನಡದ ಜನತೆ 1977ರಲ್ಲಿ ಇಂದಿರಾ ಅವರಿಗೆ ರಾಜಕೀಯ ಮರುಜನ್ಮ ನೀಡಿತು. ಸ್ಮಾರಕದಲ್ಲಿ ಇಂದಿರಾ ಅವರ ಜೀವನ ಮರಣಕ್ಕೆ ಸಂಬಂಧಿಸಿದ ವಾರ್ತೆಗಳ ಬಗ್ಗೆ ವಿವಿಧ ಪತ್ರಿಕೆಗಳ ಪುಟಗಳನ್ನೂ ಅಲ್ಲಿ ಪ್ರದರ್ಶಿಸಿದ್ದಾರೆ. ತೆಲಗು, ತಮಿಳು ಪತ್ರಿಕಾ ಪುಟಗಳಿಗೆ ಪ್ರಮುಖ ಸ್ಥಾನ ನೀಡಿದ್ದಾರೆ. ಕನ್ನಡದ ಒಂದೂ ಪತ್ರಿಕೆಯ ಒಂದು ಪುಟ ಕೂಡ ಅಲ್ಲಿಲ್ಲ. ನಮ್ಮ ರಾಜಕೀಯ ನಾಯಕರು, ಅದರಲ್ಲೂ ಅವರ ಪಕ್ಷಕ್ಕೆ ಸೇರಿದವರು ಇದರ ಬಗ್ಗೆ ಮಾತಾಡುವ ಧೈರ್ಯ ಮಾಡಿಲ್ಲ. ಈ ಮಾತು ರಾಜಕೀಯಕ್ಕೆ ಸಂಬಂಧಿಸಿದ್ಧಲ್ಲ ಕನ್ನಡಕ್ಕೆ ನ್ಯಾಯವಾಗಿ ಸಿಗಬೇಕಾದ ಸ್ಥಾನ ಸಿಗಲಿಲ್ಲವಲ್ಲ ಎಂದು ಸಂಕಟ. ಒಂದು ಪತ್ರಿಕೆಗೆ, ಓದುಗರ ಪತ್ರವಾಗಿ ಇದನ್ನು ಬರೆದೆ, ಆದರೆ ಪ್ರಕಟವಾಗಲಿಲ್ಲ. ಈಗಲಾದರೂ ಈ ಸ್ಮಾರಕದಲ್ಲಿ ಕನ್ನಡಕ್ಕೆ ಸ್ಥಾನ ದೊರೆಯುವ ಪ್ರಯತ್ನವನ್ನು ಎಲ್ಲಾ ರೀತಿಯ ನಾಯಕರೂ ಮಾಡುವರೆಂದು ಆಶಿಸಬಹುದೇ?

ಮುಂದೆ ಓದಿ : ನಮ್ಮ ಬಸ್ಸುಗಳಲ್ಲೇ ಕನ್ನಡಕ್ಕೆ ಜಾಗವಿಲ್ಲ »

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more