ಚಿತ್ರಹಾರವನು ನೋಡಲು ಬಾರೆ..
(ಪುರಂದರದಾಸರ ಕ್ಷಮೆ ಕೋರಿ)
ಎದುರು ಮನೆ ಚೆಲುವೆ ಬಾರಮ್ಮಾ
ನಮ್ಮಮ್ಮ ಮನೆಯಲ್ಲಿಲ್ಲ (ಪಲ್ಲವಿ)
ಇಂದಿನ ಪೇಪರ್ ಓದಲು ಬಾರೆ
ಹೆಪ್ಪಿಗೆ ಮೊಸರನು ಕೇಳಲು ಬಾರೆ..
ಶುಕ್ರವಾರದ ಸಂಜೆಯ ವೇಳೆಗೆ
t;br/>
ಎದುರು ಮನೆ ಚೆಲುವೆ ಬಾರಮ್ಮಾ
ನಮ್ಮಮ್ಮ ಮನೆಯಲ್ಲಿಲ್ಲ (ಪಲ್ಲವಿ)
ಕಾಲೇಜಿಗೆ ಹೋಗುವ ನೆಪವನು ಮಾಡಿ
ಕಾಮತ್ ಹೋಟಲ್ ಹತ್ತಿರ ಬಾರೆ..
ಸ್ಪೆಷಲ್ ರೂಂನಲ್ಲಿ ಕುಳಿತುಕೊಂಡು
ಮಸಾಲೆದೋಸೆ ತಿನ್ನುವ ಬಾರೆ
ಎದುರು ಮನೆ ಚೆಲುವೆ ಬಾರಮ್ಮಾ
ನಮ್ಮಮ್ಮ ಮನೆಯಲ್ಲಿಲ್ಲ (ಪಲ್ಲವಿ)
ಇಂದಿನ ಜನುಮಕು ಮುಂದಿನ ಜನುಮಕು
ನನ್ನ ಜನುಮಕು ನೀನೇ ಬಾರೆ..
ಅಪ್ಪಅಮ್ಮ ಒಪ್ಪದಿದ್ದರೆ
ಸೂಟ್‌ಕೇಸ್ ತಗೊಂಡು ಬಸ್ಟಾಂಡ್‌ಗೆ ಬಾರೆ
ಎದುರು ಮನೆ ಚೆಲುವೆ ಬಾರಮ್ಮಾ
ನಮ್ಮಮ್ಮ ಮನೆಯಲ್ಲಿಲ್ಲ (ಪಲ್ಲವಿ)












Click it and Unblock the Notifications